ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

First published:

 • 116

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನ್ 224 ರನ್​ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

  MORE
  GALLERIES

 • 216

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಈ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನ್‌ ನಾಯಕ ರಶೀದ್‌ ಖಾನ್ ಬ್ಯಾಟಿಂಗ್‌ ಆರಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ರಹಮತ್‌ ಶಾ ಶತಕ ಸಿಡಿಸಿ ಮಿಂಚಿದರೆ, ಮಾಜಿ ನಾಯಕ ಅಸ್ಗರ್ ಹಾಗೂ ಹಾಲಿ ಕಪ್ತಾನ ರಶೀದ್ ಅರ್ಧಶತಕಗಳ ಕಾಣಿಕೆ ನೀಡಿದ್ದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ಬ್ಲೂ ಟೈಗರ್ಸ್​ಗಳಿಸಿದ್ದು ಬರೋಬ್ಬರಿ 342 ರನ್​ಗಳನ್ನು.

  MORE
  GALLERIES

 • 316

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಈ ಗುರಿಯೊಂದಿಗೆ ಇನಿಂಗ್ಸ್​ ಆರಂಭಿಸಿದ ಬಾಂಗ್ಲಾ ಹುಲಿಗಳು 210 ರನ್​ಗಳಿಗೆ ಸರ್ವಪತನ ಕಂಡಿತು.

  MORE
  GALLERIES

 • 416

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  137ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಅಫ್ಘಾನ್ ಪಡೆ ಜರ್ದಾನ್ ಹಾಗೂ ಅಸ್ಗರ್ ಅವರ ಅರ್ಧಶತಕಗಳ ನೆರವಿನಿಂದ 260 ರನ್​ಗಳನ್ನು ಕಲೆ ಹಾಕಿತು.

  MORE
  GALLERIES

 • 516

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  398 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ ಆಟಗಾರರನ್ನು ಕೇವಲ 173 ರನ್​ಗಳಿಗೆ ಕಟ್ಟಿ ಹಾಕಿದ ರಶೀದ್ ಅ್ಯಂಡ್ ಟೀಂ 224 ರನ್​ಗಳ ಐತಿಹಾಸಿಕ ಜಯವನ್ನು ತಮ್ಮದಾಗಿಸಿಕೊಂಡರು.

  MORE
  GALLERIES

 • 616

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಈ ಅಮೋಘ ಜಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಉಪಯುಕ್ತ ಕಾಣಿಕೆ ನೀಡಿದ ಸ್ಪಿನ್ನರ್ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  MORE
  GALLERIES

 • 716

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ತಂಡದ ಐತಿಹಾಸಿಕ ಜಯದೊಂದಿಗೆ ಅಫ್ಘಾನಿಸ್ತಾನ್ ತಂಡದ ಸ್ಪೋಟಕ ಬ್ಯಾಟ್ಸ್​ಮನ್ ಮೊಹಮ್ಮದ್ ನೆಬಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದರು.

  MORE
  GALLERIES

 • 816

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಮೊಹಮ್ಮದ್ ನೆಬಿ ಏಕದಿನ ಹಾಗೂ ಟಿ20 ಪಂದ್ಯಗಳ ಹೆಚ್ಚಿನ ಗಮನ ಕೇಂದ್ರೀಕರಿಸಲು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

  MORE
  GALLERIES

 • 916

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಪಂದ್ಯದ ಬಳಿಕ ಮಾತನಾಡಿದ ನಾಯಕ ರಶೀದ್‌, 'ನಾನು ಮತ್ತು ನನ್ನಂತಹ ಹಲವು ಯುವ ಆಟಗಾರರಿಗೆ ನೆರವಾದ ಮೊಹಮದ್‌ ನೆಬಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ' ಎಂದು ಹೇಳಿದರು.

  MORE
  GALLERIES

 • 1016

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಈ ಗೆಲುವಿನೊಂದಿಗೆ ಮೊದಲ ಟೆಸ್ಟ್‌ನಲ್ಲಿಯೇ ಜಯ ದಾಖಲಿಸಿದ ಅತಿ ಕಿರಿಯ ನಾಯಕ ಎಂಬ ದಾಖಲೆಯನ್ನು ರಶೀದ್‌ ಖಾನ್‌ ನಿರ್ಮಿಸಿದರು.

  MORE
  GALLERIES

 • 1116

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಈ ಹಿಂದೆ ಅಫ್ಘಾನಿಸ್ತಾನ್ ತಂಡವು ಐರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಆದರೆ ಇದೀಗ ಐಸಿಸಿ ಟಾಪ್ 10 ರ್ಯಾಕಿಂಗ್​ನಲ್ಲಿ ಸ್ಥಾನ ಪಡೆದಿರುವ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಅಫ್ಘಾನ್ ತಂಡ ಟೆಸ್ಟ್​ನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.

  MORE
  GALLERIES

 • 1216

  ಐತಿಹಾಸಿಕ ಜಯದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಫ್ಘಾನ್ ತಂಡದ ಸ್ಟಾರ್ ಆಟಗಾರ

  ಅಫ್ಘಾನ್ ತಂಡದ ಬ್ಯಾಟಿಂಗ್ ಝಲಕ್

  MORE
  GALLERIES

 • 1316

 • 1416

 • 1516

 • 1616

  ಸೋಲಿನ ನೋವಿನಲ್ಲಿ ಬಾಂಗ್ಲಾದೇಶದ ಆಟಗಾರರು.

  MORE
  GALLERIES