ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹುಸಂಖ್ಯಾ ಅಭಿಮಾನಿಗಳು ಹೊಂದಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಿಗರು ಕೂಡ ಕೊಹ್ಲಿ ಅವರನ್ನು ತುಂಬಾನೆ ಇಷ್ಟ ಪಡುತ್ತಾರೆ. ಅದರಂತೆ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ಕೂಡ ಕಿಂಗ್ ಕೊಹ್ಲಿಯ ದೊಡ್ಡ ಫ್ಯಾನ್ ಅಂತೆ!. ಹಾಗಾದ್ರೆ ಯಾರೀಕೆ?
2/ 7
ಪಾಕಿಸ್ತಾನಿ ಕ್ರಿಕೆಟಿಗ ಹಸನ್ ಅಲಿ ಗೊತ್ತಿರುತ್ತೆ. ಅವರ ಪತ್ನಿ ಶಾಮಿಯಾ ಅರ್ಜೂ ಅವರ ನೆಚ್ಚಿನ ಕ್ರಿಕೆಟಿಗನೆಂದರೆ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.
3/ 7
ಇನ್ಸ್ಟಾಗ್ರಾಂನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಶಾಮಿಯಾ ಅರ್ಜೂ ಅವರು ಮಾತನಾಡುತ್ತಾ ಇರುವಾಗ ನಿಮ್ಮ ಫೇವರೇಟ್ ಬ್ಯಾಟ್ಸ್ಮನ್ ಯಾರೆಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಆಕೆ ಕಿಂಗ್ ಕೊಹ್ಲಿ ಎಂದು ಮನಬಿಚ್ಚಿ ಹೇಳುತ್ತಾರೆ.
4/ 7
ಹಸನ್ ಅಲಿ ಮತ್ತು ಶಾಮಿಯಾ ಅರ್ಜೂ ಅವರು 2019ರಲ್ಲಿ ದುಬೈನಲ್ಲಿ ವಿವಾಹವಾಗುತ್ತಾರೆ. ಅಂದಹಾಗೆಯೇ ಶಾಮಿಯಾ ಅರ್ಜೂ ಅವರು ಎಮಿರೇಟ್ಸ್ ಏರ್ಲೈನ್ಸ್ನಲ್ಲಿ ವಿಮಾನ ಇಂಜಿನಿಯರಾಗಿ ಕೆಲಸ ಮಾಡುತ್ತಾರೆ.
5/ 7
ಅಂದಹಾಗೆಯೇ ಶಾಮಿಯಾ ಅರ್ಜೂ ಮೂಲತಃ ಹರಿಯಾಣದವರು. ಆದರೆ ಅವರ ಫ್ಯಾಮಿಲಿ ದೆಹಲಿಯಲ್ಲಿ ನೆಲೆಸಿದೆ.
6/ 7
ಶಾಮಿಯಾ ಅರ್ಜೂ ಮತ್ತು ಹಸನ್ ಅಲಿ ಬಹು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು. ಆ ಬಳಿಕ ಈ ಜೋಡಿ 2019ರಲ್ಲಿ ವಿವಾಹವಾಗುತ್ತಾರೆ.
7/ 7
ಪಾಕಿಸ್ತಾನಿ ಮೂಲದ ರಿಜ್ಲಾ ರೆಹ್ಮನ್ ಕೂಡ 2019ರ ವಲ್ಡ್ ಕಪ್ ಸಮಯದಲ್ಲಿ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.