ಮಿಲ್ಖಾ ಸಿಂಗ್ ‘ಫ್ಲೈಯಿಂಗ್ ಸಿಖ್‘’ ಎಂದೇ ಖ್ಯಾತಿ ಗಳಿಸಿದವರು. ಜೂ. 3 ರಂದು ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾದ ಅವರು ಚಂಡೀಘಡದ ಆಸ್ಪತ್ರೆ ಸೇರಿದ್ದರು. ಕೊರೊನಾ ವಿರುದ್ಧ ಹೋರಾಡಿದ್ದರು. ಆದರೆ ಅವರಿಗೆ ನ್ಯುಮೋನಿಯ ಕಾಯಿಲೆ ಕೂಡ ಇತ್ತು. ಹಾಗಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ರಾತ್ರಿ ಮೃತ ಪಟ್ಟಿದ್ದಾರೆ.