NZ vs IND: ನಾಳೆ ಎರಡನೇ ಟಿ-20; ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಪಡೆ!, ಆದರೆ…
India vs New Zealand 2nd T20I: 2ನೇ ಟಿ-20 ಫೈಟ್ ಭಾರತಕ್ಕೆ ಅಷ್ಟೊಂದು ಸುಲಭವಿಲ್ಲ. ಹೋಮ್ ಗ್ರೌಂಡ್ ಆಗಿರುವುದರಿಂದ ನ್ಯೂಜಿಲೆಂಡ್ ತಂಡ ಬದಲಾವಣೆ ಮಾಡಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿದು ಭಾರತಕ್ಕೆ ಸವಾಲೊಡ್ಡಲಿದೆ.
ನ್ಯೂಜಿಲೆಂಡ್ ಪ್ರವಾಸವನ್ನು ಭರ್ಜರಿ ಆಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲಿ ಗೆದ್ದು ಬೀಗಿತ್ತು. ಸದ್ಯ ಎರಡನೇ ಕದನಕ್ಕೆ ಕೊಹ್ಲಿ ಪಡೆ ಸಜ್ಜಾಗಿದೆ.
2/ 12
ಎರಡನೇ ಟಿ-20 ಪಂದ್ಯ ಮೊದಲ ಟಿ-20 ನಡೆದ ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲೇ ನಡೆಯಲಿದೆ.
3/ 12
ಅತಿ ಚಿಕ್ಕದಾದ ಗ್ರೌಂಡ್ ಇದಾಗಿದ್ದು ಬೌಂಡರಿ- ಸಿಕ್ಸರ್ಗಳ ಮಳೆಯೆ ಇಲ್ಲಿ ಸುರಿಯುತ್ತದೆ. ಹೀಗಾಗಿ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
4/ 12
ಆದರೆ, 2ನೇ ಟಿ-20 ಫೈಟ್ ಭಾರತಕ್ಕೆ ಅಷ್ಟೊಂದು ಸುಲಭವಿಲ್ಲ. ಹೋಮ್ ಗ್ರೌಂಡ್ ಆಗಿರುವುದರಿಂದ ನ್ಯೂಜಿಲೆಂಡ್ ತಂಡ ಬದಲಾವಣೆ ಮಾಡಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿದು ಭಾರತಕ್ಕೆ ಸವಾಲೊಡ್ಡಲಿದೆ.
5/ 12
ಮೊದಲ ಟಿ-20 ಯಲ್ಲಿ ಉಭಯ ತಂಡಗಳ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಭಾರತ ಬ್ಯಾಟಿಂಗ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದರೂ, ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಬಿಟ್ಟರೆ ಮತ್ಯಾರು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ.
6/ 12
ಹೀಗಾಗಿ ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗುವ ಅಂದಾಜಿದೆ.
7/ 12
ಇತ್ತ ವಿಕೆಟ್ ಕೀಪಿಂಗ್ ಜಾಗವನ್ನು ಭದ್ರ ಪಡಿಸಿಕೊಳ್ಳುತ್ತಿರುವ ಕೆ ಎಲ್ ರಾಹುಲ್ ಎರಡನೇ ಟಿ-20 ಯಲ್ಲೂ ಕೀಪರ್ ಆಗಿ ಮುಂದುವರೆಯುತ್ತಾರಾ ಅಥವಾ ರಿಷಭ್ ಪಂತ್ಗೆ ಸ್ಥಾನ ಸಿಗುತ್ತಾ ಎಂಬುವುದು ಕುತೂಹಲ ಕೆರಳಿಸಿದೆ.
8/ 12
ಇನ್ನು ಟಿ-20 ಇತಿಹಾಸದಲ್ಲಿ ದೊಡ್ಡ ಗುರಿಯನ್ನು ಬೆನ್ನತ್ತಿದ ದಾಖಲೆ ಇರುವುದು ಇದೇ ಆಕ್ಲೆಂಡ್ ಮೈದಾನದಲ್ಲಿ. ಹೀಗಾಗಿ ಇಲ್ಲಿ ಟಾಸ್ ಕೂಡ ಪ್ರಮುಖವಾಗಲಿದೆ. ಚೇಸಿಂಗ್ ಮಾಡುವ ತಂಡ ಗೆಲ್ಲುವ ಅವಕಾಶ ಹೆಚ್ಚಿದೆ.
9/ 12
ಭಾರತ ಹಾಗೂ ನ್ಯೂಜಿಲೆಂಡ್ ಈವರೆಗೆ ಒಟ್ಟು 13 ಟಿ-20 ಪಂದ್ಯಗಳನ್ನಾಡಿದೆ. ಇದರಲ್ಲಿ ಕಿವೀಸ್ 8 ಪಂದ್ಯ ಗೆದ್ದರೆ, ಭಾರತ 4 ಪಂದ್ಯಗಳಲ್ಲಿ ಜಯ ಸಾಧಿಸಿದೆಯಷ್ಟೆ.
10/ 12
ಭಾರತದ ಕಾಲಮಾನದ ಪ್ರಕಾರ 11:50ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಪಂದ್ಯ ಮಧ್ಯಾಹ್ನ 12:20ಕ್ಕೆ ಆರಂಭವಾಗಲಿದೆ.
11/ 12
ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು.
12/ 12
ಟಾರ್ಗೆಟ್ ಬೆನ್ನಟ್ಟಿದ ಭಾರತ 19 ಓವರ್ನಲ್ಲೇ 4 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು.