ರವೀಂದ್ರ ಜಡೇಜಾ, ಟೀಮ್ ಇಂಡಿಯಾದ ಬೆಸ್ಟ್ ಆಲ್ರೌಂಡರ್, ಬೆಸ್ಟ್ ಫೀಲ್ಡರ್ ಎಂಬುದರಲ್ಲಿ ಡೌಟೇ ಇಲ್ಲ. ಇದೇ ಜಡೇಜಾ ಹುಟ್ಟಿ ಬೆಳೆದಿದ್ದು ಬಡ ಕುಟುಂಬದಲ್ಲಿ. ಅವರ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದವರು. ಮಗ ಆರ್ಮಿಗೆ ಸೇರಿ ದೇಶ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದರು.
2/ 17
ಆದರೆ ತಮ್ಮ ಕನಸಿನಂತೆ ಕ್ರಿಕೆಟರ್ ಆದ ಜಡ್ಡು, ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಗುಜರಾತ್ನ ಜಾಮಾನಗರದಲ್ಲಿ ನಾಲ್ಕು ಅಂತಸ್ತಿನ, ಅರಮನೆಯಂತಿರುವ ಮನೆ ಕಟ್ಟಿಕೊಂಡು ಪತ್ನಿ ರೀವಾ ಸೊಲಂಕಿ ಜೊತೆ ಲಕ್ಷುರಿ ಲೈಫ್ ಲೀಡ್ ಮಾಡ್ತಿದ್ದಾರೆ.
3/ 17
ಜಡ್ಡುಗೆ ಹಳೆಯ ವಸ್ತುಗಳು, ಪ್ರಾಣಿಗಳು ಅಂದ್ರೆ ಬಲು ಇಷ್ಟ. ಹೀಗಾಗಿಯೇ ಎಡಗೈ ಬ್ಯಾಟ್ಸ್ಮನ್, ಸ್ಪಿನ್ ಬೌಲರ್ ಆಗಿರೋ ಜಡೇಜಾ ಜಾಮಾನಗರದಲ್ಲಿರುವ ತಮ್ಮ ಮನೆಯನ್ನ ಹಳೆಯ ವಾಸ್ತು ಶೈಲಿಯಲ್ಲೇ ಕಟ್ಟಿಸಿದ್ದಾರೆ.
4/ 17
ಬಂಗಲೆಯ ದ್ವಾರಾ ಬಾಗಿಲು ಹಳೆಯ ಕಾಲದ ರಾಜರ ಅರಮನೆಗಳ ಬಾಗಿಲುಗಳಿನಂತಿವೆ. ಮನೆಯೊಳಗಿನ ಆಸನಗಳು ಇಂಟಿರಿಯರ್ ಡಿಸೈನ್ ಎಲ್ಲವೂ ಪುರಾತನ ರಾಜರ ಮನೆಗಳಲ್ಲಿ ಇರುವಂತಿದೆ. ಇದು ಜಾಮಾನಗರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಪ್ರತಿನಿಧಿಸುವಂತಿದೆ.
5/ 17
ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ನಗರಕ್ಕೆ ಜಡೇಜಾ ಕಟ್ಟಿಸಿಕೊಂಡಿರುವ ಮನೆ ಹೇಳಿ ಮಾಡಿಸಿದಂತಿದೆ. ಜಡ್ಡುಗೆ ಹಳೆಯ ವಸ್ತುಗಳಷ್ಟೇ, ಪ್ರಾಣಿಗಳು ಅಂದ್ರು, ಅಷ್ಟೇ ಪ್ರೀತಿ. ಕುದುರೆಗಳನ್ನ ಸಾಕಿಕೊಂಡಿರುವ ಜಡ್ಡು, ತಮ್ಮ ಫಾಮ್ಹೌಸ್ನಲ್ಲಿ ಕುದುರೆ ಸವಾರಿ ಮಾಡ್ತಿರ್ತಾರೆ.
6/ 17
ಇನ್ನು ಇದರ ಜೊತೆಗೆ ಕತ್ತಿ ವರಸೆಯಲ್ಲೂ ಜಡ್ಡು ಪಂಟರ್. ಪಂದ್ಯದಲ್ಲಿ ಶತಕ, ಅರ್ಧಶತಕದ ಮೈಲಿಗಲ್ಲು ತಲುಪಿದಾಗ ಜಡೇಜಾ ತಮ್ಮ ಕತ್ತಿ ವರಸೆ ಕಲೆ ಪ್ರದರ್ಶಿಸುತ್ತಾರೆ.
7/ 17
ಟೀಮ್ ಇಂಡಿಯಾ ಪರ 49 ಟೆಸ್ಟ್ ಪಂದ್ಯಗಳನ್ನಾಡಿರುವ ಜಡ್ಡು 1 ಶತಕ, 14 ಅರ್ಧಶತಕಗಳೊಂದಿಗೆ 1869 ಕಲೆ ಹಾಕಿದ್ದಾರೆ. ಹಾಗೆಯೇ 165 ಏಕದಿನ ಪಂದ್ಯಗಳಿಂದ 2296 ರನ್ ಬಾರಿಸಿದ್ದಾರೆ. ಇದರಲ್ಲಿ 12 ಅರ್ಧಶತಕಗಳು ಒಳಗೊಂಡಿವೆ. ಹಾಗೆಯೇ 49 ಟಿ20 ಪಂದ್ಯವಾಡಿರುವ ಎಡಗೈ ಬ್ಯಾಟ್ಸ್ಮನ್ 179 ರನ್ ಬಾರಿಸಿದ್ದಾರೆ.