Vinay Kumar 500: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆ ಬರೆದ ಕನ್ನಡಿಗ ವಿನಯ್ ಕುಮಾರ್
R Vinay Kumar: ವಿನಯ್ ಕುಮಾರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 26ನೇ ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದರು. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು 500 ವಿಕೆಟ್ ಪಡೆದು ದಾಖಲೆ ಬರೆದರು.
ಕರ್ನಾಟಕದ ಹೆಮ್ಮೆಯ ಬೌಲರ್ ವಿನಯ್ ಕುಮಾರ್ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪಡೆಯುವ ಮೂಲಕ ಚಾರಿತ್ರಿಕ ದಾಖಲೆ ಬರೆದಿದ್ದಾರೆ.
2/ 10
2019-20ನೇ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪುದುಚೇರಿ ತಂಡದ ಪರ ಆಡುತ್ತಿರುವ ವಿನಯ್ ಕುಮಾರ್ ಈ ವಿಶೇಷ ಸಾಧನೆ ಮಾಡಿದ್ದಾರೆ.
3/ 10
ಚಂಡೀಗಡ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ವಿನಯ್ ಅವರು 500 ಪ್ರಥಮ ದರ್ಜೆ ವಿಕೆಟ್ಗಳ ಸ್ಮರಣೀಯ ದಾಖಲೆ ಬರೆದರು.
4/ 10
ಈ ಪಂದ್ಯದಲ್ಲಿ ವಿನಯ್ ಕೇವಲ 12 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿ ಚಂಡೀಗಡದ 6 ವಿಕೆಟ್ ಕಿತ್ತು ಮಿಂಚಿದರು.
5/ 10
ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 26ನೇ ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದರು. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು 500 ವಿಕೆಟ್ ಪಡೆದು ದಾಖಲೆ ಬರೆದರು.
6/ 10
ಈ ಬಗ್ಗೆ ಖುಷಿ ಹಂಚಿಕೊಂಡ ವಿನಯ್ ಕುಮಾರ್, ಇದು ನನ್ನ ಪಾಲಿನ ದೊಡ್ಡ ಸಾಧನೆಯಾಗಿದೆ. ಯಾವುದೇ ತಂಡದ ಪರ ಆಡಿದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರುವುದು ಸಂತಸ ಇದೆ ಎಂದಿದ್ದಾರೆ.
7/ 10
ತಂಡಕ್ಕಾಗಿ ವಿಕೆಟ್ ಪಡೆಯುವುದು ನನ್ನ ಮೊದಲ ಗುರಿ. ಪಂದ್ಯವನ್ನು ಗೆಲ್ಲಿಸಿಕೊಡಬೇಕು. ಇದು ನನ್ನ ಜವಾಬ್ದಾರಿ ಎಂಬುವುದು ವಿನಯ್ ಕುಮಾರ್ ಮಾತಾಗಿತ್ತು.
8/ 10
ಯುವ ಆಟಗಾರರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಸಿಗಲಿ ಎಂದ ಉದ್ದೇಶದಿಂದ ರಾಜ್ಯ ಕ್ರಿಕೆಟ್ ತಂಡವನ್ನು ವಿನಯ್ ಕುಮಾರ್ ತೊರೆದಿದ್ದರು. ಕರ್ನಾಟಕ ತಂಡವನ್ನು 15 ವರ್ಷಕ್ಕೂ ಹೆಚ್ಚು ಕಾಲ ವಿನಯ್ ಕುಮಾರ್ ಪ್ರತಿ ನಿಧಿಸಿದ್ದಾರೆ.
9/ 10
2004-05ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿ ಕ್ರಿಕೆಟ್ಗೆ ಕಾಲಿಟ್ಟ ವಿನಯ್, ಬಳಿಕ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡದ ಪ್ರಮುಖ ಬೌಲರ್ ಆಗಿದ್ದರು.
10/ 10
ಟೀಂ ಇಂಡಿಯಾ ಪರವೂ ವಿನಯ್ ಕುಮಾರ್ 1 ಟೆಸ್ಟ್, 31 ಏಕದಿನ ಹಾಗೂ 9 ಟಿ- 20 ಪಂದ್ಯಗಳನ್ನಾಡಿದ್ದಾರೆ.
First published:
110