IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

MEGA AUCTION: 15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ ಮೆಗಾ ಹರಾಜು ಪ್ರಕ್ರಿಯೆಯನ್ನು ಬರೋಬ್ಬರಿ 590 ಆಟಗಾರರು ಕಣದಲ್ಲಿದ್ದಾರೆ. ಇದರಲ್ಲಿ 370 ಭಾರತೀಯರು 220 ವಿದೇಶಿ ಆಟಗಾರರಾಗಿದ್ದಾರೆ. 2ಈ ಆಟಗಾರರಲ್ಲಿ ಯಾರನ್ನು 10 ಪ್ರಾಂಚೈಸಿಗಳು ಅಂದು ಖರೀದಿ ಮಾಡಲಿದ್ದಾರೆ ಎಂಬುದು ತಿಳಿದು ಬರಲಿದೆ ಆದರೆ ಕಳೆದ ಐಪಿಎಲ್ ನಲ್ಲಿ ಆಡಿದ್ದ ಹಲವು ಆಟಗಾರರು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇರುವುದಿಲ್ಲ. ಹಾಗಿದ್ರೆ ಆಟಗಾರರು ಯಾರು ಎಂಬ ಮಾಹಿತಿ ಇಲ್ಲಿದೆ.

First published:

  • 16

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಎಬಿ ಡಿವಿಲಿಯರ್ಸ್: ಹತ್ತು ವರ್ಷಗಳಿಂದ ಬೆಂಗಳೂರು ಪರ ಆಡಿದ್ದ ಎಬಿ ಡಿವಿಲಿಯರ್ಸ್ 14ನೇ ಐಪಿಎಲ್ ಆವೃತ್ತಿ ಮುಕ್ತಾಯವಾದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಹೀಗಾಗಿ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಹಾಗೂ ಐಪಿಎಲ್ ನಲ್ಲಿ ಎಬಿ ಡಿವಿಲಿಯರ್ಸ್ ಕಾಣಿಸಿಕೊಂಡಿಲ್ಲ.

    MORE
    GALLERIES

  • 26

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಜೋಪ್ರಾ ಅರ್ಚರ್: ಕಳೆದ ಬಾರಿಯೂ ಗಾಯದ ಸಮಸ್ಯೆಯಿಂದ ಐಪಿಎಲ್ ನಿಂದ ಹೊರಗುಳಿದಿದ್ದಾರೆ ಜೋಪ್ರಾ ಅರ್ಚರ್ ಈ ಬಾರಿಯೂ ಗಾಯದ ಸಮಸ್ಯೆಯಿಂದ ಐಪಿಎಲ್ ನಿಂದ ದೂರ ಉಳಿದಿದ್ದಾರೆ. ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದರೂ ಸಹ ಸಂಪೂರ್ಣ ಫಿಟ್ ಆಗದ ಕಾರಣ ಜೋಪ್ರಾ ಅರ್ಚರ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    MORE
    GALLERIES

  • 36

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಬೆನ್ ಸ್ಟೋಕ್ಸ್ : ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್ ಅವರು ರಾಜಸ್ತಾನ್ ರಾಯಲ್ಸ್ ಪರ ಕಳೆದ ಐಪಿಎಲ್ ನಲ್ಲಿ ಕಣಕ್ಕೆ ಇಳಿದಿದ್ದರು.. ಆದರೆ ಗಾಯದ ಸಮಸ್ಯೆಯಿಂದಾಗಿ ಮಧ್ಯದಲ್ಲಿ ಬೆನ್ ಸ್ಟೋಕ್ಸ್ ಐಪಿಎಲ್ ನಿಂದ ಹಿಂದೆಸರಿದರು.. ಬಯೋ ಬಬಲ್, ದೇಶೀಯ ಕ್ರಿಕೆಟ್ ಟೂರ್ನಿಯ ಹೆಚ್ಚು ಗಮನ ನೀಡುವ ಬೆನ್ ಸ್ಟೋಕ್ಸ್ ಐಪಿಎಲ್ ನಿಂದ ದೂರ ಸರಿದಿದ್ದಾರೆ.

    MORE
    GALLERIES

  • 46

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಕ್ರಿಸ್ ಮೋರಿಸ್: ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಕೋಟಿ ಹಣ ಕೊಟ್ಟು ಖರೀದಿ ಮಾಡಿತ್ತು. ಅಲ್ಲದೇ ಹೆಚ್ಚು ಹಣಕ್ಕೆ ಕರಿದಿ ಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಕಳೆದ ಋತುವಿನಲ್ಲಿ ಕ್ರಿಸ್ ಮೋರಿಸ್ ಪಾತ್ರರಾಗಿದ್ದರು.. ಆದ್ರೆ ಎಲ್ಲ ಮಾದರಿಯ ಕ್ರಿಕೆಟ್ ಗೆ ಕ್ರಿಸ್ ಮೋರಿಸ್ ವಿದಾಯ ಘೋಷಣೆ ಮಾಡಿರುವುದರಿಂದ ಈ ಬಾರಿಯ ಐಪಿಎಲ್ ನಲ್ಲಿ ಭಾಗಿಯಾಗುತ್ತಿಲ್ಲ.

    MORE
    GALLERIES

  • 56

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಕ್ರಿಸ್ ಗೇಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈ ಬಿಟ್ಟ ಬಳಿಕ ಪಂಜಾಬ್ ಸೇರಿಕೊಂಡಿದ್ದಾರೆ ಕಳೆದ ವರ್ಷದ ಮಧ್ಯದಲ್ಲಿ ಹೊರನಡೆದಿದ್ದರು.. ಅಲ್ಲದೆ ಈ ಬಾರಿಯ ಐಪಿಎಲ್ ನಲ್ಲಿ ಭಾಗಿಯಾಗುವುದಿಲ್ಲ ಎಂದು ಕ್ರಿಸ್ ಗೇಲ್ ಹೇಳಿಕೆ ನೀಡುವುದರಿಂದ ಅವರು ಸಹ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    MORE
    GALLERIES

  • 66

    IPL 2022: ಈ ಬಾರಿ ಐಪಿಎಲ್​ನಲ್ಲಿ ಈ ಆಟಗಾರರು ಇರಲ್ವ?

    ಮಿಚೆಲ್ ಸ್ಟಾರ್ಕ್: ಆರ್ಸಿಬಿ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಸಹ ಈ ಬಾರಿಯ ಐಪಿಎಲ್ ನಿಂದ ಹೊರಗೇ ಉಳಿದಿದ್ದಾರೆ.. 2018ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕೆ ಇಳಿದಿದ್ದ ಮಿಚೆಲ್ ಸ್ಟಾರ್ಕ್ ಐಪಿಎಲ್ ನಿಂದ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದರು.. ಆ ಬಳಿಕ ಮತ್ತೆ ಅವರು ಐಪಿಎಲ್ ನತ್ತ ಮುಖ ಮಾಡಿಲ್ಲ

    MORE
    GALLERIES