Rohit Sharma: ಖೇಲ್ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸು
ಈ ಹಿಂದೆ ಸಚಿನ್ ತೆಂಡೂಲ್ಕರ್ (1998), ಮಹೇಂದ್ರ ಸಿಂಗ್ ಧೋನಿ (2007) ಮತ್ತು ವಿರಾಟ್ ಕೊಹ್ಲಿ(2018) ಗೆ ಖೇಲ್ ರತ್ನ ಗೌರವ ನೀಡಲಾಗಿತ್ತು.
News18 Kannada | August 18, 2020, 6:30 PM IST
1/ 6
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ 4 ಮಂದಿಯ ಹೆಸರುಗಳನ್ನು ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದೆ.
2/ 6
ಈ ಪಟ್ಟಿಯಲ್ಲಿ ಖ್ಯಾತ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹಾಗೂ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಅವರ ಹೆಸರುಗಳಿವೆ.
3/ 6
ವೀರೇಂದ್ರ ಸೆಹವಾಗ್ ಹಾಗೂ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಮಂಗಳವಾರ ಕ್ರೀಡಾ ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ಸಭೆ ಸೇರಿ ಅಂತಿಮ ಹೆಸರುಗಳನ್ನು ಆಯ್ಕೆ ಮಾಡಿದರು.
4/ 6
ಈ ಮೂಲಕ 2016ರ ಬಳಿಕ ಎರಡನೇ ಬಾರಿ ನಾಲ್ವರು ಕ್ರೀಡಾಪಟುಗಳನ್ನು ಖೇಲ್ ರತ್ನ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಬ್ಯಾಡ್ಮಿಟನ್ ತಾರೆ ಪಿ.ವಿ ಸಿಂಧು, ಜಿಮ್ನಾಸ್ಟ್ ದೀಪಾ ಕರ್ಮಕರ್, ಶೂಟರ್ ಜಿತು ರಾಯ್, ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಒಟ್ಟಾಗಿ ಈ ಪ್ರಶಸ್ತಿ ನೀಡಲಾಗಿತ್ತು.
5/ 6
ಹಾಗೆಯೇ ಕಳೆದ ವರ್ಷದ ಖೇಲ್ ರತ್ನ ಪ್ರಶಸ್ತಿ ದೀಪಾ ಮಲಿಕ್ ಮತ್ತು ಬಜರಂಗ್ ಪೂನಿಯಾ ಪಡೆದಿದ್ದರು. ಈ ಬಾರಿ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಕಾಣಿಸಿಕೊಂಡಿರುವುದು ವಿಶೇಷ.
6/ 6
ಹಾಗೆಯೇ ಈ ಪ್ರಶಸ್ತಿಗೆ ಆಯ್ಕೆಯಾದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ (1998), ಮಹೇಂದ್ರ ಸಿಂಗ್ ಧೋನಿ (2007) ಮತ್ತು ವಿರಾಟ್ ಕೊಹ್ಲಿ(2018) ಗೆ ಖೇಲ್ ರತ್ನ ಗೌರವ ಪುರಸ್ಕರಿಸಲಾಗಿತ್ತು.