ಸದ್ಯ ರಶೀದ್ ಖಾನ್ ಫೌಂಡೇಷನ್ ಮೂಲಕ 4 ಲಕ್ಷ ರೂ. ಸಂಗ್ರಹಿಸಲಾಗಿದ್ದು, ಮತ್ತಷ್ಟು ನೆರವಿನ ಅಗತ್ಯವಿದೆ. ವಿಪತ್ತಿನ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರನ್ನ ಮೇಲೆತ್ತುವ ಮೂಲಕ ನಾವು ಕೂಡ ಎತ್ತರಕ್ಕೆ ಏರುತ್ತೇವೆ ಎಂದು ನಂಬಿದ್ದೇನೆ. ಸಣ್ಣ ಮಕ್ಕಳು, ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳ ಜೊತೆ ರಶೀದ್ ಖಾನ್ ಫೌಂಡೇಶನ್ ಸದಾ ಇರಲಿದೆ ಎಂದು ರಶೀದ್ ಖಾನ್ ಭರವಸೆ ನೀಡಿದ್ದಾರೆ.