Sania Mirza: ಭಾರತೀಯ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಸಾನಿಯಾ ಮಿರ್ಜಾ
ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಪ್ರೇಮಿಗಳ (Indian Cricket Lovers) ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan and Australia Semi Final Match) ನಡುವಿನ T20 ವಿಶ್ವಕಪ್ 2021 ಸೆಮಿಫೈನಲ್ನಲ್ಲಿ ಹಾಜರಿದ್ದ ಅವರ ನಡೆ ಟೀಕೆಗೆ ಕಾರಣವಾಗಿದೆ. (Photos: Twitter)
ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಪತಿ ಶೋಯೆಬ್ ಮಲಿಕ್ಗೆ ಹುರಿದುಂಬಿಸಿದ ನಡೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
2/ 5
ಪಾಕಿಸ್ತಾನದ ಕ್ರಿಕೆಟಿಗನ ಮದುವೆಯಾದರೂ ಭಾರತೀಯಳಾಗಿ ದೇಶದ ಪರವಾಗಿ ಆಡವಾಡುತ್ತಿರುವ ಪಾಕಿಸ್ತಾನದ ಪಂದ್ಯದ ವೇಳೆ ಹಾಜರಾಗಿದ್ದು, ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರ ನಿಷ್ಠೆ ಮತ್ತು ಬೆಂಬಲವನ್ನು ಪ್ರಶ್ನಿಸಿದ್ದಾರೆ
3/ 5
ಪಂದ್ಯದ ವೇಳೆ ಸಾನಿಯಾ ಹಾಜರಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದರು. ಈ ವೇಳೆ ಹಲವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸಾನಿಯಾ ಬೆಂಬಲಿಸಿದ್ದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಕರೆದು ಟ್ವೀಟ್ ಮಾಡಿದ್ದಾರೆ.
4/ 5
ಸಾನಿಯಾ ಏಕೆ ಈ ರೀತಿ ಬೆಂಬಲ ನೀಡುತ್ತಿದ್ದಾಳೆ ಎಂದು ಕೆಲವರು ಪ್ರಶ್ನಿಸಿದರೆ, ಕೆಲವರು ಟೆನಿಸ್ ಆಡುವಾಗ ಆಕೆಯ ಪತಿ ಶೋಯೆಬ್ ಮಲಿಕ್ ಹೀಗೆ ಬೆಂಬಲಿಸಿದ್ದಾರಾ ಎಂದು ಕೇಳಿದ್ದಾರೆ
5/ 5
ಇನ್ನು ಅನೇಕರು ಸಾನಿಯಾ ಹಾಜರನ್ನು ಮತ್ತೊಂದು ರೀತಿ ವ್ಯಂಗ್ಯ ಮಾಡಿದ್ದು, ಸೆಮಿ ಫೈನಲ್ನಲ್ಲಿದ್ದ ಏಕೈಕ ಭಾರತೀಯೇ ಸಾನಿಯಾ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.