ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

First published:

  • 115

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಮಾರ್ಚ್​ 29 ರಂದು ಟೀಂ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್ ಅವರಿಗೆ ವಿಶೇಷ ದಿನ. ಈ ದಿನವಂತು ವೀರು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

    MORE
    GALLERIES

  • 215

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಏಕೆಂದರೆ ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನ್ನು ಏಕದಿನ ಮಾದರಿಯಲ್ಲಿ ಆಡಿದ ದಿನವದು. ಹೌದು, ಟೀಂ ಇಂಡಿಯಾ ಪರ ಟೆಸ್ಟ್​ನಲ್ಲಿ ಮೊದಲ ತ್ರಿಶತಕ ಮೂಡಿಬಂದಿದ್ದು ಸೆಹ್ವಾಗ್ ಅವರ ಬ್ಯಾಟ್​ನಿಂದ.

    MORE
    GALLERIES

  • 315

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಅಲ್ಲಿಯವರೆಗೆ ಡಬಲ್ ಸೆಂಚುರಿ ಸಾಧನೆಯಲ್ಲೇ ಕಳೆದು ಹೋಗುತ್ತಿದ್ದ ಭಾರತದ ಬ್ಯಾಟ್ಸ್​ಮನ್​ಗಳ ಮಧ್ಯೆ ಮೊದಲ ಬಾರಿ ತ್ರಿಪಲ್ ಸೆಂಚುರಿ ಸಿಡಿಸಿ ಸೆಹ್ವಾಗ್ ಬ್ಯಾಟ್ ಮೇಲೆತ್ತಿ ನಿಂತಿದ್ದರು.

    MORE
    GALLERIES

  • 415

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    2004 ರಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಸೆಹ್ವಾಗ್ ತ್ರಿಶತಕ ಸಿಡಿಸಿದ್ದರು. ಅಚ್ಚರಿಯ ವಿಷಯವೆಂದರೆ ಈ ಸಾಧನೆಗೈದು ಇದೇ ದಿನಾಂಕದಂದೇ ಮತ್ತೊಮ್ಮೆ ವೀರು ತ್ರಿಶತಕ ಬಾರಿಸಿ ತಮ್ಮ ದಾಖಲೆಯನ್ನು ಮುರಿದಿರುವುದು.

    MORE
    GALLERIES

  • 515

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ನಜಾಫ್​ಘಡದ ನವಾಬ ಎಂದೇ ಖ್ಯಾತಿ ಪಡೆದಿದ್ದ ವಿರೇಂದ್ರ ಸೆಹ್ವಾಗ್ 2004, ಮಾರ್ಚ್​ 29 ರಂದು ಪಾಕಿಸ್ತಾನ ವಿರುದ್ಧ ಪಾಕ್​ನಲ್ಲಿ ಅಕ್ಷರಶಃ ಅಬ್ಬರಿಸಿದ್ದರು.

    MORE
    GALLERIES

  • 615

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಪಾಕಿಸ್ತಾನದ ವಿರುದ್ಧದ ಈ ಟೆಸ್ಟ್​ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಕಾಶ್ ಚೋಪ್ರಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವೀರು, ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದರು.

    MORE
    GALLERIES

  • 715

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಒಂದೆಡೆ ಆಕಾಶ್ ಚೋಪ್ರಾ (42 ರನ್) ಮತ್ತು ರಾಹುಲ್ ದ್ರಾವಿಡ್ ( 6 ) ಬೇಗನೆ ಔಟಾದರೂ ಸೆಹ್ವಾಗ್ ಮಾತ್ರ ಬಿರುಸಿನ ಆಟವನ್ನೇ ಮುಂದುವೆರೆಸಿದ್ದರು. ಮೊದಲ ದಿನದಾಟದ ಅಂತ್ಯದಲ್ಲಿ ಸೆಹ್ವಾಗ್ ಅಜೇಯ 228 ರನ್​ ಸಿಡಿಸಿದ್ದರು.

    MORE
    GALLERIES

  • 815

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಮರುದಿನ ಸಕ್ಲೇನ್ ಮುಷ್ತಾಕ್  ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸೆಹ್ವಾಗ್ 300 ರನ್ ಪೂರೈಸಿದರು. ಕೇವಲ 364 ಎಸೆತಗಳನ್ನು ಎದುರಿಸಿದ ವೀರು ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು.

    MORE
    GALLERIES

  • 915

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    375 ಎಸೆತಗಳಲ್ಲಿ ಒಟ್ಟು 309 ರನ್ ಗಳಿಸಿದ ವೀರು ಕೊನೆಗೂ ವಿಕೆಟ್ ಒಪ್ಪಿಸಿದರು. ಈ ವೇಳೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 39 ಬೌಂಡರಿ ಮತ್ತು 6 ಸಿಕ್ಸರ್​ಗಳು ಮೂಡಿಬಂದಿದ್ದವು. ಈ ಪಂದ್ಯವನ್ನು ಟೀಂ ಇಂಡಿಯಾ 52 ರನ್​ಗಳಿಂದ ಗೆದ್ದುಕೊಂಡಿತು.

    MORE
    GALLERIES

  • 1015

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಈ ಸಾಧನೆ ಮಾಡಿ ಬರೋಬ್ಬರಿ ನಾಲ್ಕು ವರ್ಷಕ್ಕೆ ಸೆಹ್ವಾಗ್ ಮತ್ತೊಮ್ಮೆ ಆರ್ಭಟಿಸಿದ್ದರು. ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಮುಲ್ತಾನ್​ ಕಾ ಸುಲ್ತಾನ್ ತಮ್ಮ ಹಳೆಯ ಖದರ್ ತೋರಿಸಿದ್ದರು.

    MORE
    GALLERIES

  • 1115

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಚೆನ್ನೈ ಪಿಚ್‌ನಲ್ಲಿ ಕೇವಲ 116 ಎಸೆತಗಳಲ್ಲಿ ಶತಕ ಪೂರೈಸಿದ ಸೆಹ್ವಾಗ್ ದ್ವಿಶತಕವನ್ನು 200 ಎಸೆತಗಳಲ್ಲಿ ಪೂರೈಸಿದರು. ಇನ್ನು 225 ಎಸೆತಗಳಲ್ಲಿ 250 ರನ್‌ ಬಾರಿಸಿದ ಸೆಹ್ವಾಗ್ ಮುಂದಿದ್ದು ವಿಶ್ವ ದಾಖಲೆ.

    MORE
    GALLERIES

  • 1215

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ದಕ್ಷಿಣ ಆಫ್ರಿಕಾ ಬೌಲರುಗಳ ಬೆಂಡೆತ್ತಿದ ವೀರು, ಕೇವಲ 278 ಎಸೆತಗಳಲ್ಲಿ ತ್ರಿಶತಕ ಪೂರೈಸಿ ಹೊಸ ದಾಖಲೆ ಬರೆದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ತ್ರಿಪಲ್ ಸೆಂಚುರಿ ಎಂಬ ರೆಕಾರ್ಡ್ ಆಗಿ ಉಳಿಯಿತು.

    MORE
    GALLERIES

  • 1315

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಈ ದಾಖಲೆಯ ಇನಿಂಗ್ಸ್​ನಲ್ಲಿ ಸೆಹ್ವಾಗ್ ಬ್ಯಾಟ್​ನಿಂದ ಮೂಡಿ ಬಂದಿದ್ದು 42 ಭರ್ಜರಿ ಬೌಂಡರಿ ಹಾಗೂ 5 ಸೂಪರ್ ಸಿಕ್ಸ್. ಕೊನೆಗೂ 304 ಎಸೆತಗಳಲ್ಲಿ 319 ರನ್ ಬಾರಿಸಿ ತಮ್ಮದೇ ಈ ಹಿಂದಿನ 309 ರನ್​ಗಳ ದಾಖಲೆಯನ್ನು ಅಳಿಸಿ ಹಾಕಿದರು.

    MORE
    GALLERIES

  • 1415

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಇನ್ನು ಪಾಕ್ ವಿರುದ್ಧದ ಟೆಸ್ಟ್​ನಲ್ಲಿ ಸೆಹ್ವಾಗ್ ಅಮೋಘ ಬ್ಯಾಟಿಂಗ್ ಪರಿಣಾಮ, ಖ್ಯಾತ ಪಾಕ್ ಬೌಲರೊಬ್ಬರ ಹೀನಾಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

    MORE
    GALLERIES

  • 1515

    ಅದೇ ದಿನ ಸೆಹ್ವಾಗ್ ಸಿಡಿಸಿದ್ದು 2 ತ್ರಿಶತಕ: ಅಂತ್ಯವಾಗಿದ್ದು ಬೌಲರೊಬ್ಬರ ಕೆರಿಯರ್..!

    ಈ ಪಂದ್ಯದಲ್ಲಿ ಸಕ್ಲೇನ್ ಮುಷ್ತಾಕ್  204 ರನ್‌ ನೀಡಿ ಕೇವಲ  1 ವಿಕೆಟ್ ಪಡೆದಿದ್ದರು. ಸೆಹ್ವಾಗ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ಪಾಕ್ ಲೆಜೆಂಡ್ ಆಫ್-ಸ್ಪಿನ್ನರ್​ನ ಟೆಸ್ಟ್ ಕೆರಿಯರ್ ಅಂತ್ಯಕ್ಕೆ ಕಾರಣವಾಯಿತು. ಈ ಪಂದ್ಯದ ಬಳಿಕ ಸಕ್ಲೇನ್​ ಅವರನ್ನು ತಂಡವನ್ನು ಕೈ ಬಿಡಲಾಯಿತು.

    MORE
    GALLERIES