ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ರಾಜ್ಕೋಟ್ನಲ್ಲಿ ನಡೆದಿದೆ.
2/ 6
ರಾಜ್ಕೋಟ್ನ ಕಿಸಾನ್ಪಾರ ರಸ್ತೆಯಲ್ಲಿ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ಜಡೇಜಾ ಕಾರನ್ನು ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಮಾಸ್ಕ್ ಹಾಕದಿರುವುದನ್ನು ಮಹಿಳಾ ಪೊಲೀಸರೊಬ್ಬರು ಪ್ರಶ್ನಿಸಿದ್ದಾರೆ.
3/ 6
ಇದರಿಂದ ಕುಪಿತಗೊಂಡ ಟೀಮ್ ಇಂಡಿಯಾ ಆಟಗಾರ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ಪಾವತಿಸುವಂತೆ ಕೇಳಿಕೊಳ್ಳಲಾಯಿತು. ಹಾಗೆಯೇ ಪರವಾನಗಿ ಪರಿಶೀಲನೆಗೆ ಕೇಳಿದಾಗ ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
4/ 6
ಇನ್ನು ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರವೀಂದ್ರ ಜಡೇಜಾ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಮೂಲಗಳಿಂದ ತಿಳಿದು ಬಂದಿದೆ.
5/ 6
ಹಾಗೆಯೇ ಜಡೇಜಾ ಅವರೊಂದಿಗೆ ಪ್ರಶ್ನಿಸಿದ ಹೆಡ್ ಕಾನ್ಸ್ಟೇಬಲ್ ಸೋನಾಲ್ ಗೊಸಾಯಿ ಕೆಲಸದ ಒತ್ತಡದಿಂದ ನಿನ್ನೆಯೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
6/ 6
ಈ ಬಗ್ಗೆ ಮಾತನಾಡಿದ ಪೊಲೀಸ್ ಉಪ ಆಯುಕ್ತ ಮನೋಹರ್ ಸಿನ್ಹ್ , ಜಡೇಜಾ ಮತ್ತು ಕಾನ್ಸ್ಟೆಬಲ್ ಇಬ್ಬರೂ ಪರಸ್ಪರ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವಿದೆ. ಎರಡೂ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.