ಇದಲ್ಲದೆ ಏಕದಿನ ಕ್ರಿಕೆಟ್ನ ಚೊಚ್ಚಲ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಹಿಂದೆ 1987 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಸಿಕ್ಸರ್ ಬಾರಿಸಿ ಭಾರತದ ನವಜೋತ್ ಸಿಂಗ್ ಸಿಧು ದಾಖಲೆ ಬರೆದಿದ್ದರು. ಇದೀಗ ಐರ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್ನಲ್ಲೇ 9 ಸಿಕ್ಸ್ ಸಿಡಿಸಿ 33 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.