IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

ಹೊಡಿಬಡಿ ಆಟವೆಂದೇ ಪರಿಗಣಿಸಲಾಗಿರುವ ಟಿ20 ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಪಾರುಪತ್ಯ. ಆದರೆ ಐಪಿಎಲ್​ನಲ್ಲಿ ಕೆಲ ಬೌಲರುಗಳಿದ್ದಾರೆ. ಬ್ಯಾಟ್ಸ್​ಮನ್​ಗಳ ಸವಾಲುಗಳನ್ನು ಮೆಟ್ಟಿ ನಿಂತು ಪಂದ್ಯದ ಫಲಿತಾಂಶವನ್ನೇ ಟಿ20ಯಲ್ಲೂ ಬೌಲರ್​ ಮಿಂಚಬಹುದು ಎಂದು ನಿರೂಪಿಸಿದ್ದಾರೆ.

First published:

  • 18

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    ಕ್ರಿಕೆಟ್‌ ಜಗತ್ತಿನ ರಂಗು ರಂಗಿನ ಟೂರ್ನಿ ಐಪಿಎಲ್‌ ಶುರುವಾಗಲು ದಿನಗಣನೆ ಆರಂಭವಾಗಿದೆ. ಕಳೆದ  13 ವರ್ಷಗಳಿಂದ ಕ್ರಿಕೆಟ್‌ ಪ್ರಿಯರನ್ನು ರಂಜಿಸುತ್ತಾ ಬಂದಿರುವ ಟೂರ್ನಿಯ 14ನೇ ಆವೃತ್ತಿ ಏಪ್ರಿಲ್  9ರಿಂದ ಆರಂಭವಾಗಲಿದೆ.

    MORE
    GALLERIES

  • 28

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    ಹೊಡಿಬಡಿ ಆಟವೆಂದೇ ಪರಿಗಣಿಸಲಾಗಿರುವ ಟಿ20 ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಪಾರುಪತ್ಯ. ಆದರೆ ಐಪಿಎಲ್​ನಲ್ಲಿ ಕೆಲ ಬೌಲರುಗಳಿದ್ದಾರೆ. ಬ್ಯಾಟ್ಸ್​ಮನ್​ಗಳ ಸವಾಲುಗಳನ್ನು ಮೆಟ್ಟಿ ನಿಂತು ಪಂದ್ಯದ ಫಲಿತಾಂಶವನ್ನೇ ಟಿ20ಯಲ್ಲೂ ಬೌಲರ್​ ಮಿಂಚಬಹುದು ಎಂದು ನಿರೂಪಿಸಿದ್ದಾರೆ.

    MORE
    GALLERIES

  • 38

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    ಹೀಗೆ ಬ್ಯಾಟ್ಸ್​ಮನ್​ಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಕೆಲ ಬೌಲರ್​ಗಳು ಹ್ಯಾಟ್ರಿಕ್ ವಿಕೆಟ್​ಗಳನ್ನು ಪಡೆದು ಮಿಂಚಿದ್ದಾರೆ. ಅದರಲ್ಲೂ ಕೆಲ ಬೌಲರುಗಳು ಒಂದಕ್ಕಿಂತ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸುವ ಮೂಲಕ ಐಪಿಎಲ್​ನಲ್ಲಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರುಗಳು ಯಾರು ಎಂಬುದನ್ನು ನೋಡುವುದಾದರೆ...

    MORE
    GALLERIES

  • 48

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    5- ಅಜಿತ್ ಚಂಡಿಲಾ: ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಅಜಿತ್ ಚಂಡಿಲಾ ಐಪಿಎಲ್​ನಲ್ಲಿ 12 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಾಪ್ 5 ಹ್ಯಾಟ್ರಿಕ್ ವಿಕೆಟ್ ಟೇಕರ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ.

    MORE
    GALLERIES

  • 58

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    4- ಮಖಾಯ ಎನ್​ಟಿನಿ: ದಕ್ಷಿಣ ಆಫ್ರಿಕಾದ ವೇಗಿ ಎನ್​ಟಿನಿ ಚೊಚ್ಚಲ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಒಟ್ಟಾರೆ 9 ಪಂದ್ಯಗಳನ್ನು ಆಡಿರುವ ಎನ್​ಟಿನಿ ಪಡೆದಿರುವುದು ಮಾತ್ರ 7 ವಿಕೆಟ್​. ಇದರಲ್ಲಿ ಒಮ್ಮೆ ಹ್ಯಾಟ್ರಿಕ್ ವಿಕೆಟ್ ಉರುಳಿಸಿರುವುದು ವಿಶೇಷ.

    MORE
    GALLERIES

  • 68

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    3- ಸ್ಯಾಮ್ ಕರ್ರನ್: ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸ್ಯಾಮ್ ಕುರ್ರನ್ ಸಹ ಕಿಂಗ್ಸ್ ಇಲೆವೆನ್ ಪರ ಒಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಐಪಿಎಲ್​ನಲ್ಲಿ  23 ಪಂದ್ಯಗಳನ್ನಾಡಿರುವ ಸ್ಯಾಮ್  23 ವಿಕೆಟ್ ಕಬಳಿಸಿದ್ದಾರೆ.

    MORE
    GALLERIES

  • 78

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    2- ಯುವರಾಜ್ ಸಿಂಗ್: ಐಪಿಎಲ್​ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಯುವರಾಜ್ ಸಿಂಗ್ ದಾಖಲೆ ಬರೆದಿದ್ದಾರೆ. 132 ಐಪಿಎಲ್ ಪಂದ್ಯಗಳನ್ನಾಡಿರುವ ಯುವಿ ಒಟ್ಟಾರೆ 36 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    IPL ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರುಗಳು ಇವರು..!

    1- ಅಮಿತ್ ಮಿಶ್ರಾ: ಐಪಿಎಲ್​ನ ಹ್ಯಾಟ್ರಿಕ್ ಸರದಾರ ಎಂಬ ಖ್ಯಾತಿ ಅಮಿತ್ ಮಿಶ್ರಾ ಅವರದ್ದು. ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಮಿಶ್ರಾ ಇದುವರೆಗೂ ಐಪಿಎಲ್​ನಲ್ಲಿ  150  ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಮೂರು ಬಾರಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಅಮಿತ್ ಮಿಶ್ರಾ 160 ವಿಕೆಟ್ ಪಡೆದಿದ್ದಾರೆ.

    MORE
    GALLERIES