ಲಂಕಾ ಪ್ರೀಮಿಯರ್ ಲೀಗ್ 2020 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 26ಕ್ಕೆ ಈ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್ ಹಾಗೂ ಕ್ಯಾಂಡಿ ಟಸ್ಕರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.
2/ 10
ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲೇ ಲಂಕಾನ್ನರ ನಾಡಿನಲ್ಲಿ ಲಂಕಾ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದ್ದು ನ. 26 ರಿಂದ ಡಿಸೆಂಬರ್ 16ರ ವರೆಗೆ ಹಂಬನತೋಟದ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
3/ 10
ಭಾರತೀಯ ಮೂಲದ ಮೈ 11 ಸರ್ಕಲ್ ಎಲ್ಪಿಎಲ್ 2020 ಟೂರ್ನಿಯ ಅಧಿಕೃತ ಪ್ರಾಯೋಜಕತ್ವ ಪಡೆದುಕೊಂಡಿದ್ದು, ಟೂರ್ನಿಯಲ್ಲಿ ಕೊಲಂಬೊ ಕಿಂಗ್ಸ್, ದಂಬುಲಾ ವೈಕಿಂಗ್ಸ್, ಗಾಲೆ ಗ್ಲಾಡಿಯೇಟರ್ಸ್, ಜಾಫ್ನಾ ಸ್ಟ್ಯಾಲಿಯನ್ಸ್ ಮತ್ತು ಕ್ಯಾಂಡಿ ಟಸ್ಕರ್ಸ್ ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
4/ 10
ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಭಾರತದ 4 ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ ಎಂಬುವುದು ವಿಶೇಷ.
5/ 10
2006-2011ರವರೆಗೆ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಆಡಲಿದ್ದಾರೆ.
6/ 10
ಇವರ ಜೊತೆಗೆ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
7/ 10
ಇನ್ನೂ ಭಾರತೀಯ ಕ್ರಿಕೆಟಿಗರಾದ ಮನ್ಪ್ರೀತ್ ಗೋನಿ ಕೊಲಂಬೊ ಕಿಂಗ್ಸ್ ಪರ ಹಾಗೂ ಸಂದೀಪ್ ತ್ಯಾಗಿ ದಂಬುಲಾ ವೈಕಿಂಗ್ಸ್ ಪರ ಅಬ್ಬರಿಸಲಿದ್ದಾರೆ.
8/ 10
ಮನ್ವಿಂದರ್ ಸಿಂಗ್ ಬಲಗೈ ಮಧ್ಯಮ ವೇಗಿಯಾಗಿದ್ದು ಭಾರತದ ಪರ 2 ಏಕದಿನ ಪಂದ್ಯವನ್ನಾಡಿದ್ದಾರೆ.
9/ 10
ಎಲ್ಪಿಎಲ್ 2020 ಟೂರ್ನಿಯು ಈ ಹಿಂದೆ ಆಗಸ್ಟ್ 28ಕ್ಕೆ ಆರಂಭವಾಗಬೇಕಿತ್ತು. ಆದರೆ, ವಿದೇಶಿ ಆಟಗಾರರಿಗೆ ದೀರ್ಘ ಕಾಲದ ಕ್ವಾರಂಟೈನ್ ಎದುರಿಸಬೇಕು ಎಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದ ಕಾರಣ ಟೂರ್ನಿಯನ್ನು ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
10/ 10
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಮತ್ತು ತಂದೆ, ಪ್ರಸಿದ್ಧ ಚಿತ್ರಕಥೆಗಾರ ಸಲೀಮ್ ಖಾನ್ ಒಡೆತನದಲ್ಲಿ ಲಂಕಾ ಪ್ರೀಮಿಯರ್ ಲೀಗ್ ತಂಡಕ್ಕೆ ಬಂಡವಾಳ ಹೂಡಿದ್ದಾರೆ.