ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

First published:

  • 110

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಿಂದೊಮ್ಮೆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ನೀಡಲು ಒಪ್ಪಿರಲಿಲ್ಲ ಎಂಬುದನ್ನು ಭಾರತೀಯ ಕ್ರಿಕೆಟ್ ತಂಡ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ದಿಲೀಪ್ ವೆಂಗ್​ಸರ್ಕಾರ್ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 210

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಸಂದರ್ಶನವೊಂದರಲ್ಲಿ ಮಾತನಾಡಿದ ಮಾಜಿ ಆಟಗಾರ ವೆಂಗ್​ಸರ್ಕಾರ್, ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದ ವೇಳೆ ಭಾರತ ತಂಡಕ್ಕಾಗಿ ಆಟಗಾರನ್ನು ಸೆಲೆಕ್ಟ್ ಮಾಡುವುದು ಸವಾಲಾಗಿತ್ತು. ಇದೇ ವೇಳೆ ಧೋನಿ ಅವರು ಕೊಹ್ಲಿಗೆ ತಂಡದಲ್ಲಿ ಚಾನ್ಸ್​ ನೀಡಲು ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ.

    MORE
    GALLERIES

  • 310

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    2008 ರಲ್ಲಿ ಟೀಂ ಇಂಡಿಯಾವನ್ನು ಆಯ್ಕೆ ಮಾಡಲು ಸಭೆ ಸೇರಲಾಗಿತ್ತು. ಇದೇ ಅಂಡರ್​-19 ವಿಶ್ವಕಪ್ ಗೆದ್ದು ವಿರಾಟ್ ಕೊಹ್ಲಿ ಪಡೆ ಇಡೀ ಆಯ್ಕೆಗಾರರ ಗಮನ ಸೆಳೆದಿದ್ದರು. ಅದರಲ್ಲೂ ಕೊಹ್ಲಿ ಪ್ರದರ್ಶನ ಅದ್ಭುತವಾಗಿತ್ತು.

    MORE
    GALLERIES

  • 410

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ನಾವು ಶ್ರೀಲಂಕಾ ಸರಣಿಗಾಗಿ ತಂಡದ ಆಯ್ಕೆ ಮಾಡಲು ಆಗಿನ ಟೀಂ ಇಂಡಿಯಾ ಕೋಚ್ ಗ್ಯಾರಿ ಕಸ್ಟರ್ನ್​ ಹಾಗೂ ಎಂ.ಎಸ್ ಧೋನಿ ಅವರೊಂದಿಗೆ ಚರ್ಚಿಸಲಾಗಿತ್ತು. ಇದೇ ವೇಳೆ ಯುವ ಆಟಗಾರ ಕೊಹ್ಲಿಗೆ ಅವಕಾಶ ನೀಡಲು ನಾವು ನಿರ್ಧರಿಸಿದ್ದೆವು. ಆದರೆ...

    MORE
    GALLERIES

  • 510

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಆದರೆ ಈ ಆಯ್ಕೆಯನ್ನು ಧೋನಿ ಆರಂಭದಲ್ಲಿ ಒಪ್ಪಿರಲಿಲ್ಲ. ವಿರಾಟ್ ಕೊಹ್ಲಿಯ ಆಟವನ್ನು ನಾನು ನೋಡಿಲ್ಲ. ಹಾಗಾಗಿ ತಂಡದಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ಹಳೆಯ ತಂಡವನ್ನೇ ಮುಂದುವರೆಸುವಂತೆ ಧೋನಿ ಬೇಡಿಕೆ ಇಟ್ಟಿದ್ದರು ಎಂದು ದಿಲೀಪ್ ವೆಂಗ್​ಸರ್ಕಾರ್ ತಿಳಿಸಿದರು.

    MORE
    GALLERIES

  • 610

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಇದೇ ವೇಳೆ ನಾನು, ನೀವು (ಧೋನಿ) ಮತ್ತು ಗ್ಯಾರಿ ಆಡುವುದನ್ನು ನೋಡಿಲ್ಲ ಎಂದು ಹೇಳಿದೆ. ಆಗ ಅವರು ಮರುಮಾತಿಲ್ಲದಂತಾದರು. ನಿಜ ಹೇಳಬೇಕೆಂದರೆ ನಾನು ಧೋನಿ ಮತ್ತು ಗ್ಯಾರಿ ಕಸ್ಟರ್ನ್ ಅವರ ಆಟ ನೋಡಿದ್ದೇನೆ. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ಸುಳ್ಳು ಹೇಳಿದೆ. ಏಕೆಂದರೆ...

    MORE
    GALLERIES

  • 710

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಯುವ ಆಟಗಾರನಾಗಿದ್ದ ಕೊಹ್ಲಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಆಯ್ಕೆ ಮಾಡಲು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೆ. ಹೀಗಾಗಿ ಧೋನಿ ಮತ್ತು ಗ್ಯಾರಿ ಕಸ್ಟರ್ನ್​ ಅವರ ಹೇಳಿಕೆಯನ್ನು ಒಪ್ಪಲು ನಾನು ಸುತಾರಂ ತಯಾರಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ತಿಳಿಸಿದರು.

    MORE
    GALLERIES

  • 810

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಿಗೆ ಅವಕಾಶ ನೀಡಲು ಮುಂದಾಗಿದ್ದರು. ಸಿಎಸ್​ಕೆ ತಂಡವನ್ನು ಪ್ರತಿನಿಧಿಸುತ್ತಿದ್ದ ಬದ್ರಿನಾಥ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಸಿಎಸ್​ಕೆ ತಂಡದ ಮಾಲೀಕ ಶ್ರೀನಿವಾಸನ್ ಯೋಜನೆ ರೂಪಿಸಲಾಗಿತ್ತು.

    MORE
    GALLERIES

  • 910

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಇದರಿಂದ ತಂಡದ ಆಯ್ಕೆದಾರರ ಮೇಲೆ ಹೆಚ್ಚುವರಿ ಒತ್ತಡವಿತ್ತು. ಆದರೆ ನಾನು ಒಪ್ಪಿರಲಿಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಆಯ್ಕೆಯನ್ನು ಮಾಡಿದೆ. ಇದರಿಂದ ಶ್ರೀನಿವಾಸನ್ ಅವರಿಗೆ ಸಂತೋಷವಾಗಿರಲಿಲ್ಲ.

    MORE
    GALLERIES

  • 1010

    ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

    ಇದಾದ ಬಳಿಕ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನಕ್ಕೆ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಅವರನ್ನು ನೇಮಿಸಲಾಗಿತ್ತು ಎಂದು ದಿಲೀಪ್ ವೆಂಗ್​ಸರ್ಕಾರ್ ತಿಳಿಸಿದರು.

    MORE
    GALLERIES