ಕೇವಲ ಎರಡನೇ ಪ್ರಯತ್ನದಲ್ಲೇ 2 ಕೋಟಿ ಗೆದ್ದಿದ್ದಾರೆ. ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ 49 ರೂಪಾಯಿ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆ ಎಂದು ಖೇಮ್ ಸಿಂಗ್ ಹೇಳಿದ್ದಾರೆ. ಈ ಗೆಲುವಿನ ನಂತರ, ಖೇಮ್ ಸಿಂಗ್ ಮತ್ತು ಅವರ ಕುಟುಂಬ ತುಂಬಾ ಸಂತೋಷವಾಗಿದೆ. ಇದೇ ವೇಳೆ ವಿಜೇತ ಯುವಕನಿಗೆ ಗ್ರಾಮಸ್ಥರು ಮಾಲೆ, ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.
ಈ ಮಧ್ಯೆ, ತಮ್ಮ ಊರಿನ ಹಲವರು ಡ್ರೀಮ್ 11 ಆಡುವುದನ್ನು ನೋಡುತ್ತಿದ್ದರು. ಅವರನ್ನು ನೋಡಿದ ನಂತರ ಈ ಆಟವನ್ನು ಆಡಲು ಆರಂಭಿಸಿದೆ. ಮೊದಲ ಸಲ ಸೋತಾಗ ನನ್ನ ಮನಸ್ಸಿಗೆ ನಿರಾಸೆಯಾಯಿತು. ನಾಲ್ಕೈದು ದಿನಗಳ ನಂತರ ಎರಡನೇ ಪ್ರಯತ್ನದಲ್ಲಿ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ 49 ರೂಪಾಯಿ ಹಾಕಿ ಟೀಮ್ ಮಾಡಿದ್ದೆ. ಅದರಲ್ಲಿ ಎರಡು ಕೋಟಿ ರೂಪಾಯಿ ಬಹುಮಾನ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ.