ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ತನ್ನ ಕಿಲ್ಲರ್ ಸ್ಪಿನ್‌ನಿಂದ ಅದೆಷ್ಟೋ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೋ ಗೊತ್ತಿಲ್ಲ. ಅವರ ಬೌಲಿಂಗ್ ಶೈಲಿ ಸಾಕಷ್ಟು ಪ್ರಸಿದ್ಧವಾಗಿದೆ. ಮುತ್ತಯ್ಯ ಮುರಳೀಧರನ್ ಅವರ ಬೌಲಿಂಗ್ ಆಕ್ಷನ್ ನೋಡಿ ದೊಡ್ಡ ಬ್ಯಾಟ್ಸ್‌ಮನ್‌ಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಈ ಆಫ್ ಸ್ಪಿನ್ನರ್ ತಮ್ಮ ವೃತ್ತಿಜೀವನದಲ್ಲಿ 800 ಟೆಸ್ಟ್ ಮತ್ತು 534 ODI ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಜಗತ್ತಿನ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ತನ್ನ ಬೌಲಿಂಗ್‌ನಿಂದ ಹೆದರಿಸುತ್ತಿದ್ದ ಈ ಸ್ಪಿನ್ನರ್‌ಗೆ ಭಾರತೀಯ ಹುಡುಗಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. (Madhi Malar/Instagram)
ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಲವ್ಸ್ಟೋರಿ ನಿಜಕ್ಕೂ ಬಾಲಿವುಡ್ ಸಿನಿಮಾದಂತಿದೆ. ಅದರ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಮುತ್ತಯ್ಯ ಮುರಳೀಧರನ್ ಅವರು ಭಾರತೀಯ ಹುಡುಗಿಯನ್ನು ತಮ್ಮ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಬ್ಬರ ಮೊದಲ ಭೇಟಿಯ ಕಥೆಯು ಸಾಕಷ್ಟು ಆಸಕ್ತಿದಾಯಕವಾಗಿದೆ. ವಾಸ್ತವವಾಗಿ, ಮುತ್ತಯ್ಯ ಮುರಳೀಧರನ್ ಮದುವೆಯಲ್ಲಿ ಎಂದಿಗೂ ಆಸಕ್ತಿ ಹೊಂದಿರಲಿಲ್ಲವಂತೆ, ಆದರೆ ಭಾರತದ ಮಧಿಮಲಾರ್ನ್ನು ನೋಡಿದ ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡರಂತೆ. ಮುತ್ತಯ್ಯ ಅವರು ಮಧಿಮಲಾರನ್ನು 2004 ರಲ್ಲಿ ಭೇಟಿಯಾಗಿ 2005 ರಲ್ಲಿ ವಿವಾಹವಾಗಿದ್ದಾರೆ. ಹಾಗಾದರೆ ಮುತ್ತಯ್ಯ ಮುರಳೀಧರನ್ ಮತ್ತು ಮಧಿಮಲರ್ ರಾಮಮೂರ್ತಿ ಹೇಗೆ ಭೇಟಿಯಾದರು ಎಂಬ ಕುತೂಹಲಕಾರಿ ಸಂಗತಿ ಇಲ್ಲಿದೆ. (Madhi Malar/Instagram)
ಖ್ಯಾತ ತಮಿಳು ನಟ ಚಂದ್ರಶೇಖರ್ ಅವರು ಚೆನ್ನೈನಲ್ಲಿರುವ ತಮಿಳು ಟೆಲಿವಿಷನ್ ಚಾನೆಲ್ ಸನ್ ಟೆಲಿವಿಷನ್‌ನ ಸ್ಟುಡಿಯೋಗೆ ಬಂದಾಗ ಮುತ್ತಯ್ಯ ಮುರಳೀಧರನ್ ಅವರನ್ನು ಭೇಟಿಯಾಗಿದ್ದರು. ಚಂದ್ರಶೇಖರ್ರನ್ನು ನೋಡಿದ ತಕ್ಷಣ ಮುರಳೀಧರನ್ ಅವರು ಸೂಪರ್ ಸ್ಟಾರ್ರನ್ನು ಗುರುತಿಸಿದ್ದಾರೆ. ತಕ್ಷಣ ಮುತ್ತಯ್ಯ ಅವರು ಚಂದ್ರಶೇಖರ್ ಬಳಿ ಬಂದು ತಮ್ಮ ತಾಯಿ ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡು ತಮ್ಮ ತಾಯಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. (Madhi Malar/Instagram)
ಮುತ್ತಯ್ಯ ಮುರಳೀಧರನ್ ಅವರ ತಾಯಿ ಮಗನ ಮದುವೆಗೆ ಹೆಣ್ಣು ಹುಡುಕುತ್ತಿದ್ದರು. ಮತ್ತೊಂದೆಡೆ, ಚಂದ್ರಶೇಖರ್ 24 ವರ್ಷದ ಮಧಿಮಲಾರ್ರನ್ನು ಬಾಲ್ಯದಿಂದಲೂ ತಿಳಿದಿದ್ದರು. ಈ ಸಂದರ್ಭದಲ್ಲಿ ಮುರಳೀಧರನಿಗೆ ಮಧುಮಲಾರ್ ಹೆಸರನ್ನು ಮುರಳೀಧರನ್ ತಾಯಿಗೆ ಸೂಚಿಸಿದ್ದಾರೆ. ಮುರಳೀಧರನ ತಾಯಿ ಮಧಿಮಲಾರ್ ಬಗ್ಗೆ ತಿಳಿದು ಖುಷಿಪಟ್ಟಿದ್ದಾರೆ. ಚಂದ್ರಶೇಖರ್ ಮದಿಮಲಾರ್ ತಂದೆ ಡಾ.ಎಸ್.ರಾಮಮೂರ್ತಿಯವರ ಸ್ನೇಹಿತರಾಗಿದ್ದರು. ಹಾಗಾಗಿ ಮಧಿಮಲಾರ್ ಕುಟುಂಬಕ್ಕೆ ಮುರಳೀಧರನ್ ಬಗ್ಗೆ ಮಾಹಿತಿ ನೀಡಿದ್ದಾರೆ. (ಮಧಿಮಲಾರ್/ಇನ್‌ಸ್ಟಾಗ್ರಾಮ್)
ಚಂದ್ರಶೇಖರ್ ಅವರ ಸಲಹೆ ಮೇರೆಗೆ ಮುರಳೀಧರನ್ ಜೊತೆ ಅವರ ತಾಯಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೊದಲು ಮುರಳಿ ಹುಡುಗಿಯನ್ನು ನೋಡಲು ನಿರಾಕರಿಸಿದ್ದಾರೆ. ಏಕೆಂದರೆ ಮುರಳೀಧರನ್ ಮದುವೆಯಲ್ಲಿ ಆಸಕ್ತಿ ಇರಲಿಲ್ಲ, ಅವರು ಕ್ರಿಕೆಟ್ ಮತ್ತು ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಬಯಸಿದ್ದರು. ಆದರೆ ಮುರಳೀಧರನ್ ಅವರ ತಾಯಿ ಮತ್ತು ಚಂದ್ರಶೇಖರ್ ಹೇಗೋ ಒತ್ತಾಯ ಮಾಡಿ ಮಧಿಮಲಾರ್ರನ್ನು ಭೇಟಿಯಾಗಲು ವ್ಯವಸ್ಥೆ ಮಾಡಿದ್ದಾರೆ. (Madhi Malar/Instagram)
ಮೊದಲ ಭೇಟಿಯಿಂದಲೇ ಮುರಳಿ ತಮ್ಮ ಭಾವಿ ಪತ್ನಿ ಜೊತೆ ತನ್ನ ಕ್ರಿಕೆಟ್ ಬಗ್ಗೆ ಮಾತನಾಡಿದರೆ, ಮಧಿಮಲಾರ್ ತಮ್ಮ ಹವ್ಯಾಸದ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರ ನಡುವೆ ಉತ್ತಮ ಮಾತುಕತೆ ನಡೆದಿದ್ದು, ಮುರಳೀಧರನ್ ಅವರು ಮಲಾರ್ಗೆ ಎಂಗೇಜ್ ಮೆಂಟ್ ರಿಂಗ್ ನೀಡಿದ್ದಾರೆ. ಒಂದು ಗಂಟೆಯ ಮಾತುಕತೆಯಲ್ಲಿ ಇಬ್ಬರೂ ಮೇಡ್ ಫಾರ್ ಈಚ್ ಅದರ್ ಎಂಬುದನ್ನು ನಿರ್ಧರಿಸಿಕೊಂಡಿದ್ದಾರೆ. .(Muthiah Muralidaran/Instagram)
ಎರಡು ಕುಟುಂಬಗಳು ಒಪ್ಪಿಕೊಂಡ ನಂತರ ಚೆನ್ನೈನಲ್ಲಿ ತಮಿಳು ಸಂಪ್ರದಾಯದಂತೆ ಮುರಳೀಧರನ್ ಮತ್ತು ಮಧಿಮಲಾರ್ ವಿವಾಹ ಜರುಗಿತು. ಮಧಿಮಲಾರ್ ತನ್ನ ಮದುವೆಯಲ್ಲಿ ತಮಿಳು ಸಾಂಪ್ರದಾಯದಂತೆ ಕೆಂಪು ಬಣ್ಣದ ಕಾಂಚೀಪುರಂ ರೇಷ್ಮೆ ಸೀರೆಯನ್ನು ಧರಿಸಿದರೆ, ಮುತ್ತಯ್ಯ ಮುರಳೀಧರನ್ ಬಿಳಿ ರೇಷ್ಮೆ ಧೋತಿ ಮತ್ತು ಶರ್ಟ್ ಧರಿಸಿದ್ದರು. ತಮಿಳುನಾಡಿನ ಕೆಲವು ರಾಜಕಾರಣಿಗಳು ಮತ್ತು ಶ್ರೀಲಂಕಾದ ಅನೇಕ ಕ್ರಿಕೆಟಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಈ ದಂಪತಿಗೆ ಕ್ರಿಶಾ ಎಂಬ ಮಗಳು ನತ್ತು ನರೇನ್ ಎಂಬ ಮಗನಿದ್ದಾನೆ. (Muthiah Muralidaran/Instagram)
ಎರಡು ಕುಟುಂಬಗಳು ಒಪ್ಪಿಕೊಂಡ ನಂತರ ಚೆನ್ನೈನಲ್ಲಿ ತಮಿಳು ಸಂಪ್ರದಾಯದಂತೆ ಮುರಳೀಧರನ್ ಮತ್ತು ಮಧಿಮಲಾರ್ ವಿವಾಹ ಜರುಗಿತು. ಮಧಿಮಲಾರ್ ತನ್ನ ಮದುವೆಯಲ್ಲಿ ತಮಿಳು ಸಾಂಪ್ರದಾಯದಂತೆ ಕೆಂಪು ಬಣ್ಣದ ಕಾಂಚೀಪುರಂ ರೇಷ್ಮೆ ಸೀರೆಯನ್ನು ಧರಿಸಿದರೆ, ಮುತ್ತಯ್ಯ ಮುರಳೀಧರನ್ ಬಿಳಿ ರೇಷ್ಮೆ ಧೋತಿ ಮತ್ತು ಶರ್ಟ್ ಧರಿಸಿದ್ದರು. ತಮಿಳುನಾಡಿನ ಕೆಲವು ರಾಜಕಾರಣಿಗಳು ಮತ್ತು ಶ್ರೀಲಂಕಾದ ಅನೇಕ ಕ್ರಿಕೆಟಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಈ ದಂಪತಿಗೆ ಕ್ರಿಶಾ ಎಂಬ ಮಗಳು ನತ್ತು ನರೇನ್ ಎಂಬ ಮಗನಿದ್ದಾನೆ. (Madhi Malar/Instagram)