ಶ್ರೀಲಂಕಾ ಕ್ರಿಕೆಟ್ ಆಯೋಜನೆ ಮಾಡಿರುವ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ತಿಸಾರ ಪೆರೇರಾ ನಾಯಕತ್ವದ ಜಾಫ್ನಾ ಸ್ಟಾಲಿಯನ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ.
2/ 12
ಹಂಬನತೋಟದ ಮಹಿಂದಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೂರ್ನಿಯ ಎಲ್ಲ ಪಂದ್ಯಗಳು ಬಯೋ ಸೆಕ್ಯೂರ್ ವಾತಾವರಣದ ಅಡಿಯಲ್ಲಿ ನಡೆಯುತ್ತಿದೆ.
3/ 12
ಇದೇ ವೇಳೆ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರ ವೇತನ ಎಷ್ಟು ಎಂಬುದರ ಮಾಹಿತಿ ಬಹಿರಂಗವಾಗಿದೆ.
4/ 12
ಅಚ್ಚರಿ ಎಂದರೆ, ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ವಿಂಡೀಸ್ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಇಬ್ಬರ ವೇತನ ಸಮವಾಗಿದೆ.
5/ 12
ಹೌದು, ಎಲ್ಪಿಎಲ್ನಲ್ಲಿ 5 ತಂಡಗಳಿದ್ದು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಲಂಕಾ ಪ್ರತಿನಿಧಿಸುತ್ತಿರುವ ಹಾಗೂ ಎಲ್ಪಿಎಲ್ ತಂಡಗಳ ನಾಯಕರಿಗೆ 60,000 ಯುಎಸ್ ಡಾಲರ್ ( ಸುಮಾರು 44.32 ಲಕ್ಷ ರೂ) ನೀಡುತ್ತಿದೆ.
6/ 12
ಅಂತೆಯೆ ದ್ವಿತೀಯ ವಿಭಾಗದ ಆಟಗಾರರಿಗೆ 50, 000 ಯುಎಸ್ ಡಾಲರ್( ಸುಮಾರು 36.93 ಲಕ್ಷ ರೂ) ಹಾಗೂ ಮೂರನೇ ವರ್ಗದ ಆಟಗಾರರಿಗೆ 40,000 ಯುಎಸ್ ಡಾಲರ್(ಸುಮಾರು 29.55 ಲಕ್ಷ ರೂ) ನೀಡುತ್ತಿದೆ.
7/ 12
ಅಂದರೆ ದಸನ್ ಶನಕ, ಕುಸಲ್ ಪೆರೇರಾ, ಆ್ಯಂಜಲೋ ಮ್ಯಾಥ್ಯೂಸ್, ತಿಸಾರ ಪೆರೇರಾ 60 ಸಾವಿರ ಯುಎಸ್ಡಿ, ವಿದೇಶಿ ಸ್ಟಾರ್ ಆಟಗಾರರಾದ ಆ್ಯಂಡ್ರೋ ರಸೆಲ್, ಇರ್ಫಾನ್ ಪಠಾಣ್, ಶಾಹೀದ್ ಅಫ್ರಿದಿ, ಡೇಲ್ ಸ್ಟೈನ್ ಜೊತೆಗೆ ಲಂಕಾ ಆಟಗಾರರಾದ ಡಿಸಿಲ್ವ, ಹಸರಂಗ 50 ಸಾವಿರ ಯುಎಸ್ಡಿ ಪಡೆಯುತ್ತಿದ್ದಾರೆ.
ಸೀಕುಗೆ ಪ್ರಸನ್ನ, ಅಮಿಲಾ ಅಪೊನ್ಸೊ, ಸುರಂಗ ಲಕ್ಷಮಲ್, ಕಸುನ್ ರಜಿತ, ಮಿಲಿಂಡ ಸಿರಿವರ್ಧನೆ, ಅಸೆಲಾ ಗುಣರತ್ನೆ, ಆಶಾನ್ ಪ್ರಿಯಾಂಜನ್, ಬಿನುರಾ ಫರ್ನಾಂಡೊ ಅವರಿಗೆ 25 ಸಾವಿರ ಯುಎಸ್ಡಿ(18.4 ಲಕ್ಷ ರೂ) ನೀಡಲಾಗುತ್ತಿದೆ.
11/ 12
ಉಳಿದ ಅಂತಾರಾಷ್ಟ್ರೀಯ ಆಟಗಾರರಿಗೆ ಸುಮಾರು 15 ಸಾವಿರ ಯುಎಸ್ಡಿ( 11.6 ಲಕ್ಷ ರೂ.) ಹಾಗೂ ರಾಷ್ಟ್ರೀಯ ಯುವ ಆಟಗಾರರಿಗೆ 3000 ಯುಎಸ್ಡಿ( ಸುಮಾರು 2.2 ಲಕ್ಷ ರೂ.)ವೇತನ ನೀಡಲಾಗುತ್ತಿದೆ.
12/ 12
ಚೊಚ್ಚಲ ಆವೃತ್ತಿಯ ಎಲ್ಪಿಎಲ್ನಲ್ಲಿ ಒಟ್ಟು 30 ಮಂದಿ ವಿದೇಶಿ ಆಟಗಾರರು ಪಾಲ್ಗೊಂಡಿದ್ದಾರೆ. ಐದು ಫ್ರಾಂಚೈಸಿ ತಂಡಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ಜಾಫ್ನಾ ಸ್ಟಾಲಿಯನ್ಸ್, ಕ್ಯಾಂಡಿ ಟಸ್ಕರ್ಸ್, ಗಾಲೆ ಗ್ಲಾಡಿಯೇಟರ್ಸ್, ಕೊಲಂಬೊ ಕಿಂಗ್ಸ್ ಮತ್ತು ಡಂಬುಲಾ ಹಾಕ್ಸ್ ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸುತ್ತಿವೆ.