ಅದು 12 ವರ್ಷಗಳ ಹಿಂದಿನ ಘಟನೆ. ಇಡೀ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದ ಪ್ರಕರಣ ಮಂಕಿ ಗೇಟ್. ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ಆಟಗಾರರ ನಡುವೆ ನಡೆದ ಈ ಜಟಾಪಟಿಯ ಬಗ್ಗೆ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ.
2/ 12
2008 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಸಿಡ್ನಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿತ್ತು.
3/ 12
ಮೈದಾನದಲ್ಲಿನ ಕಾದಾಟ ತೀವ್ರ ರೂಪಕ್ಕೆ ಏರುತ್ತಿದ್ದಂತೆ ಅತ್ತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೊ ಸೈಮಂಡ್ಸ್ ನಡುವೆ ಮಾತಿಕ ಚಕಮಕಿ ನಡೆಯಿತು. ಆರಂಭದಲ್ಲಿ ಸ್ಲೆಡ್ಜಿಂಗ್ ರೂಪದಲ್ಲಿ ಮಾತುಗಳು ನೋಡುತ್ತಿದ್ದಂತೆ ಬೇರೊಂದು ಹಂತಕ್ಕೆ ತಲುಪಿತು.
4/ 12
ಇದೇ ಮಾತಿನ ಚಕಮಕಿ ವಿವಾದದ ಕೇಂದ್ರ ಬಿಂದುವಾಯಿತು. ಆಸ್ಟ್ರೇಲಿಯಾ ತಂಡದ ಆಟಗಾರ ಸೈಮಂಡ್ಸ್ ತನ್ನನ್ನು ಹರ್ಭಜನ್ ಮಂಕಿ ಎಂದು ಕರೆದಿದ್ದಾರೆಂದು ರಂಪಾಟ ಮಾಡಿಬಿಟ್ಟರು.
5/ 12
ಇದು ನನ್ನ ಮೇಲೆ ಹರ್ಭಜನ್ ಮಾಡಿದ ಜನಾಂಗೀಯ ನಿಂದನೆ ಎಂದು ಸೈಮಂಡ್ಸ್ ಆರೋಪಿಸಿದರು. ಮರುದಿನ ಪತ್ರಿಕೆಗಳಲ್ಲಿ ಆಸ್ಟ್ರೇಲಿಯನ್ ಆಟಗಾರನನ್ನು ಟೀಂ ಇಂಡಿಯಾ ಪ್ಲೇಯರ್ ಮಂಗ ಎಂದು ನಿಂದಿಸಿದ್ದಾಗಿ ಸುದ್ದಿಗಳು ಪ್ರಕಟಗೊಂಡವು.
6/ 12
ಪ್ರಕರಣ ಬೇರೊಂದು ಹಂತಕ್ಕೆ ಹೋಯಿತು. ಅನೇಕ ಕ್ರಿಕೆಟಿಗರು ಈ ನಿಂದನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬೆಂಬಲ ಸೂಚಿಸಿದರು. ಈ ವಿಷಯ ದೊಡ್ಡದಾಗುತ್ತಿದ್ದಂತೆ ಐಸಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು.
7/ 12
ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆ ಮಾಡಿರುವ ಆರೋಪದಡಿಯಲ್ಲಿ ಹರ್ಭಜನ್ ಸಿಂಗ್ ಅವರಿಗೆ ಮ್ಯಾಚ್ ರೆಫರಿ ಮೂರು ಪಂದ್ಯಗಳ ನಿಷೇಧ ಹೇರಿದರು.
8/ 12
ಇದೇ ವೇಳೆ ಹರ್ಭಜನ್ ಯಾವುದೇ ತಪ್ಪು ಮಾಡಿಲ್ಲ ಎಂದು ಟೀಂ ಇಂಡಿಯಾ ಆಟಗಾರರು ಅವರಿಗೆ ಸಂಪೂರ್ಣ ಬೆಂಬಲ ನೀಡಿತು. ಅಲ್ಲದೆ ಒಂದು ವೇಳೆ ಭಜ್ಜಿಗೆ ನಿಷೇಧ ಹೇರಿದರೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆಯೊಡ್ಡಿತು.
9/ 12
ಈ ಪ್ರಕರಣದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಒಂದಷ್ಟು ಆಟಗಾರರ ಸಾಕ್ಷ್ಯಗಳನ್ನು ತೆಗೆದುಕೊಳ್ಳಲಾಯಿತು. ಆ ಬಳಿಕ ನಿಷೇಧವನ್ನು ಹಿಂಪಡೆದು, ನಿಂದನಾತ್ಮಕ ಪದ ಬಳಕೆ ಮಾಡಿದಕ್ಕೆ ಪಂದ್ಯದ ಶೇ.50 ರಷ್ಟು ದಂಡ ವಿಧಿಸಲಾಯಿತು.
10/ 12
12 ವರ್ಷಗಳ ಹಿಂದಿನ ಮಂಕಿಗೇಟ್ ವಿವಾದವನ್ನು ಇದೀಗ ಮತ್ತೊಮ್ಮೆ ರಿಕಿ ಪಾಂಟಿಂಗ್ ನೆನಪು ಮಾಡಿಕೊಂಡಿದ್ದಾರೆ. ತಮ್ಮ ನಾಯಕತ್ವದಲ್ಲಿ ನಡೆದ ಅತ್ಯಂತ ಕೆಟ್ಟ ಘಳಿಗೆ ಎಂದು ಹಳೆಯ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.
11/ 12
ಅಲ್ಲದೆ ಆಟಗಾರರ ನಡುವೆ ವಿವಾದ ಸೃಷ್ಟಿಸಿದ ಈ ಘಟನೆಯು ಸಂಪೂರ್ಣ ಶಮನವಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ. ಮುಂಬೈ ಇಂಡಿಯನ್ಸ್ ಪರ ಸಚಿನ್, ಪಾಂಟಿಂಗ್, ಕುಂಬ್ಳೆ, ಹರ್ಭಜನ್, ಸೈಮಂಡ್ಸ್ ಜೊತೆಯಾಗಿ ಆಡುವ ಮೂಲಕ ಎಲ್ಲರೂ ಸ್ನೇಹಿತರಾದರು ಎಂದು ಪಾಂಟಿಂಗ್ ಹೇಳಿದರು.
12/ 12
ಅಂದಹಾಗೆ ಅಂದು ಹರ್ಭಜನ್ ಸಿಂಗ್ ಸೈಮಂಡ್ಸ್ ಅವರನ್ನು ಮಂಕಿ ಎಂದು ಕರೆದೇ ಇಲ್ವಂತೆ...ಸಿಟ್ಟಿನಲ್ಲಿ ಭಜ್ಜಿ ಮಾ..ಕಿ ಎಂದು ಹಿಂದಿಯಲ್ಲಿ ಬಳಸಿದ ಬೈಗುಳ ಆಸ್ಟ್ರೇಲಿಯನ್ ಕ್ರಿಕೆಟಿಗರು ಮಂಕಿ ಎಂದು ಅರ್ಥೈಸಿಕೊಂಡರು ಎಂಬ ಮಾತಿದೆ.