ಅದರೊಂದಿಗೆ ವಿವಾದ ಕೂಡ ಯುವಿ ಮೈ ಎಳೆದುಕೊಳ್ಳುತ್ತಿದ್ದಾರೆ. ಏಕೆಂದರೆ ತಿಂಗಳುಗಳ ಹಿಂದೆಯಷ್ಟೇ ಪಾಕ್ ಆಟಗಾರ ಶಾಹಿದ್ ಅಫ್ರಿದಿ ಅವರ ದೇಣಿಗೆ ಸಂಗ್ರಹಕ್ಕೆ ಎಲ್ಲರೂ ಕೈ ಜೋಡಿಸುವಂತೆ ಸಿಕ್ಸರ್ ಸಿಂಗ್ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಫ್ರಿದಿ ಕಾಶ್ಮೀರದ ಬಗ್ಗೆ ಚಕಾರವೆತ್ತಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಯುವಿ ವಿರುದ್ಧ ಟೀಕಾ ಪ್ರಹಾರ ನಡೆಸಲಾಗಿತ್ತು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಯುವಿ, ನನ್ನಿಂದಾದ ತಪ್ಪಿಗೆ ಕ್ಷಮಾಪಣೆ ಕೇಳುತ್ತೇನೆ. 'ಬಣ್ಣ, ಜಾತಿ, ಮತ ಅಥವಾ ಲಿಂಗದ ಆಧಾರದ ಮೇಲೆ ನಾನು ಯಾವುದೇ ತಾರತಮ್ಯವನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುತ್ತೇನೆ. ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ಈ ಸಂದರ್ಭದಲ್ಲಿ ಅಚಾನಕ್ಕಾಗಿ ಹೇಳಿರುವೆ. ಅದು ಅನಗತ್ಯ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಜವಾಬ್ದಾರಿಯುತ ಭಾರತೀಯನಾಗಿ, ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಈ ಮೂಲಕ ನಾನು ವಿಷಾದ ವ್ಯಕ್ತಪಡಿಸಲು ಬಯಸುತ್ತೇನೆ " ಎಂದು ಯುವಿ ಟ್ವೀಟ್ ಮಾಡಿದ್ದಾರೆ.