Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

ಈ ವರ್ಷಾರಂಭದಲ್ಲಿ ನಿವೃತ್ತಿ ಘೋಷಿಸಿರುವ ಇರ್ಫಾನ್ ಪಠಾಣ್, ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ವೃತ್ತಿಜೀವನದ ನಡುವೆ ಜಮ್ಮು-ಕಾಶ್ಮೀರ ತಂಡದ ಕೋಚ್​ ಆಗಿ ಯುವ ಪ್ರತಿಭೆಗಳನ್ನು ರೂಪಿಸುವ ಮಹತ್ವದ ಜವಾಬ್ದಾರಿಯನ್ನು ಪಠಾಣ್ ವಹಿಸಿಕೊಂಡಿದ್ದರು.

First published:

  • 110

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಟೀಮ್ ಇಂಡಿಯಾದ ಸ್ವಿಂಗ್ ಮಾಂತ್ರಿಕನಾಗಿ ಗುರುತಿಸಿಕೊಂಡಿದ್ದ ಇರ್ಫಾನ್ ಪಠಾಣ್​ರನ್ನು ಆಲ್​ರೌಂಡರ್​ ಆಗಿ ಪರಿವರ್ತಿಸಿದ್ದು ಅಂದಿನ ಕೋಚ್ ಗ್ರೇಗ್ ಚಾಪೆಲ್ ಎಂಬ ಮಾತಿದೆ.

    MORE
    GALLERIES

  • 210

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಆದರೆ ಅದಕ್ಕೂ ಮುನ್ನವೇ ಇರ್ಫಾನ್ ಪಠಾಣ್​ರನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಲು ಸಲಹೆ ನೀಡಿದ್ದು ಮಾಸ್ಟರ್ ಬ್ಲಾಸ್ಟರ್ ಎಂಬ ವಿಚಾರವನ್ನು ಎಡಗೈ ವೇಗಿ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 310

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಹೌದು, ನಾಗಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ಪಂದ್ಯದಲ್ಲಿ ಸ್ಪೋಟಕ 83 ರನ್ ಬಾರಿಸಿ ತಂಡದ ಮೊತ್ತ 350ರ ಗಡಿ ಮುಟ್ಟುವಂತೆ ಮಾಡಿದ್ದರು.

    MORE
    GALLERIES

  • 410

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಪರಿಣಾಮ ಈ ಪಂದ್ಯದಲ್ಲಿ ಭಾರಯ 152 ರನ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಅಂದು ಪಠಾಣ್​ರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸುವುದು ಸೂಕ್ತ ಎಂದು ನಾಯಕ ರಾಹುಲ್ ದ್ರಾವಿಡ್​ಗೆ ಮನವರಿಕೆ ಮಾಡಿಕೊಟ್ಟಿದ್ದು ಸಚಿನ್ ತೆಂಡೂಲ್ಕರ್.

    MORE
    GALLERIES

  • 510

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಈ ಬಗ್ಗೆ ಮಾತನಾಡಿರುವ ಪಠಾಣ್, ಅನೇಕರು ನನ್ನ ವೃತ್ತಿ ಜೀವನವನ್ನು ಹಾಳು ಮಾಡಿರುವುದು ಗ್ರೇಗ್ ಚಾಪೆಲ್ ಎನ್ನಲಾಗುತ್ತಿದೆ. ಬೌಲಿಂಗ್ ಹೊರತಾಗಿ 3ನೇ ಕ್ರಮಾಂಕದಲ್ಲಿ ಕೋಚ್ ಕಣಕ್ಕಿಳಿಸಿ ತಪ್ಪು ಮಾಡಿದ್ರು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಅದು ಕೋಚ್ ನಿರ್ಧಾರವಾಗಿರಲಿಲ್ಲ.

    MORE
    GALLERIES

  • 610

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಅದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ನನ್ನ ಸಾಮರ್ಥ್ಯ ಗುರುತಿಸಿದ್ದರು. ಅಂದಿನ ನಾಯಕ ದ್ರಾವಿಡ್ ಅವರಿಗೆ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸುವಂತೆ ತಿಳಿಸಿದ್ದರು. ಏಕೆಂದರೆ ನನ್ನಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯವಿರುವುದು ಸಚಿನ್ ಮನಗಂಡಿದ್ದರು.

    MORE
    GALLERIES

  • 710

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಇರ್ಫಾನ್ ಪಠಾಣ್​ರನ್ನು ಮೂರನೇ ಕ್ರಮಾಂಕದಲ್ಲಿ ಆಡಿರುವುದರಿಂದ ಉತ್ತಮವಾಗಿ ಬ್ಯಾಟ್ ಮಾಡಬಲ್ಲ. ಹಾಗೆಯೇ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲ ಎಂದು ಸಚಿನ್ ಸಲಹೆ ನೀಡಿದ್ದರು ಎಂದು ಇರ್ಫಿ ತಿಳಿಸಿದರು.

    MORE
    GALLERIES

  • 810

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಇನ್ನು ಗ್ರೇಗ್ ಚಾಪೆಲ್ ನನ್ನ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರ ಎಂದು ಹೇಳುವೆ. ಮೊದಲನೆಯದಾಗಿ ಅವರು ಭಾರತೀಯರಲ್ಲ. ಹೀಗಾಗಿ ಅವರನ್ನು ಟೀಕೆ ಮಾಡುವುದು ಸುಲಭ ಎಂದು ಪಠಾಣ್ ಹೇಳಿದರು.

    MORE
    GALLERIES

  • 910

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    2007ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಡಗೈ ವೇಗಿ ಕೊನೆಯ ಬಾರಿ ಭಾರತದ ಪರ ಆಡಿದ್ದು 2012 ರಲ್ಲಿ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದರೂ ಪಠಾಣ್​ಗೆ ಆ ಬಳಿಕ ಅವಕಾಶ ಸಿಕ್ಕಿರಲಿಲ್ಲ.

    MORE
    GALLERIES

  • 1010

    Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

    ಇತ್ತ ದೇಶೀಯ ಪಂದ್ಯಗಳಲ್ಲಿ ತೊಡಗಿಸಿಕೊಂಡರೂ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಾಗಲಿಲ್ಲ. ಇದರ ನಡುವೆ ಜಮ್ಮು ಕಾಶ್ಮೀರ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ ಪಠಾಣ್ ಈ ವರ್ಷಾರಂಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

    MORE
    GALLERIES