Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

ಅಂದು ಆರಂಭಿಕರಾಗಿ ಕಣಕ್ಕಿಳಿದ ಹಿಟ್​ಮ್ಯಾನ್  153 ಎಸೆತಗಳಲ್ಲಿ 208 ರನ್  ಚಚ್ಚಿದ್ದರು. ಇದರಲ್ಲಿ 12 ಸಿಕ್ಸರ್ ಹಾಗೂ 13 ಬೌಂಡರಿಗಳು ಮೂಡಿಬಂದಿದ್ದವು.

First published:

  • 18

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    2010ರಲ್ಲಿ ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದರು.

    MORE
    GALLERIES

  • 28

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    ಈ ವಿಶ್ವದಾಖಲೆಗೆ ವರುಷ ತುಂಬುತ್ತಿದ್ದಂತೆ ನಜಾಫ್ಘ​ಡದ ಸುಲ್ತಾನ್ ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಚಚ್ಚುವ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದರು.

    MORE
    GALLERIES

  • 38

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    ಅಲ್ಲಿವರೆಗೂ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದಿದ್ದವು. ಅದರ ಬೆನ್ನಲ್ಲೇ ಸೆಹ್ವಾಗ್ ದಾಖಲೆಯ ಆಯುಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ದವು.

    MORE
    GALLERIES

  • 48

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    2013 ರಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 209 ರನ್ ಬಾರಿಸಿದ್ದರು. ಆದರೆ ಅಂದು ಹಿಟ್​ಮ್ಯಾನ್​ಗೆ ವೀರು ದಾಖಲೆಯನ್ನು ಮುರಿಯಲಾಗಲಿಲ್ಲ .

    MORE
    GALLERIES

  • 58

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    2014ರಲ್ಲಿ ಶ್ರೀಲಂಕಾ ವಿರುದ್ಧ  264 ರನ್ ಬಾರಿಸುವ ಮೂಲಕ  ಹೊಸ ವಿಶ್ವ ದಾಖಲೆ ಬರೆದರು. ಸೆಹ್ವಾಗ್ ದಾಖಲೆಯನ್ನು ಮೀರಿ ಕ್ರಿಕೆಟ್ ಇತಿಹಾಸದಲ್ಲೇ ಹಿಟ್​ಮ್ಯಾನ್ ಹೊಸ ಮೈಲಿಗಲ್ಲು  ಸ್ಥಾಪಿಸಿದರು.

    MORE
    GALLERIES

  • 68

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    ಇದಾಗಿ 2017 ರಲ್ಲಿ ಶ್ರೀಲಂಕಾ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸಿದ ರೋಹಿತ್ ಅಜೇಯ 208 ರನ್​ಗಳಿಸಿದ್ದರು. ಈ ಪಂದ್ಯದಲ್ಲಿ ಮೊದಲ ಶತಕ ಬಾರಿಸಲು 115 ಬಾಲ್​ಗಳನ್ನು ತೆಗೆದುಕೊಂಡ ಹಿಟ್​ಮ್ಯಾನ್, 2ನೇ ಶತಕಕ್ಕೆ ತೆಗೆದುಕೊಂಡಿದ್ದು ಕೇವಲ 36 ಎಸೆತ. 

    MORE
    GALLERIES

  • 78

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    ಹೀಗೆ ಮೊಹಾಲಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಮೂರು ಡಬಲ್ ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ  ಪಾತ್ರರಾಗಿದ್ದರು. ಈ ದಾಖಲೆಯ ದ್ವಿಶತಕ ಮೂಡಿ ಬಂದು ಇಂದಿಗೆ (ಡಿ.13) ಮೂರು ವರ್ಷಗಳಾಗಿವೆ.

    MORE
    GALLERIES

  • 88

    Rohit Sharma: ತ್ರಿ ದ್ವಿಶತಕ ಸರದಾರನ ಸಾಧನೆಗೆ ಇಂದಿಗೆ ಮೂರು ವರ್ಷ..!

    ಅಂದು ಆರಂಭಿಕರಾಗಿ ಕಣಕ್ಕಿಳಿದ ಹಿಟ್​ಮ್ಯಾನ್  153 ಎಸೆತಗಳಲ್ಲಿ 208 ರನ್  ಚಚ್ಚಿದ್ದರು. ಇದರಲ್ಲಿ 12 ಸಿಕ್ಸರ್ ಹಾಗೂ 13 ಬೌಂಡರಿಗಳು ಮೂಡಿಬಂದಿದ್ದವು. ಈ ಅಮೋಘ ಸಾಧನೆಯೊಂದಿಗೆ ಹಿಟ್​ಮ್ಯಾನ್ ಕ್ರಿಕೆಟ್ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಬರೆದಿಟ್ಟರು.

    MORE
    GALLERIES