ನನ್ನ ತಂಗಿಯನ್ನ ಕಣ್ಣೆತ್ತಿ ನೋಡ್ಬೇಡಾ! ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ್ರು ಯುವರಾಜ್ ಸಿಂಗ್!
Rohit Sharma: ಟೀಂ ಇಂಡಿಯಾಧ ಕ್ರಿಕೆಟಿಗ ರೋಹಿತ್ ಶರ್ಮಾ 13 ಡಿಸೆಂಬರ್ 2015 ರಂದು ರಿತಿಕಾ ಸಜ್ದೆ ಅವರನ್ನು ವಿವಾಹವಾದರು. ಆದರೆ ಅದಕ್ಕೂ ಮೊದಲು ಅವರು ಮಾಜಿ ಭಾರತೀಯ ಆಲ್ ರೌಂಡರ್ ಯುವರಾಜ್ ಸಿಂಗ್ ಅವರಿಂದ ಬೆದರಿಕೆಗಳನ್ನು ಎದುರಿಸಬೇಕಾಯಿತು. ಈ ವಿಷಯವನ್ನು ಸ್ವತಃ ರೋಹಿತ್ ಶರ್ಮಾ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಹಿಂದೊಮ್ಮೆ ರೋಹಿತ್ ಶರ್ಮಾ ಅವರಿಗೆ ಬೆದರಿಕೆ ಹಾಕಿದ್ದರು. ರೋಹಿತ್ ಶರ್ಮಾ ಅವರು ಯುವರಾಜ್ ಸಿಂಗ್ ಅವರ ಸಹೋದರಿಯ ಕಡೆಗೆ ತಿರುಗಿ ನೋಡಿದ್ದರಂತೆ. ಈ ಕಾರಣಕ್ಕೆ ಯುವಿ ಅವಳ ಕಡೆ ನೋಡಬೇಡ ಅವಳು ನನ್ನ ತಂಗಿ ಎಂದು ರೋಹಿತ್ಗೆ ಹೇಳಿದ್ದಾರೆ.
2/ 6
ರಿತಿಕಾ ಸಜ್ದೆ ಮತ್ತು ಯುವರಾಜ್ ಸ್ವಂತ ಅಣ್ಣ- ತಂಗಿ ಅಲ್ಲದಿದ್ದರು ಅವರಿಬ್ಬರ ನಡುವಿನ ಸಂಬಂಧ ಅಣ್ಣ-ತಂಗಿಯಂತಿದೆ. ಕ್ರಿಕೆಟಿಗ ರೋಹಿತ್ ಮತ್ತು ರಿತಿಕಾ ಸಜ್ದೆ ಮದುವೆಯಾಗಿ 6 ವರ್ಷಗಳಾಗಿವೆ. ಆದರೆ ಈ ಜೋಡಿಯ ಹೆಸರು ಬಂದಾಗಲೆಲ್ಲಾ, ಯುವರಾಜ್ ಸಿಂಗ್ ಅವರ ಬೆದರಿಕೆ ಖಂಡಿತವಾಗಿಯೂ ನೆನಪಾಗುತ್ತದೆ.
3/ 6
ಯುವರಾಜ್ ಮತ್ತು ರಿತಿಕಾ ಅಣ್ಣ-ತಂಗಿಯ ಸಂಬಂಧ ಹೊಂದಿದ್ದಾರೆ. ಆಕೆ ಯುವಿಗೆ ರಾಖಿ ಕಟ್ಟುತ್ತಾಳೆ. ರೋಹಿತ್ ಮತ್ತು ರಿತಿಕಾ ಮೊದಲ ಬಾರಿಗೆ ಭೇಟಿಯಾದಾಗ ಯುವರಾಜ್ ಮತ್ತು ಇರ್ಫಾನ್ ಪಠಾಣ್ ಅವರಿಬ್ಬರ ಚಿತ್ರೀಕರಣ ಮಾಡಿದ್ದರು.
4/ 6
ಒಂದು ದಿನ ಯುವರಾಜ್ ರೋಹಿತ್ ಅವರನ್ನು ಭೇಟಿಯಾಗಲು ಬಂದಿದ್ದರು. ಹೀಗೆ ಮಾತನಾಡುತ್ತಾ ಇದ್ದ ವೇಳೆ ರೋಹಿತ್ ರಿತಿಕಾ ಕಡೆಗೆ ಒಮ್ಮೆ ತಿರುಗಿ ನೋಡಿದ್ದರಂತೆ, ಅದಕ್ಕೆ ಯುವರಾಜ್ ಸಿಂಗ್ - ಅವಳತ್ತ ನೋಡಬೇಡ, ಅವಳು ನನ್ನ ಸಹೋದರಿ ಎಂದು ತಮಾಷೆಯಾಗಿ ಹೇಳಿದ್ದರಂತೆ.
5/ 6
ಈ ವಿಚಾರವನ್ನು ರೋಹಿತ್ ಅವರು ಗೌರವ್ ಕಪೂರ್ ಅವರ 'ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್' ಶೋನಲ್ಲಿ ಬಹಿರಂಗಪಡಿಸಿದ್ದಾರೆ, ಸುಮಾರು 3 ವರ್ಷ ಹಿಂದೆ ಯುವಿ ಮನೆಗೆ ಬಂದಿದ್ದಾಗ ಈ ಮಾತನ್ನು ನನಗೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.
6/ 6
ರೋಹಿತ್ ಮತ್ತು ರಿತಿಕಾ ಪ್ರೀತಿಸಿ ಮದುವೆಯಾದ ಜೋಡಿ. ಇಬ್ಬರು 13 ಡಿಸೆಂಬರ್ 2015 ರಂದು ವಿವಾಹವಾದರು. ರಿತಿಕಾ ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.