Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

Harbhajan Singh: 2001 ರ ಟೆಸ್ಟ್​ನಲ್ಲಿ ಹರ್ಭಜನ್ ಬೌಲಿಂಗ್ ಹೇಗಿತ್ತು ಎಂಬುದಕ್ಕೆ 3 ಟೆಸ್ಟ್​ನಲ್ಲಿ ಭಜ್ಜಿ ಉರುಳಿಸಿದ್ದು ಬರೋಬ್ಬರಿ 32 ವಿಕೆಟ್​ ಉರುಳಿಸಿರುವುದೇ ಸಾಕ್ಷಿ. ಪರಿಣಾಮ ಭಾರತ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು.

First published:

  • 110

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    2001ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಯಾರು ತಾನೆ ಮರೆಯಲು ಸಾಧ್ಯ. ಬಲಿಷ್ಠ ಎರಡು ಪಡೆಗಳ ನಡುವೆ ನಡೆದ ಜಿದ್ದಾಜಿದ್ದಿನ ಟೆಸ್ಟ್​ ಟೂರ್ನಿಯಲ್ಲಿ ಕೊನೆಗೆ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು.

    MORE
    GALLERIES

  • 210

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಭಾರತದಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್​ನಲ್ಲಿ ಸೌರವ್ ಗಂಗೂಲಿ ಹೀನಾಯ ಸೋಲುಣಿಸಿ ಆಸ್ಟ್ರೇಲಿಯಾ ನಾಯಕ ರಿಕಿ ಪಾಟಿಂಗ್ ಕಾಲರ್ ಮೇಲೆತ್ತಿದ್ದರು.

    MORE
    GALLERIES

  • 310

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಆದರೆ ನಂತರದ ಎರಡು ಟೆಸ್ಟ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಆಟಗಾರರು ಬಲಿಷ್ಠ ಆಸ್ಟ್ರೇಲಿಯಾಗೆ ಸೋಲುಣಿಸಿ ಕುಣಿದು ಕುಪ್ಪಳಿಸಿದ್ದರು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಟರ್ಬನೇಟರ್ ಖ್ಯಾತಿಯ ಸ್ಪಿನ್ನರ್ ಹರ್ಭಜನ್ ಸಿಂಗ್.

    MORE
    GALLERIES

  • 410

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಈ ಸರಣಿಯಲ್ಲಿ ಆಸ್ಟ್ರೇಲಿಯಾ ನಾಯಕ ಪಾಟಿಂಗ್​ಗೆ ಭಜ್ಜಿ ಐದು ಬಾರಿ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಐತಿಹಾಸಿಕ ಗೆಲುವಿನ ಬಗ್ಗೆ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ.

    MORE
    GALLERIES

  • 510

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಅದು 2001 ರ ಟೆಸ್ಟ್ ಸರಣಿ. ನನ್ನ ಎಸೆತಗಳನ್ನು ಮುಟ್ಟಲು ಕೂಡ ಆಸೀಸ್ ನಾಯಕ ಪಾಟಿಂಗ್ ಹೆದರುತ್ತಿದ್ದರು. ನಾನು ಬೌಲಿಂಗ್ ಮಾಡಲು ಬಂದರೆ ಸಾಕು. ಆತ ನನ್ನ ಮುಖ ನೋಡಿ ಔಟಾಗುತ್ತಿದ್ದ ಎಂದು ಭಜ್ಜಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

    MORE
    GALLERIES

  • 610

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಪಾಟಿಂಗ್​ಗೆ ನಾನು ಬೌಲಿಂಗ್ ಮಾಡುವಾಗ ಚೆಂಡಿನ ಮೇಲೆ ಫೋಕಸ್ ಮಾಡಲಾಗುತ್ತಿರಲಿಲ್ಲ. ಒಂದು ವೇಳೆ ಅವರು ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಲು ಯಶಸ್ವಿಯಾಗಿದ್ರೆ ಅಷ್ಟು ಬಾರಿ ನನ್ನ ಎಸೆತದಲ್ಲೇ ಔಟ್ ಆಗುತ್ತಿರಲಿಲ್ಲ ಎಂದು ಹರ್ಭಜನ್ ತಿಳಿಸಿದರು.

    MORE
    GALLERIES

  • 710

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಈ ಸರಣಿಯಲ್ಲಿ 5 ಇನಿಂಗ್ಸ್​ನಲ್ಲಿ ಪಾಟಿಂಗ್ ಗಳಿಸಿದ್ದು 0, 6, 0, 0 ಮತ್ತು 11 ರನ್. ಐದು ಬಾರಿ ಕೂಡ ಭಜ್ಜಿಗೆ ವಿಕೆಟ್ ಒಪ್ಪಿಸಿದ್ದರು. ಇದಲ್ಲದೆ ಪಾಟಿಂಗ್ ಹಾಗೂ ಹರ್ಭಜನ್ ಒಟ್ಟು 47 ಬಾರಿ ಮುಖಾಮುಖಿಯಾಗಿದ್ದಾರೆ.

    MORE
    GALLERIES

  • 810

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    14 ಬಾರಿ ಟೆಸ್ಟ್​ನಲ್ಲಿ ಮುಖಾಮುಖಿಯಾದಾಗ 10 ಸಲ ಹರ್ಭಜನ್​ ಸ್ಪಿನ್ ಮೋಡಿಗೆ ಪಾಟಿಂಗ್ ವಿಕೆಟ್ ಒಪ್ಪಿಸಿದ್ದರು. ಆದರೆ ಏಕದಿನದಲ್ಲಿ 3 ಬಾರಿ ಭಜ್ಜಿ ಬೌಲಿಂಗ್​ಗೆ ಬಲಿಯಾಗಿದ್ದರು.

    MORE
    GALLERIES

  • 910

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    ಇನ್ನು ಹರ್ಭಜನ್ ಸಿಂಗ್ ಅವರ ಮೈಲುಗಲ್ಲು 300ನೇ ವಿಕೆಟ್ ಆಗಿ ಬಲಿಯಾಗಿದ್ದು ಕೂಡ ಇದೇ ಪಾಟಿಂಗ್ ಎಂಬುದು ವಿಶೇಷ. ಹಾಗೆಯೇ ಆಸೀಸ್ ಪಂಟರ್ ಬ್ಯಾಟ್ಸ್​ಮನ್​ ಪಾಟಿಂಗ್​ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಕೂಡ ಭಜ್ಜಿ ಹೆಸರಿನಲ್ಲಿದೆ.

    MORE
    GALLERIES

  • 1010

    Harbhajan Singh: ನನ್ನನ್ನ ನೋಡಿದ್ರೆ ಸಾಕು ಆತ ವಿಕೆಟ್​ ಒಪ್ಪಿಸುತ್ತಿದ್ದ..!

    2001 ರ ಟೆಸ್ಟ್​ನಲ್ಲಿ ಹರ್ಭಜನ್ ಬೌಲಿಂಗ್ ಹೇಗಿತ್ತು ಎಂಬುದಕ್ಕೆ 3 ಟೆಸ್ಟ್​ನಲ್ಲಿ ಭಜ್ಜಿ ಉರುಳಿಸಿದ್ದು ಬರೋಬ್ಬರಿ 32 ವಿಕೆಟ್​ಗಳನ್ನು. ಪರಿಣಾಮ ಭಾರತ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು.

    MORE
    GALLERIES