IPL 2020: ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಇನ್ನು ಎರಡು ಹೆಜ್ಜೆ..!
IPL 2020: ಒಟ್ಟು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಬಿಗ್ ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಪ್ರಸ್ತಾವನೆ ಸಲ್ಲಿಸಲಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಈ ಬಾರಿ ವಿದೇಶದಲ್ಲಿ ನಡೆಸಲು ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಯುಎಇ ಅನ್ನು ಆಯ್ಕೆ ಮಾಡಿದ್ದೇವೆ ಎಂದು ಮಂಗಳವಾರ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.
2/ 11
ಇನ್ನು ಈ ವಾರ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದ್ದು, ಆ ಬಳಿಕ ಐಪಿಎಲ್-13 ಬಗ್ಗೆಗಿನ ಸ್ಪಷ್ಟ ಚಿತ್ರಣ ಕೂಡ ಹೊರಬೀಳಲಿದೆ. ಹಾಗೆಯೇ ವಿದೇಶದಲ್ಲಿ ಟೂರ್ನಿ ಆಯೋಜಿಸಬೇಕಿದ್ರೆ ಸರ್ಕಾರದ ಅನುಮತಿ ಕೂಡ ಬೇಕಿದೆ.
3/ 11
ಕೇಂದ್ರ ಸರ್ಕಾರ ಅನುಮತಿಗಾಗಿ ಎರಡು ಪ್ರಸ್ತಾಪಗಳನ್ನು ಮುಂದಿಡಲು ಬಿಸಿಸಿಐ ನಿರ್ಧರಿಸಿದ್ದು, ಇದರಲ್ಲಿ ಒಂದಕ್ಕೆ ಅನುಮತಿ ಸಿಕ್ಕರೂ ಟೂರ್ನಿ ನಡೆಯುವುದು ಕನ್ಫರ್ಮ್. ಬಿಸಿಸಿಐ ಸಲ್ಲಿಸುವ ಪ್ರಸ್ತಾಪಗಳಾವುವು?
4/ 11
1- ಯುಎಇ ಕ್ರಿಕೆಟ್ ಬೋರ್ಡ್ ಹಾಗೂ ಸರ್ಕಾರದಿಂದ ತಮ್ಮ ದೇಶದಲ್ಲಿ ಐಪಿಎಲ್ ನಡೆಸುವಂತೆ ನೀಡಿರುವು ಆಹ್ವಾನ. ಈ ಆಹ್ವಾನವನ್ನು ಬಿಸಿಸಿಐ ಕೇಂದ್ರ ಸರ್ಕಾರದ ಮುಂದಿಡಲಿದೆ.
5/ 11
ಏಕೆಂದರೆ ವಿದೇಶದಲ್ಲಿ ಟೂರ್ನಿ ಆಯೋಜಿಸಬೇಕಿದ್ರೆ ವ್ಯವಹಾರ ಕೂಡ ವಿದೇಶಿ ಕರೆನ್ಸಿ ರೂಪದಲ್ಲಿ ನಡೆಸಬೇಕಿದೆ. ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದ್ರೆ, ಬಿಸಿಸಿಐ ರೂಪಿಸಿದ ಯೋಜನೆಯಂತೆ ಯುಎಇನಲ್ಲಿ ಪಂದ್ಯ ನಡೆಯಲಿದೆ.
6/ 11
ಈ ಹಿಂದೆ 2014ರಲ್ಲಿ ಲೋಕಸಭಾ ಚುನಾವಣೆ ನಿಮ್ಮಿತ್ತ ಐಪಿಎಲ್ನ ಕೊನೆಯ 20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದೇ ಕಾರಣದಿಂದ ಬಿಸಿಸಿಐ ಅರಬ್ ದೇಶದಲ್ಲಿ ಪಂದ್ಯ ಆಯೋಜನೆಗೆ ಮುಂದಾಗಿದೆ.
7/ 11
2- ಭಾರತದಲ್ಲೇ ಅವಕಾಶ ನೀಡುವಂತೆ ಮನವಿ ಸಲ್ಲಿಕೆ. ಹೌದು, ಬಿಸಿಸಿಐ ಇನ್ನೂ ಕೂಡ ಟೂರ್ನಿಯನ್ನು ವಿದೇಶಕ್ಕೆ ಶಿಫ್ಟ್ ಮಾಡುವ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಏಕೆಂದರೆ ಟೂರ್ನಿ ಆಯೋಜಿಸಲು ಇನ್ನೂ ಸಮಯವಕಾಶವಿದೆ.
8/ 11
ಹೀಗಾಗಿ ಭಾರತದಲ್ಲೇ ಐಪಿಎಲ್ ನಡೆಸಲು ಪ್ರಸ್ತಾವನೆ ಸಲ್ಲಿಸಲಿದೆ. ಈ ಪ್ರಸ್ತಾವನೆಯ ಪ್ರಕಾರ, ದೇಶದ ಯಾವುದಾರೂ ಎರಡು ಸ್ಥಳಗಳಲ್ಲಿ ಟೂರ್ನಿ ನಡೆಸಲು ಅವಕಾಶ ನೀಡಬೇಕೆಂದು ಕೋರಲಾಗುತ್ತದೆ.
9/ 11
ಒಂದು ವೇಳೆ ಬಿಸಿಸಿಐಯ ಈ ಕೋರಿಕೆಯನ್ನು ಸರ್ಕಾರ ಒಪ್ಪಿದ್ರೆ, ಭಾರತದಲ್ಲೇ ಟೂರ್ನಿ ಆಯೋಜನೆಗೊಳ್ಳಲಿದೆ. ಹಾಗೆಯೇ ಬಿಸಿಸಿಐ ಖರ್ಚು ಕೂಡ ಕಡಿಮೆಯಾಗಲಿದೆ. ಮೂಲಗಳ ಪ್ರಕಾರ ಬಿಸಿಸಿಐ ಕೂಡ ಭಾರತದಲ್ಲೇ ಟೂರ್ನಿ ಆಯೋಜಿಸುವ ಬಗ್ಗೆ ಆಸಕ್ತಿ ಹೊಂದಿದೆ. ಆದರೆ...
10/ 11
ಆದರೆ ಭಾರತದಲ್ಲಿ ಕೋವಿಡ್-19 ಪ್ರಕರಣ ದಿನ ಕಳೆದಂತೆ ಹೆಚ್ಚಾಗುತ್ತಿರುವುದರಿಂದ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಟೂರ್ನಿ ಆಯೋಜನೆ ಸವಾಲಾಗಲಿದೆ. ಹೀಗಾಗಿ ಯುಎಇಗೆ ಪಂದ್ಯಾವಳಿಯನ್ನು ಶಿಫ್ಟ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
11/ 11
ಈ ಎರಡು ಪ್ರಸ್ತಾವನೆಯಲ್ಲಿ ಕೇಂದ್ರ ಒಂದನ್ನು ಒಪ್ಪಿದ್ರು ಐಪಿಎಲ್-13 ನಡೆಯುವುದು ಖಚಿತ. ಅದು ಭಾರತದಲ್ಲಾ ಅಥವಾ ವಿದೇಶದಲ್ಲಾ? ಎಂಬುದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.