MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

Sakshi Singh: ಧೋನಿ ಹೆಂಡತಿ ಸಾಕ್ಷಿ ಸಿಂಗ್ ಇನ್​ಸ್ಟಾಗ್ರಾಂನಲ್ಲಿ ಕೈಮುಗಿದು ಹೃದಯದ ಎಮೊಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಂತರ ಭಾವನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ.

First published:

  • 112

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಮಹೇಂದ್ರ ಸಿಂಗ್ ಧೋನಿ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಸಫಲ ನಾಯಕರಲ್ಲಿ ಒಬ್ಬರು. ಟೀಂ ಇಂಡಿಯಾಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಕೂಲ್ ಕ್ಯಾಪ್ಟನ್ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿದಿದ್ದಾರೆ.

    MORE
    GALLERIES

  • 212

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಅಭಿಮಾನಿಗಳಿನ್ನು ಭಾರತೀಯ ಜೆರ್ಸಿ ತೊಟ್ಟು ಕೊನೆಯ ಓವರ್​ನಲ್ಲಿ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡುವ ಧೋನಿಯ ಆಟವನ್ನು ನೋಡಲು ಸಾಧ್ಯವಿಲ್ಲ. ಐಪಿಎಲ್​ನಲ್ಲಿ ಮಾತ್ರ ಅವರ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    MORE
    GALLERIES

  • 312

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ನಿನ್ನೆ ತಮ್ಮ ಇನ್​ಸ್ಟಾಗ್ರಾಂನಲ್ಲಿ "ನನ್ನ ವೃತ್ತಿ ಜೀವನದಲ್ಲಿ ನೀವು ತೋರಿದ ಪ್ರೀತಿ ಹಾಗೂ ಸಹಕಾರಕ್ಕೆ ಧನ್ಯವಾದಗಳು. 1929 ಗಂಟೆಗಳ ಬಳಿಕ ನಾನು ನಿವೃತ್ತಿ ಹೊಂದುತ್ತಿದ್ದೇನೆ." ಎಂದು ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 412

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ನಿನ್ನೆ ಅವರು ನಿವೃತ್ತಿ ಘೋಷಿಸಿದ ನಂತರ ಹಲವು ಮಾಜಿ ಮತ್ತು ಇಂದಿನ ಕ್ರಿಕೆಟರ್ ಗಳು, ಸೆಲೆಬ್ರಿಟಿಗಳು, ಅವರ ಅಭಿಮಾನಿಗಳು ಧೋನಿಯವರ ಸಾಧನೆಗಳು, ಕೊಡುಗೆಗಳನ್ನು ಕೊಂಡಾಡುತ್ತಿದ್ದಾರೆ.

    MORE
    GALLERIES

  • 512

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಈ ಸಂದರ್ಭದಲ್ಲಿ ಅವರ ಪತ್ನಿ ಸಾಕ್ಷಿ ಸಿಂಗ್ ಇನ್​ಸ್ಟಾಗ್ರಾಂನಲ್ಲಿ ಕೈಮುಗಿದು ಹೃದಯದ ಎಮೊಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಂತರ ಭಾವನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ.

    MORE
    GALLERIES

  • 612

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ''ನಿಮ್ಮ ಸಾಧನೆ ಇಂದು ಮಾತನಾಡುತ್ತಿದೆ, ಅದಕ್ಕೆ ಸಿಕ್ಕಿರುವ ಪ್ರಶಂಸೆ, ಪ್ರೀತಿ ಕಂಡು ನಿಮಗೆ ಹೆಮ್ಮೆಯಾಗಬೇಕು. ನಿಮ್ಮ ಕೈಯಿಂದ ಸಾಧ್ಯವಾದಷ್ಟು ಉತ್ತಮ ಆಟವನ್ನು ದೇಶಕ್ಕೆ ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು ಎಂದು ಸಾಕ್ಷಿ ಹೇಳಿದ್ದಾರೆ.

    MORE
    GALLERIES

  • 712

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತಿದೆ, ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ ನೀವು ಕಣ್ಣೀರನ್ನು ಹಿಡಿದಿಟ್ಟುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ಹೆಚ್ಚು ಸಂತೋಷ, ಆರೋಗ್ಯ ಮತ್ತು ಇನ್ನಷ್ಟು ಉತ್ತಮ ದಿನಗಳು ಬರಲಿ'' ಎಂದು ಧೋನಿಯವರು ಸೂರ್ಯಾಸ್ತಮಾನವನ್ನು ನೋಡುತ್ತಿರುವ ಚಿತ್ರವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 812

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ, "ಯುಗವೊಂದು ಅಂತ್ಯವಾಗಿದೆ. ಭಾರತ ಹಾಗೂ ವಿಶ್ವಕಪ್ ಕ್ರಿಕೆಟ್ ಗೆ ಅವರು ಅಭೂತಪೂರ್ವ ಆಟಗಾರರಾಗಿದ್ದರು. ಅವರ ನಾಯಕತ್ವದ ಕ್ಷಮತೆ ಇತರರಿಗಿಂತ ಭಿನ್ನವಾಗಿತ್ತು. ಅದನ್ನು ತಲಪುವುದು ಅದರಲ್ಲೂ ವಿಶೇಷವಾಗಿ ಸಣ್ಣ ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ ತುಂಬಾ ಕಷ್ಟಸಾಧ್ಯ" ಎಂದಿದ್ದಾರೆ.

    MORE
    GALLERIES

  • 912

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಭಾರತೀಯ ಕ್ರಿಕೆಟ್ ಗೆ ನಿಮ್ಮ ಕೊಡುಗೆ ಅಪಾರವಾಗಿದೆ. ಇಬ್ಬರೂ ಒಟ್ಟಿಗೆ 2011ರ ವಿಶ್ವಕಪ್ ಗೆದ್ದಿರುವುದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿರುವ ಸಚಿನ್, ನಿಮ್ಮ ಜೀವನದ ಎರಡನೇ ಇನ್ನಿಂಗ್ಸ್ ಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

    MORE
    GALLERIES

  • 1012

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ, " ಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ಒಂದು ದಿನ ತನ್ನ ಕ್ರಿಕೆಟ್ ಪಯಣವನ್ನು ಅಂತ್ಯ ಮಾಡಬೇಕಾಗುತ್ತದೆ. ಆದರೆ ನಿಮಗೆ ತುಂಬಾ ಆಪ್ತರಾಗಿದ್ದವರು ವಿದಾಯ ಹೇಳಿದಾಗ ಅದರ ಬೇಸರ ಜಾಸ್ತಿಯೇ ಆಗಿರುತ್ತದೆ ಎಂದು ವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    MORE
    GALLERIES

  • 1112

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಇನ್​ಸ್ಟಾಗ್ರಾಂನಲ್ಲಿ ಘೋಷಿಸುತ್ತಿದ್ದಂತೆಯೇ ಧೋನಿ ಆಪ್ತ ಗೆಳೆಯ ಸುರೇಶ್ ರೈನಾ ತಮ್ಮ ನಿವೃತ್ತಿಯ ನಿರ್ಧಾರವನ್ನೂ ಶನಿವಾರ ಪ್ರಕಟಿಸಿದ್ದರು. ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ತಾನೂ ಸಾಥ್ ನಿಡಿ ದಿಗಿಲು ಹುಟ್ಟಿಸಿದ್ದರು.

    MORE
    GALLERIES

  • 1212

    MS Dhoni: ಎಂ ಎಸ್ ಧೋನಿ ನಿವೃತ್ತಿ ಬಗ್ಗೆ ಹೆಂಡತಿ ಸಾಕ್ಷಿ ಸಿಂಗ್ ಮಾಡಿದ ಟ್ವೀಟ್ ಏನು ಗೊತ್ತೇ?

    ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕ ಉಪನಾಯಕನಾಗಿ ಇಬ್ಬರ ಕೊಡುಗೆಯೂ ಸಾಕಷ್ಟು ಮಹತ್ವದ್ದು. ತಮಿಳುನಾಡಿನ ಅಭಿಮಾನಿಗಳು ಈ ಇಬ್ಬರೂ ಕ್ರಿಕೆಟಿಗರನ್ನು ತಲ ಹಾಗೂ ಚಿನ್ನ ತಲ ಎಂದೇ ಕರೆಯುತ್ತಾರೆ.

    MORE
    GALLERIES