ನಮಗೂ ಅವಕಾಶ ನೀಡಬೇಕೆಂದು ನೋವು ತೋಡಿಕೊಂಡ ಇರ್ಫಾನ್-ರೈನಾ..!
Irfan Pathan: ಈ ವೇಳೆ ಇರ್ಫಾನ್ ಜೊತೆಗಿನ ಪಾರ್ಟನರ್ಶಿಪ್ ಸ್ಮರಿಸಿದ ರೈನಾ, ನೀವು 2012 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಇನ್ನಿಂಗ್ಸ್ ಇನ್ನೂ ನೆನಪಿಸಿಕೊಳ್ಳುತ್ತಾರೆ. ಏಕಾಂಗಿಯಾಗಿ ಅಂದು ನೀವು ಭಾರತಕ್ಕೆ ಜಯ ತಂದುಕೊಟ್ಟಿದ್ದೀರಿ ಎಂದರು.
ಎಲ್ಲರೂ ಕೆರಿಯರ್ ಆರಂಭಿಸುವ ಹೊತ್ತಲ್ಲಿ ಈ ಕ್ರಿಕೆಟಿಗನ ವೃತ್ತಿಜೀವನ ಅಂತ್ಯಗೊಂಡಿತು. ಹೌದು, 19ನೇ ವಯಸ್ಸಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಇರ್ಫಾನ್ ಪಠಾಣ್ ಅವರ ವೃತ್ತಿಜೀವನ 30 ವರ್ಷ ಆಗುವಷ್ಟರಲ್ಲಿ ಅಂತ್ಯವಾಗಿತ್ತು.
2/ 13
ಅದ್ಭುತ ಸ್ವಿಂಗ್ ಬೌಲಿಂಗ್ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಇರ್ಫಾನ್ ಅತ್ಯುತ್ತಮ ಪ್ರದರ್ಶನದ ಮೂಲಕ ಟೀಮ್ ಇಂಡಿಯಾದಲ್ಲಿ ಖಾಯಂ ಆಗಿದ್ದರು. ಆದರೆ ಬಳಿಕ ಫಾರ್ಮ್ ಕಳೆದುಕೊಂಡ ಇರ್ಫಿ ಮತ್ತೆ ತಂಡಕ್ಕೆ ಮರಳಲು ಸಾಕಷ್ಟು ಸರ್ಕಸ್ ಮಾಡುವಂತಾಯಿತು.
3/ 13
ಒಂದು ಕಾಲದಲ್ಲಿ ಟೀಮ್ ಇಂಡಿಯಾಗೆ ಕಪಿಲ್ ದೇವ್ ಅವರ ಉತ್ತರಾಧಿಕಾರಿ ಎಂದು ಕರೆಸಿಕೊಂಡ ಆಲ್ರೌಂಡರ್ ಗಂಗೂಲಿ ನಾಯಕತ್ವದ ಯುಗದ ಅಂತ್ಯದೊಂದಿಗೆ ತೆರೆ ಮರೆ ಸರಿಯಲಾರಂಭಿಸಿದರು.
4/ 13
ಅದರಲ್ಲೂ ಯಾವಾಗ ಗ್ರೆಗ್ ಚಾಪೆಲ್ ಇರ್ಫಾನ್ ಪಠಾಣ್ರನ್ನು ಬೌಲಿಂಗ್ಗಿಂತ ಬ್ಯಾಟ್ಸ್ಮನ್ ಆಗಿ ಬಳಸಿಕೊಳ್ಳಲಾರಂಭಿಸಿದರೋ, ಇತ್ತ ಯುವ ವೇಗಿ ತಮ್ಮ ಟ್ರೇಡ್ ಮಾರ್ಕ್ನಿಂತಿದ್ದ ಸ್ವಿಂಗ್ ಜಾದುವನ್ನು ಕಳೆದುಕೊಂಡಿದ್ದರು.
5/ 13
2003 ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಇರ್ಫಾನ್ ಇದೀಗ ಆಯ್ಕೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರೇಶ್ ರೈನಾ ಜೊತೆಗಿನ ಲೈವ್ ಚಾಟ್ನಲ್ಲಿ ವೃತ್ತಿ ಜೀವನ ನೆನದು ನೋವು ತೋಡಿಕೊಂಡರು.
6/ 13
ಈ ವೇಳೆ ಇರ್ಫಾನ್ ಜೊತೆಗಿನ ಪಾರ್ಟನರ್ಶಿಪ್ ಸ್ಮರಿಸಿದ ರೈನಾ, ನೀವು 2012 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಇನ್ನಿಂಗ್ಸ್ ಇನ್ನೂ ನೆನಪಿಸಿಕೊಳ್ಳುತ್ತಾರೆ. ಏಕಾಂಗಿಯಾಗಿ ಅಂದು ನೀವು ಭಾರತಕ್ಕೆ ಜಯ ತಂದುಕೊಟ್ಟಿದ್ದೀರಿ ಎಂದರು.
7/ 13
ರೈನಾ ಅವರ ಮಾತುಗಳನ್ನು ಕೇಳಿ ಭಾವುಕರಾದ ಇರ್ಫಾನ್, ಅದು ನನ್ನ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವಾಗಿತ್ತು ಎಂದರು. ಇಂದು ಯಾರಾದರೂ ಆ ರೀತಿ ಆಡಿದರೆ, ಅವರು ಒಂದು ವರ್ಷ ತಂಡದಿಂದ ಹೊರಗುಳಿಯುವುದಿಲ್ಲ ಎಂದು ಮಾಜಿ ಆಲ್ರೌಂಡರ್ ನೋವು ತೋಡಿಕೊಂಡರು.
8/ 13
ಇದೇ ಮಾತು ಮುಂದುವರೆಸಿದ ರೈನಾ, ಐಸಿಸಿ ಅಥವಾ ವಿದೇಶಿ ಲೀಗ್ ಫ್ರ್ಯಾಂಚೈಸಿಯೊಂದಿಗೆ ಮಾತನಾಡುವ ಮೂಲಕ ವಿದೇಶಿ ಲೀಗ್ಗಳಲ್ಲಿ ಭಾರತೀಯ ಆಟಗಾರರಿಗೆ ಆಡಲು ಬಿಸಿಸಿಐಗೆ ಅವಕಾಶ ನೀಡಬೇಕು.
9/ 13
ಕನಿಷ್ಠ ನಮಗೆ ಎರಡು ವಿದೇಶಿ ಲೀಗ್ಗಳಲ್ಲಿ ಆಡಲು ಅವಕಾಶ ನೀಡುವಂತಾಗಬೇಕು. ಅಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಬಹುದು ಎಂದು ರೈನಾ ಅಭಿಪ್ರಾಯಪಟ್ಟರು.
10/ 13
ಈ ವೇಳೆ, ನಮ್ಮ ದೇಶದ ಮತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ನ ಕ್ರಿಕೆಟ್ ಚಿಂತನೆಯಲ್ಲಿ ವ್ಯತ್ಯಾಸವಿದೆ ಎಂದ ಇರ್ಫಾನ್ ಪಠಾಣ್, ಮೈಕೆಲ್ ಹಸ್ಸಿ 29-30 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರು. ಅವರು ನಿವೃತ್ತರಾದಾಗ ಅವರು ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿದ್ದರು.
11/ 13
ಆದರೆ ಭಾರತದಲ್ಲಿ, 30ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇಲ್ಲಿ ನಾವು ನಿವೃತ್ತಿ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತೇವೆ.
12/ 13
ಒಮ್ಮೆ ಬಿಸಿಸಿಐ ವ್ಯಕ್ತಿಯೊಬ್ಬರು ನಾನು ರಾಡರ್ನಲ್ಲಿ ಇಲ್ಲ ಎಂದಿದ್ದರು. ಅಂದರೆ 30 ವರ್ಷವಾಗುವಷ್ಟರಲ್ಲಿ ಒಬ್ಬರನ್ನು ಸೈಡ್ಗೆ ಸರಿಸುವುದರ ಬದಲು, ಅಂತಹ ಆಟಗಾರರಿಗೆ ಹೊರಗಿನ ಲೀಗ್ಗಳಲ್ಲಿ ಆಡಲು ಅವಕಾಶ ನೀಡಬೇಕು ಎಂದು ಇರ್ಫಾನ್ ತಿಳಿಸಿದರು.
13/ 13
ಅಂದಹಾಗೆ ಕೊನೆಯ ಬಾರಿ ಇರ್ಫಾನ್ ಪಠಾಣ್ ಏಕದಿನ ಪಂದ್ಯವಾಡಿದ್ದು ಶ್ರೀಲಂಕಾ ವಿರುದ್ಧ. ಲಂಕಾದಲ್ಲಿ ನಡೆದ ಈ ಪಂದ್ಯದಲ್ಲಿ ಪಠಾಣ್ 29 ರನ್ ಸಿಡಿಸಿದಲ್ಲದೆ, 5 ವಿಕೆಟ್ ಉರುಳಿಸಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟಿದ್ದರು.