The Walking Assassin- ಸೈಲೆಂಟ್ ಅಸಾಸಿನ್ ಪದ ಕೇಳಿರುತ್ತೀರಿ. ಆದರೆ, ರಾಬಿನ್ ಉತ್ತಪ್ಪಗೆ ವಾಕಿಂಗ್ ಅಸಾಸಿನ್ ಎಂಬ ಬಿರುದು ಪ್ರಾಪ್ತವಾಗಿದೆ. ಇದಕ್ಕೆ ಕಾರಣ ಇವರು ಸಿಕ್ಸರ್ ಭಾರಿಸುವ ವಿಶೇಷ ಶೈಲಿ. ಧೋನಿಯ ಹೆಲಿಕಾಪ್ಟರ್ ಶಾಟ್ ಇದ್ದಂತೆ ವಾಕಿಂಗ್ ಸಿಕ್ಸ್ ರಾಬೀ ಅವರ ಟ್ರೇಡ್ ಮಾರ್ಕ್ ಶಾಟ್. ಬ್ಯಾಟುಗಾರರು ಮುಂದೆ ಚಿಮ್ಮಿ ಸಿಕ್ಸರ್ ಭಾರಿಸುವುದನ್ನು ನೋಡಿದ್ದೇವೆ. ಆದರೆ, ರಾಬಿನ್ ಉತ್ತಮವಾಗಿ ಸಹಜವಾಗಿ ನಡೆದು ಹೋಗಿ ನೇರ ಸಿಕ್ಸರ್ ಭಾರಿಸುತ್ತಾರೆ. ಅದಕ್ಕೇ ಇವರಿಗೆ ವಾಕಿಂಗ್ ಅಸಾಸಿನ್ ಎಂದು ಕರೆಯುತ್ತಾರೆ.
Debut Match half-century- ರಾಬಿನ್ ಉತ್ತಪ್ಪ 2006ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಅಡಿ ಇಟ್ಟರು. ಆ ಪಂದ್ಯದಲ್ಲಿ ಅವರು 86 ರನ್ ಗಳಿಸಿದರು. ತಮ್ಮ ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆಯುವಂಥ ಆಟ ಆಡಿದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 289 ರನ್ ಗುರಿಯನ್ನು ಭಾರತ ಚೇಸ್ ಮಾಡಲು ರಾಬಿನ್ ಉತ್ತಪ್ಪ ಆಟ ಕೂಡ ಪ್ರಮುಖ ಕಾರಣವಾಗಿತ್ತು.
First Indian to score half-century in T20: ಭಾರತ ತಂಡ 2007ರ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಆ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಒಂದು ಹಂತದಲ್ಲಿ ಸಂಕಷ್ಟದ ಸ್ಥಿತಿಯಲ್ಲಿತ್ತು. ಆಗ ರಾಬಿನ್ ಉತ್ತಪ್ಪ ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಭಾರಿಸಿ ಭಾರತಕ್ಕೆ ಚೇತರಿಕೆ ಕೊಟ್ಟಿದ್ದರು. ಅದು ಭಾರತೀಯ ಆಟಗಾರನೊಬ್ಬ ಟಿ20 ಕ್ರಿಕೆಟ್ನಲ್ಲಿ ಗಳಿಸಿದ ಮೊದಲ ಅರ್ಧಶತಕ ಆಗಿದೆ.
IPL record: ರಾಬಿನ್ ಉತ್ತಪ್ಪ ಐಪಿಎಲ್ನ ಹಲವು ಸೀಸನ್ಗಳಲ್ಲಿ ಅವಿಸ್ಮರಣೀಯ ಎನಿಸುವಂಥ ಪ್ರದರ್ಶನ ನೀಡಿದ್ದಾರೆ. 2014ರಲ್ಲಿ ಅವರು ಕೆಕೆಆರ್ ತಂಡದಲ್ಲಿದ್ದಾಗ ಸತತ 10 ಪಂದ್ಯಗಳಲ್ಲಿ ಅವರು 40ಕ್ಕಿಂತ ಹೆಚ್ಚು ರನ್ ಸ್ಕೋರ್ ಮಾಡಿದ್ದರು. ಈ ದಾಖಲೆಯನ್ನ ಈವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆ ವರ್ಷ ಕೋಲ್ಕತಾ ತಂಡ ಐಪಿಎಲ್ ಚಾಂಪಿಯನ್ ಆಯಿತು. ರಾಬಿನ್ ಉತ್ತಪ್ಪ ಅತಿ ಹೆಚ್ಚು ರನ್ ಗಳಿಸಿದವರಿಗೆ ಕೊಡುವ ಆರೆಂಜ್ ಕ್ಯಾಪ್ ಪಡೆದರು. ಐಪಿಎಲ್ನಲ್ಲಿ ಈ ಡಬಲ್ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಅವರಾಗಿದ್ದಾರೆ.