Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆದರು. 2017 ರಲ್ಲಿ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಹಿಟ್​ಮ್ಯಾನ್ ಅಜೇಯ 208 ರನ್​ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಮೂರು ಡಬಲ್ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

First published:

  • 16

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    2010ರಲ್ಲಿ ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದರು. ಈ ವಿಶ್ವದಾಖಲೆಗೆ ವರುಷ ತುಂಬುತ್ತಿದ್ದಂತೆ ನಜಾಫ್ಘ​ಡದ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಅಬ್ಬರಿಸಿ ಬೊಬ್ಬರಿದಿದ್ದರು.

    MORE
    GALLERIES

  • 26

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    ಹೌದು, ಡಿಸೆಂಬರ್ 8, 2011 ಅನ್ನು ಯಾರು ಮರೆತರೂ ವೀರು ಅಭಿಮಾನಿಗಳು ಮಾತ್ರ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ಡಬಲ್ ಸೆಂಚುರಿ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನುವಾಗಲೇ, ಇತ್ತ ಸೆಹ್ವಾಗ್ ಇತಿಹಾಸ ನಿರ್ಮಿಸಿ ಬ್ಯಾಟ್ ಮೇಲೆತ್ತಿದ್ದರು.

    MORE
    GALLERIES

  • 36

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    ಅದು, ವೆಸ್ಟ್ ಇಂಡೀಸ್ ವಿರುದ್ಧ 4ನೇ ಏಕದಿನ ಪಂದ್ಯ. ಇಂದೋರ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಹಂಗಾಮಿ ನಾಯಕ ವಿರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಆಯ್ದುಕೊಂಡರು. ಗೌತಮ್ ಗಂಭೀರ್ ಜೊತೆ ಇನಿಂಗ್ಸ್ ಆರಂಭಿಸಿದ ವೀರು ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ವಿಕೆಟ್​ಗೆ 176 ರನ್​ಗಳ ಜೊತೆಯಾಟ ಮೂಡಿಬಂತು.

    MORE
    GALLERIES

  • 46

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    ಗೌತಮ್ ಗಂಭೀರ್ (67) ಔಟಾದ ಬಳಿಕ ಬಂದ ಸುರೇಶ್ ರೈನಾ 55 ರನ್​ ಬಾರಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸೆಹ್ವಾಗ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 2010 ರಲ್ಲಿ ಸಚಿನ್ ನಿರ್ಮಿಸಿದ ದಾಖಲೆ ವೀರು ಪಾಲಾಯಿತು.

    MORE
    GALLERIES

  • 56

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    25 ಬೌಂಡರಿ, 7 ಸಿಕ್ಸರ್​ನೊಂದಿಗೆ ಕೇವಲ 149 ಎಸೆತಗಳಲ್ಲಿ ವಿರೇಂದ್ರ ಸೆಹ್ವಾಗ್ 219 ರನ್ ಚಚ್ಚಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 418 ರನ್​ ಬಾರಿಸಿತ್ತು. ಅಲ್ಲದೆ 153 ರನ್​ಗಳಿಂದ ಜಯ ಸಾಧಿಸಿತು.

    MORE
    GALLERIES

  • 66

    Virender Sehwag: ಸೆಹ್ವಾಗ್ ಸಿಡಿಲಬ್ಬರಕ್ಕೆ ಒಂಬತ್ತು ವರ್ಷ..!

    ಅಲ್ಲಿವರೆಗೂ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದವು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 209 ರನ್ ಬಾರಿಸುವ ಮೂಲಕ ಡಬಲ್ ಸೆಂಚುರಿ ಕ್ಲಬ್​ಗೆ ರೋಹಿತ್ ಶರ್ಮಾ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆದರು. 2017 ರಲ್ಲಿ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಹಿಟ್​ಮ್ಯಾನ್ ಅಜೇಯ 208 ರನ್​ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಮೂರು ಡಬಲ್ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    MORE
    GALLERIES