ಕಮಿಂಗ್ ಅರೌಂಡ್ ದ ವಿಕೆಟ್ ಬೌಲಿಂಗ್ ಮಾಡಿದ ಅಶ್ವಿನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ರೋರಿ ಬರ್ನ್ಸ್ ಮುಂದಾಗಿದ್ದರು. ಆದರೆ ಚೆಂಡು ಹೆಚ್ಚುವರಿ ಬೌನ್ಸ್ ಆಗಿ ಬ್ಯಾಟ್ ಸವರಿ ಸ್ಲಿಪ್ನಲ್ಲಿದ್ದ ಅಜಿಂಕ್ಯ ರಹಾನೆಯತ್ತ ಸಾಗಿತು. ಚೆಂಡನ್ನು ರಹಾನೆ ಕೈಯಲ್ಲಿ ಭದ್ರಪಡಿಸುವುದರೊಂದಿಗೆ 100 ವರ್ಷಗಳ ಬಳಿಕ ಟೆಸ್ಟ್ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ದಾಖಲೆ ಅಶ್ವಿನ್ ಪಾಲಾಯಿತು.