ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಾಲ್ಯದಿಂದಲೂ ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿದ್ದರು. ಅವರು 7 ಜುಲೈ 1981 ರಂದು ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ಜನಿಸಿದರು. ಸದ್ಯ ಅವರ ವಯಸ್ಸು 41 ವರ್ಷ. ಆ ಸಮಯದಲ್ಲಿ ಜಾರ್ಖಂಡ್ ಬಿಹಾರದ ಭಾಗವಾಗಿತ್ತು. ಅವರ ತಂದೆ ಮಾನ್ ಸಿಂಗ್ ಜೂನಿಯರ್ ಮ್ಯಾನೇಜ್ಮೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಮಹೇಂದ್ರ ಸಿಂಗ್ ಧೋನಿ ತಮ್ಮ ಸಹಪಾಠಿಯೇ ಆಗಿದ್ದ ಸಾಕ್ಷಿ ಧೋನಿ ಅವರನ್ನು 4 ಜುಲೈ 2010 ರಂದು ವಿವಾಹವಾದರು. 2002 ರಲ್ಲಿ ಧೋನಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವಾಗ ಪ್ರಿಯಾಂಕಾ ಝಾ ಅವರನ್ನು ಪ್ರೀತಿಸುತ್ತಿದ್ದರಂತೆ. ಆದರೆ ದುರದೃಷ್ಟವಶಾತ್ ಪ್ರಿಯಾಂಕಾ ಅದೇ ವರ್ಷ ಅಪಘಾತದಲ್ಲಿ ಸಾವನ್ನಪ್ಪಿದರು. ಅದರ ನಂತರ ಅವರು ದಕ್ಷಿಣ ಚಿತ್ರರಂಗದ ನಟಿ ಲಕ್ಷ್ಮಿ ರೈ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ಗಾಳಿಸುದ್ದಿ ಹಬ್ಬಿತ್ತು. ಸಾಕ್ಷಿ ಧೋನಿ ಮತ್ತು ಎಂಎಸ್ ಧೋನಿಗೆ ಜೀವಾ ಎಂಬ ಮಗಳಿದ್ದಾಳೆ.