Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

Yuzvendra Chahal: ಅವರ ಸಲಹೆಯಂತೆ ಬಾಲ್ ಮಾಡಿದಾಗ ಡುಮಿನಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಅಷ್ಟು ನಿಖರವಾಗಿ ಧೋನಿ ಬೌಲಿಂಗ್ ಮಾಡಲು ಸೂಚನೆ ನೀಡುತ್ತಾರೆ ಎಂದು ಚಹಲ್ ತಿಳಿಸಿದರು.

First published:

  • 110

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಭಾರತೀಯ ತಂಡದ ಇತರರಿಗೆ ಸ್ಪೂರ್ತಿದಾಯಕ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಧೋನಿ ಪ್ರಸ್ತುತ ತಂಡದ ನಾಯಕರಾಗದಿದ್ದರೂ ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದರಲ್ಲಿ ಇನ್ನೂ ಸಕ್ರೀಯರಾಗಿದ್ದಾರೆ.

    MORE
    GALLERIES

  • 210

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಇದೇ ಕಾರಣಕ್ಕೆ ಧೋನಿ ನಾಯಕತ್ವ ತ್ಯಜಿಸಿದಾಗ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ನೀವು ಯಾವಾಗಲೂ ನನಗೆ ನಾಯಕರಾಗಿರುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    MORE
    GALLERIES

  • 310

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಇದೀಗ ಮತ್ತೊಮ್ಮೆ ಧೋನಿ ತಂಡದಲ್ಲಿನ ಇತರೆ ಆಟಗಾರರನ್ನು ಹೇಗೆ ಪ್ರಭಾವಿಸಿದ್ದಾರೆ ಎಂಬುದನ್ನು ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 410

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಸಂದರ್ಶನವೊಂದರಲ್ಲಿ ಮಾತನಾಡಿದ ಚಹಲ್, ಧೋನಿ ಒಂದಾರ್ಥದಲ್ಲಿ ಸಮಸ್ಯೆ ನಿವಾರಕರು. ಹಲವು ಬಾರಿ ಮೈದಾನದಲ್ಲಿನ ನಮ್ಮ ಸಮಸ್ಯೆಯನ್ನ ಪರಿಹರಿಸಿದ್ದಾರೆ.

    MORE
    GALLERIES

  • 510

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ಹಲವು ಬಾರಿ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂದು ಧೋನಿ ಸಲಹೆ ನೀಡುತ್ತಾರೆ. ಅದುವೇ ತಂಡದ ಗೆಲುವಿಗೆ ಕಾರಣವಾಗಿತ್ತೆ ಎಂದು ಚಹಲ್ ತಿಳಿಸಿದರು.

    MORE
    GALLERIES

  • 610

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ನನ್ನ ಹಾಗೂ ಕುಲ್​ದೀಪ್ ಯಾದವ್​ ಅವರ ಸಮಸ್ಯೆಗಳನ್ನು ಪರಿಹರಿಸುವುದೇ ಧೋನಿ. ನಮ್ಮ ಬೌಲಿಂಗ್​ನಲ್ಲಿ ಸಿಕ್ಸರ್, ಫೋರ್​ಗಳು ಬಾರಿಸಿದ್ರೆ, ಧೋನಿ ನಮಗೆ ಮಾರ್ಗದರ್ಶನ ನೀಡುತ್ತಾರೆ.

    MORE
    GALLERIES

  • 710

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ನಮ್ಮ ಬಳಿ ಬಂದು ಹೆಗಲ ಮೇಲೆ ಕೈಹಾಕಿ, ಗೂಗ್ಲಿ ಎಸೆದರೆ ಆತನಿಗೆ ಆಡಲಾಗುವುದಿಲ್ಲ ಸರಿಯಾಗಿ ಹೇಳುತ್ತಾರೆ. ಹೀಗೆ ಗೂಗ್ಲಿ ಎಸೆದು ನಾನು ವಿಕೆಟ್ ಕೂಡ ಪಡೆದಿರುವೆ ಎಂದರು ಚಹಲ್.

    MORE
    GALLERIES

  • 810

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ ನನಗೆ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಎಡಗೈ ಬ್ಯಾಟ್ಸ್​ಮನ್ ಡುಮಿನಿ ತುಂಬಾ ಹೊತ್ತು ಕ್ರೀಸ್ ಕಚ್ಚಿ ಆಡುತ್ತಿದ್ದರು. ನಾನು ಕೂಡ ಅವರ ವಿಕೆಟ್ ಉರುಳಿಸಲು ಯತ್ನಿಸುತ್ತಿದ್ದೆ.

    MORE
    GALLERIES

  • 910

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಇದೇ ವೇಳೆ ಧೋನಿ ನನಗೆ ನೇರವಾಗಿ ಸ್ಟಂಪ್​ನ್ನು ಗುರಿಯಾಗಿಸಿ ಚೆಂಡೆಸೆಯಲು ಹೇಳಿದ್ರು. ಅವರ ಸಲಹೆಯಂತೆ ಬಾಲ್ ಮಾಡಿದಾಗ ಡುಮಿನಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಅಷ್ಟು ನಿಖರವಾಗಿ ಧೋನಿ ಬೌಲಿಂಗ್ ಮಾಡಲು ಸೂಚನೆ ನೀಡುತ್ತಾರೆ ಎಂದು ಚಹಲ್ ತಿಳಿಸಿದರು.

    MORE
    GALLERIES

  • 1010

    Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!

    ಧೋನಿ

    MORE
    GALLERIES