ಮಹೇಂದ್ರ ಸಿಂಗ್ ಧೋನಿ: ಟೀಮ್ ಇಂಡಿಯಾ ಮಾಜಿ ನಾಯಕ 2019 ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಭಾಗವಹಿಸಿಲ್ಲ. ಇದರ ಹೊರತಾಗಿ ಈ ಬಾರಿ ನಡೆಯಲಿರುವ ಐಪಿಎಲ್ ಮೂಲಕ ಟಿ20 ವಿಶ್ವಕಪ್ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದರು. ಅಲ್ಲದೆ ಈ ಟೂರ್ನಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು ಎನ್ನಲಾಗಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ಒಂದು ವರ್ಷ ಮುಂದಕ್ಕೆ ಹೋಗಿದೆ. 39ರ ಹರೆಯದ ಧೋನಿ 40ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರಾ ಎಂಬುದೇ ಸದ್ಯದ ಪ್ರಶ್ನೆ.
ಡ್ವೇನ್ ಬ್ರಾವೋ: ವೆಸ್ಟ್ ಇಂಡೀಸ್ ತಂಡದ ಆಲ್ರೌಂಡ್ ಈ ವರ್ಷ ನಡೆಯಬೇಕಿದ್ದ ಟಿ-20 ವಿಶ್ವಕಪ್ ಮೂಲಕ ವಿದಾಯ ಹೇಳಲು ನಿರ್ಧರಿಸಿದ್ದರು. ಟೆಸ್ಟ್ ಕ್ರಿಕೆಟ್ನಿಂದ ದೂರವೇ ಉಳಿದಿದ್ದ ಬ್ರಾವೊ ಚುಟುಕು ಕ್ರಿಕೆಟ್ನತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದರು. ಆದರೆ ಇದೀಗ ಬ್ರಾವೊ ಲೆಕ್ಕಚಾರಗಳು ತಲೆಕೆಳಗಾಗಿ ಟಿ20 ವಿಶ್ವಕಪ್ ಒಂದು ವರ್ಷ ಮುಂದಕ್ಕೆ ಹೋಗಿದೆ. ಮುಂದಿನ ವಿಶ್ವಕಪ್ ವೇಳೆ 38 ವರ್ಷ ವಯಸ್ಸಿನ ಬ್ರಾವೊ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಾ ಎಂಬುದು ಕಾದುನೋಡಬೇಕಿದೆ.
ಕ್ರಿಸ್ ಗೇಲ್: ವಿಶ್ವದ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ಗೆ ಈಗ 41 ವರ್ಷ. ವೆಸ್ಟ್ ಇಂಡೀಸ್ ಕ್ರಿಕೆಟ್ಗಿಂತ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿರುವ ಗೇಲ್ ಕೂಡ ಟಿ20 ವಿಶ್ವಕಪ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲು ಬಯಸಿದ್ದರು. ಆದರೆ ಈ ಬಾರಿ ವಿಶ್ವಕಪ್ ರದ್ದಾಗಿರುವುದರಿಂದ 2021 ರಲ್ಲಿ ಗೇಲ್ ಅವಕಾಶ ಸಿಗುವ ಸಾಧ್ಯತೆ ಕ್ಷೀಣ ಎಂದು ವಿಶ್ಲೇಷಿಸಲಾಗುತ್ತಿದೆ.
ಎಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕಾ ಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಆದರೆ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ವೇಳೆ ಮತ್ತೆ ತಂಡಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ ಅದಾಗಲೇ ಸೌತ್ ಆಫ್ರಿಕಾ ತಂಡ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ನಲ್ಲಿ ಎಬಿಡಿ ಸ್ಥಾನ ನೀಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿತ್ತು. ಆದರೆ ಮುಂದಿನ ವರ್ಷಕ್ಕೆ 38ಕ್ಕೇರಲಿರುವ ಡಿವಿಲಿಯರ್ಸ್ ಯುವ ಆಟಗಾರರ ನಡುವೆ ಪೈಪೋಟಿ ನಡೆಸಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಾ ಕಾದು ನೋಡಬೇಕಿದೆ.
ಲಸಿತ್ ಮಾಲಿಂಗ: ಶ್ರೀಲಂಕಾ ತಂಡ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಕೂಡ ಈ ವರ್ಷ ಟಿ20 ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದರು. 37ರ ಹರೆಯದ ಮಾಲಿಂಗ ಟ್ವೆಂಟಿ-20 ವಿಶ್ವಕಪ್ನ ನಾಕೌಟ್ ಸುತ್ತಿನಲ್ಲಿ ಆಡುವುದು ನನ್ನ ಏಕೈಕ ಗುರಿಯಾಗಿದೆ ಎಂದಿದ್ದರು. ಅಲ್ಲದೆ ಪ್ರಸ್ತುತ ಲಂಕಾ ಟಿ20 ತಂಡದ ನಾಯಕರಾಗಿರುವ ಮಾಲಿಂಗ ಮುಂದಿನ ವರ್ಷದವರೆಗೆ ತಂಡದಲ್ಲಿ ಉಳಿಯಲಿದ್ದಾರಾ ಎಂಬ ಭವಿಷ್ಯ ಅವರ ಕರಾರುವಾಕ್ ದಾಳಿ ಮೇಲೆ ನಿಂತಿದೆ.
ಶೊಯೆಬ್ ಮಲಿಕ್: ಪಾಕಿಸ್ತಾನ ತಂಡದ ಆಲ್ರೌಂಡರ್ ಶೊಯೇಬ್ ಮಲಿಕ್ ಅವರಿಗೆ ಈಗ 38 ವರ್ಷ. ಈಗಾಗಲೇ ಅವರ ನಿವೃತ್ತಿ ಚರ್ಚೆಗಳು ಶುರುವಾಗಿದೆ. ಇತ್ತ ಮಲಿಕ್ ಚುಟುಕು ವಿಶ್ವಕಪ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಲು ಇಚ್ಛಿಸಿದ್ದರು. ಆದರೆ ಇದೀಗ ಟೂರ್ನಿ ಮುಂದೂಡಲ್ಪಟ್ಟಿರುವುದರಿಂದ ಮುಂದಿನ ವರ್ಷ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎನ್ನಲಾಗುತ್ತಿದೆ.