IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

15ನೇ ಆವೃತ್ತಿಯ ಐಪಿಎಲ್ ಪಂದ್ಯಗಳಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡವನ್ನು ಕಟ್ಟಿಕೊಂಡು ಈ ಬಾರಿಯ ಕಪ್ ಗೆಲ್ಲೋದಕ್ಕೆ ಸಿದ್ದತೆ ಮಾಡಿಕೊಂಡಿವೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಸಾರಥ್ಯ ವಹಿಸಲು ನಾಯಕನ ಘೋಷಣೆಯನ್ನು ಆರ್ಸಿಬಿ ತಂಡ ಹೊರತುಪಡಿಸಿ ಎಲ್ಲಾ ತಂಡಗಳು ಘೋಷಣೆ ಮಾಡಿದೆ. ಯಾವ್ಯಾವ ತಂಡದ ನಾಯಕ ಯಾರು ಯಾರು ಎನ್ನುವ ಮಾಹಿತಿ ಇಲ್ಲಿದೆ.

First published:

  • 110

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಚೆನ್ನೈ ಸೂಪರ್ ಕಿಂಗ್ಸ್: ಐಪಿಎಲ್ ಹರಾಜು ಪ್ರಕ್ರಿಯೆಗೆ ಮುನ್ನವೇ ಈ ಬಾರಿಯೂ ಸಹ ಮಹೇಂದ್ರ ಸಿಂಗ್ ಧೋನಿ ಈ ಬಾರಿಯ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆಸುತ್ತಾರೆ ಎಂದು ಘೋಷಣೆ ಮಾಡಲಾಗಿತ್ತು ಅಲ್ಲದೇ ಧೋನಿ ನಾಯಕತ್ವದಲ್ಲಿ ಚೆನ್ನೈ ಐದು ಬಾರಿ ಐಪಿಎಲ್ ನಲ್ಲಿ ಪ್ರಶಸ್ತಿ ಗೆದ್ದಿದೆ.

    MORE
    GALLERIES

  • 210

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಗುಜರಾತ್ ಟೈಟಾನ್ಸ್: ಈ ಬಾರಿಯ ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.. ಕಳೆದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಹರಾಜಿಗೆ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತು.ಹೀಗಾಗಿ ಹರಾಜು ಪ್ರಕ್ರಿಯೆಗೆ ಮುನ್ನವೇ ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಅವರನ್ನ ಖರೀದಿ ನಾಯಕನ ಪಟ್ಟ ನೀಡಿದೆ.

    MORE
    GALLERIES

  • 310

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಸನ್ರೈಸರ್ಸ್ ಹೈದರಾಬಾದ್: ಕಳೆದ ಐಪಿಎಲ್ ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಅವರಿಂದ ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸ್ ಅವರಿಗೆ ಪಟ್ಟ ನೀಡಲಾಗಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಕೇನ್ ವಿಲಿಯಮ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ

    MORE
    GALLERIES

  • 410

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಲಕ್ನೋ ಸೂಪರ್ ರ್ಜೈಂಟ್ಸ್: ಈ ಬಾರಿಯ ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ತಂಡ ಲಕ್ನೋ.. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಐಪಿಎಲ್ ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ.

    MORE
    GALLERIES

  • 510

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಪಂಜಾಬ್ ಕಿಂಗ್ಸ್: ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತೊರೆದ ಬಳಿಕ ಮತ್ತೊಬ್ಬ ಕನ್ನಡಿಗ ಮಯಂಕ ಅಗರ್ವಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ

    MORE
    GALLERIES

  • 610

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಡೆಲ್ಲಿ ಕ್ಯಾಪಿಟಲ್ಸ್: ಕಳೆದ ಆವೃತ್ತಿಯ ಐಪಿಎಲ್ ನ ಎರಡನೇ ಚರಣದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರಿಷಬ್ ಪಂತ್ ಈ ಬಾರಿಯ ಐಪಿಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

    MORE
    GALLERIES

  • 710

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ರಾಜಸ್ಥಾನ್ ರಾಯಲ್ಸ್: ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು.. ಈ ಬಾರಿಯ ಐಪಿಎಲ್ ನಲ್ಲಿ ಕೂಡ ಸಂಜು ರಾಜಸ್ತಾನ್ ರಾಯಲ್ಸ್ ತಂಡದ ಕಪ್ತಾನ ರಾಗಿದ್ದಾರೆ.

    MORE
    GALLERIES

  • 810

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಕೋಲ್ಕತಾ ನೈಟ್ ರೈಡರ್ಸ್: ಕಳೆದ ಆವೃತ್ತಿಯ ಐಪಿಎಲ್ ಮೊದಲ ಚಾರಣದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಅವರು ಈ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ.. ಹೀಗಾಗಿ ಕೋಲ್ಕತ್ತಾ ಶ್ರೇಯಸ್ ಅಯ್ಯರ್ ಅವರಿಗೆ ನಾಯಕನ ಜವಾಬ್ದಾರಿ ನೀಡಿದೆ.

    MORE
    GALLERIES

  • 910

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಮುಂಬೈ ಇಂಡಿಯನ್ಸ್: ಸದ್ಯ ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂದೇ ಬಿಂಬಿತವಾಗುತ್ತಿರುವ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಸಾಧನೆ ಮಾಡಿದೆ. ಈ ಬಾರಿಯ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಮುನ್ನಡೆಸಲಿದ್ದಾರೆ

    MORE
    GALLERIES

  • 1010

    IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸದ್ಯ  ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಒಂದೇ ಒಂದು ಪ್ರಶ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂದು.. ಎಲ್ಲಾ ತಂಡಗಳು ನಾಯಕನನ್ನು ಆಯ್ಕೆ ಮಾಡಿದ್ದರು ಬೆಂಗಳೂರು ತಂಡ ಇಲ್ಲಿವರೆಗೂ ನಾಯಕನ ಆಯ್ಕೆ ಮಾಡಿಲ್ಲ.

    MORE
    GALLERIES