ಧೋನಿ ನಿವೃತ್ತಿ ಘೋಷಿಸದಿರಲು ಟೀಂ ಇಂಡಿಯಾದ ಈ ಆಟಗಾರನೇ ಕಾರಣ..!
News18 Kannada | September 25, 2019, 3:42 PM IST
1/ 15
ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಯಶಸ್ವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ತಣ್ಣಗಾಗುವಂತೆ ಕಾಣುತ್ತಿಲ್ಲ.
2/ 15
ತಂಡದಲ್ಲಿ ಆಯ್ಕೆಯಾಗದಿದ್ದರೂ ಪ್ರತಿ ಪಂದ್ಯಕ್ಕೂ ಮುನ್ನ ಎಂಎಸ್ಡಿ ಅವರ ಹೆಸರು ಚರ್ಚೆಗೆ ಕಾರಣವಾಗುತ್ತಿದೆ.
3/ 15
ವಿಶ್ವಕಪ್ ಬಳಿಕ ನಿವೃತ್ತಿ ಹೇಳಲಿದ್ದಾರೆ ಎನ್ನಲಾಗಿತ್ತಾದರೂ, ಧೋನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗಿರಲಿಲ್ಲ. ಇದೀಗ ಮೈದಾನದಿಂದ ದೂರವಿದ್ದರೂ ಧೋನಿಯ ಕ್ರಿಕೆಟ್ ವಿದಾಯ ಸುದ್ದಿಗಳು ಭಾರೀ ಮಹತ್ವ ಪಡೆಯುತ್ತಿದೆ.
4/ 15
ಆದರೆ ಧೋನಿ ನಿವೃತ್ತಿ ಹಿಂದಿರುವ ಅಸಲಿ ವಿಚಾರವೊಂದು ಇದೀಗ ಬಿಸಿಸಿಐ ಮೂಲಗಳಿಂದ ಹೊರಬಿದ್ದಿದೆ.
5/ 15
ಟೀಂ ಇಂಡಿಯಾಗೆ ಬಲಿಷ್ಠ ವಿಕೆಟ್ ಕೀಪರ್ರೊಬ್ಬರ ಅವಶ್ಯಕತೆಯಿದೆ. ಈ ಸ್ಥಾನವನ್ನು ತುಂಬುವ ಆಟಗಾರರಲ್ಲಿ ರಿಷಭ್ ಪಂತ್ ಹೆಸರು ಅಗ್ರಸ್ಥಾನದಲ್ಲಿದೆ.
6/ 15
4ನೇ ಕ್ರಮಾಂಕದ ಟೀಂ ಇಂಡಿಯಾ ಬ್ಯಾಟಿಂಗ್ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಕೂಡ ಈ ಯುವ ಆಟಗಾರರನಿಗೆ ಇದೆ. ಆದರೆ ಕೀಪಿಂಗ್ ವಿಚಾರದಲ್ಲಿ ಭಾರೀ ಪೈಪೋಟಿ ಕಂಡು ಬರುತ್ತಿದೆ.
7/ 15
ಒಂದು ವೇಳೆ ಧೋನಿ ಏಕಾಏಕಿ ನಿವೃತ್ತಿ ಘೋಷಿಸಿದರೆ ವಿಕೆಟ್ ಕೀಪರ್ ಸ್ಥಾನ ಬೇರೆಯವರ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
8/ 15
ಆದರೆ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ಥಾನದಲ್ಲಿ ರಿಷಭ್ ಪಂತ್ ಅವರನ್ನು ನೋಡಲು ಇಚ್ಛಿಸಿದ್ದಾರೆ. ಒಂದಷ್ಟು ಆತ್ಮವಿಶ್ವಾಸ ಮೂಡುವವರೆಗೆ ಪಂತ್ಗೆ ತಂಡದಲ್ಲಿ ಸ್ಥಾನ ಸಿಗಲಿ ಎಂಬುದು ಧೋನಿಯ ಪ್ಲ್ಯಾನ್.
9/ 15
ಒಂದು ವೇಳೆ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರೆ ಪಂತ್ ಸ್ಥಾನದ ಪರಿಣಾಮ ಬೀಳುವುದರಿಂದ ಯುವ ಆಟಗಾರರನಿಗೆ ತನ್ನ ಸಾಮರ್ಥ್ಯ ತೋರಿಸಲು ಒಂದಷ್ಟು ಅವಕಾಶಗಳು ಸಿಗಲಿ ಎಂದು ಬಯಸಿದ್ದಾರೆ ಧೋನಿ.
10/ 15
ಈ ಕಾರಣದಿಂದಲೇ ಧೋನಿ ವಿಶ್ವಕಪ್ ಬಳಿಕ ತಂಡದ ಆಯ್ಕೆಗೆ ತಮ್ಮ ಹೆಸರನ್ನು ಸೂಚಿಸಿಲ್ಲ ಎಂದು ಹೇಳಲಾಗಿದೆ.
11/ 15
ಇನ್ನು ಧೋನಿಯ ನಿವೃತ್ತಿ ತಂಡದ ಮೇಲೆ ಪ್ರಭಾವ ಬೀರಲಿದ್ದು, ಇದೇ ಕಾರಣದಿಂದ ಈಗಲೇ ಯುವ ವಿಕೆಟ್ ಕೀಪರ್ರೊಬ್ಬರನ್ನು ಸಜ್ಜುಗೊಳಿಸಲು ತಯಾರಿಯಲ್ಲಿದೆ ಬಿಸಿಸಿಐ.
12/ 15
ಒಂದು ಮೂಲದ ಪ್ರಕಾರ ನವೆಂಬರ್- ಡಿಸೆಂಬರ್ನಲ್ಲಿ ನಡೆಯುವ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಮಹೇಂದ್ರ ಸಿಂಗ್ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಆ ಬಳಿಕ ತಮ್ಮ ವಿದಾಯ ಪಂದ್ಯವಾಡಲಿದ್ದಾರೆ ಎಂದು ಹೇಳಲಾಗಿದೆ.