ನಾಳೆ ಶನಿವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭವಾಗಲಿದೆ. ಕ್ರಿಸ್ಮಸ್ ಮುಂದಿನ ದಿನ ನಡೆಯುವ ಪಂದ್ಯವಾಗಿದ್ದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಇದಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
2/ 10
ಪ್ರಮುಖವಾಗಿ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಭಾರತ ತಂಡ ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ.
3/ 10
ಖುಷಿಯ ವಿಚಾರ ಎಂದರೆ ಟಿ-20 ಪಂದ್ಯದ ವೇಳೆ ಇಂಜುರಿಗೆ ತುತ್ತಾಗಿದ್ದ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿದ್ದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ…
4/ 10
ಆದರೆ, ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕೆ. ಎಲ್ ರಾಹುಲ್ ನಾಳಿನ ಪಂದ್ಯದಲ್ಲೂ ಆಡುತ್ತಿಲ್ಲ. ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ ಸ್ಥಾನಕ್ಕೆ ಜಡೇಜಾ ಆಯ್ಕೆ ಆಗಲಿದ್ದಾರೆ.
5/ 10
ಹೀಗಾಗಿ ರಾಹುಲ್ಗೆ ಅವಕಾಶ ಇಲ್ಲ ಎಂದು ಎಂದು ಹೇಳಲಾಗಿದೆ. ಇದು ಭಾರತೀಯ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
6/ 10
ಈ ಹಿಂದೆ ವಿರಾಟ್ ಕೊಹ್ಲಿ ಜಾಗದಲ್ಲಿ ರಾಹುಲ್ ಹಾಗೂ ಹನುಮಾ ವಿಹಾರಿ ಸ್ಥಾನದಲ್ಲಿ ಜಡೇಜಾ ಆಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ವಿಹಾರಿಯನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಕೈಬಿಡದ ಕಾರಣ ಕೊಹ್ಲಿ ಸ್ಥಾನದಲ್ಲಿ ಜಡೇಜಾ ಕಣಕ್ಕಿಳಿದು ರಾಹುಲ್ಗೆ ಅವಕಾಶ ತಪ್ಪಿದೆ.
7/ 10
ಇನ್ನೂ ಭಾರತದ ವಿಕೆಟ್ ಕೀಪರ್ ಸ್ಥಾನ ಇನ್ನೂ ಗೊಂದಲದಲ್ಲೇ ಇದೆ. ವೃದ್ದಿಮಾನ್ ಸಾಹ ಕೀಪಿಂಗ್ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ರಿಷಭ್ ಪಂತ್ ಆಡುವ ಸಾಧ್ಯತೆ ಹೆಚ್ಚಿದೆ.
8/ 10
ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ನವ್ದೀಪ್ ಸೈನಿ ಅಥವಾ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದು ಖಚಿತ. ಉಮೇಶ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಸೇವೆ ಭಾರತಕ್ಕಿರಲಿದೆ.
9/ 10
ಒಟ್ಟಾರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಸಾಕಷ್ಟು ಸಮತೋಲನವುಳ್ಳ ತಂಡವನ್ನು ಆಯ್ಕೆ ಮಾಡುವುದು ಟೀಂ ಮ್ಯಾನೇಜ್ಮೆಂಟ್ಗೆ ತಲೆನೋವಾಗಲಿದೆ. ಇತ್ತ ರಹಾನೆ ಮೇಲೆ ಕೂಡ ಸಾಕಷ್ಟು ಒತ್ತಡವಿದೆ.
10/ 10
ಭಾರತ ಸಂಭಾವ್ಯ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಕೆ. ಎಲ್ ರಾಹುಲ್, ಅಜಿಂಕ್ಯಾ ರಹಾನೆ (ನಾಯಕ), ರಿಷಭ್ ಪಂತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ.