Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

ಶಾಹಿದ್ ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಗಂಭೀರ್ ಅವರು ಸಾಧಾರಣ ಬ್ಯಾಟ್ಸ್​ಮನ್​ ಅಷ್ಟೇ. ಹೀಗಾಗಿಯೇ ಅವರು ಯಾವುದೇ ದೊಡ್ಡ ದಾಖಲೆಯನ್ನು ಹೊಂದಿಲ್ಲ.

First published:

  • 18

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    2007ರಲ್ಲಿ ನಾಗ್ಪುರದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಣ ಪಂದ್ಯದಿಂದ ಆರಂಭವಾದ ಈ ಕಿತ್ತಾಟ ನಿವೃತ್ತಿ ಬಳಿಕ ಕೂಡ ಮುಂದುವರೆದಿದೆ. ಇಬ್ಬರು ಆಟಗಾರರ ಆರೋಪ ಪ್ರತ್ಯಾರೋಪಗಳಿಗೆ ಈ ಹಿಂದೆ ಸೋಷಿಯಲ್ ಮೀಡಿಯಾ ಸಾಕ್ಷಿಯಾಗಿತ್ತು.

    MORE
    GALLERIES

  • 28

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಆದರೆ ಇದೀಗ ಅಫ್ರಿದಿ ಕೊಂಚ ಬದಲಾದಂತೆ ಕಂಡು ಬಂದರೂ ಹಳೆ ವರಸೆಯನ್ನು ಬಿಟ್ಟಿಲ್ಲ. ಇತ್ತೀಚೆಗೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಪಾಕ್ ಆಟಗಾರ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಗಂಭೀರ್ ಹಾರೈಸಿದ್ದರು.

    MORE
    GALLERIES

  • 38

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಇದೀಗ ಕೋವಿಡ್​-19 ಕ್ವಾರಂಟೈನ್ ಮುಗಿಸಿರುವ ಅಫ್ರಿದಿ ಸಂದರ್ಶನವೊಂದರಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಬಗ್ಗೆ ಮಾತನಾಡಿದ್ದಾರೆ. ಸದಾ ಗಂಭೀರ್ ಎಂದರೆ ಕಿಡಿಕಾರುತ್ತಿದ್ದ ಶಾಹಿದ್ ಅಫ್ರಿದಿ ಆತ ಒಬ್ಬ ಬ್ಯಾಟ್ಸ್​ಮನ್​ ಆಗಿ ಇಷ್ಟವಾಗುತ್ತಾರೆ. ಆದರೆ ಒಬ್ಬ ವ್ಯಕ್ತಿಯಾಗಿ ಆತನ ವರ್ತನೆ ಸರಿ ಇಲ್ಲ ಎಂದಿದ್ದಾರೆ.

    MORE
    GALLERIES

  • 48

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಹಲವು ಸಂದರ್ಭಗಳಲ್ಲಿ ಗೌತಮ್ ಗಂಭೀರ್ ಅವರಲ್ಲಿ ಏನೋ ಸಮಸ್ಯೆ ಇದೆ ಎಂದು ನನಗನಿಸಿದೆ. ಟೀಮ್ ಇಂಡಿಯಾದ ಮಾಜಿ ಕಂಡೀಷನಿಂಗ್ ಕೋಚ್ ಪ್ಯಾಡಿ ಅಪ್ಟನ್ ಅವರು ಕೂಡ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ತಾನು ಕೆಲಸ ಮಾಡಿದ ದುರ್ಬಲ ಮತ್ತು ಮಾನಸಿಕ ಅಸುರಕ್ಷಿತ ವ್ಯಕ್ತಿ ಗಂಭೀರ್ ಎಂದು ಅಪ್ಟನ್ ಉಲ್ಲೇಖಿಸಿದ್ದಾರೆ ಎಂದು ಇದೇ ವೇಳೆ ಅಫ್ರಿದಿ ತಿಳಿಸಿದರು.

    MORE
    GALLERIES

  • 58

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಒಬ್ಬ ಕ್ರಿಕೆಟರ್‌ ಮತ್ತು ಒಬ್ಬ ಬ್ಯಾಟ್ಸ್‌ಮನ್‌ ಆಗಿ ನಾನು ಗಂಭೀರ್‌ ಅವರನ್ನು ಯಾವಾಗಲೂ ಇಷ್ಟ ಪಟ್ಟಿದ್ದೇನೆ. ಆದರೆ, ಒಬ್ಬ ಮನುಷ್ಯನಾಗಿ ಅವರ ನಡವಳಿಕೆ ಮತ್ತು ಮಾತಿನ ದಾಟಿ ನೋಡಿದ್ರೆ ಏನೋ ಸಮಸ್ಯೆ ಇದೆ ಎಂದು ಭಾವಿಸಿದೆ. ಇಂತಹವರನ್ನು ನಿರ್ಲಕ್ಷಿಸುವುದು ಒಳಿತು ಎಂದು ನನಗನಿಸುತ್ತದೆ ಎಂದು ಅಫ್ರಿದಿ ಹೇಳಿದರು.

    MORE
    GALLERIES

  • 68

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಶಾಹಿದ್ ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಗಂಭೀರ್ ಅವರು ಸಾಧಾರಣ ಬ್ಯಾಟ್ಸ್​ಮನ್​ ಅಷ್ಟೇ. ಹೀಗಾಗಿಯೇ ಅವರು ಯಾವುದೇ ದೊಡ್ಡ ದಾಖಲೆಯನ್ನು ಹೊಂದಿಲ್ಲ.

    MORE
    GALLERIES

  • 78

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಆದರೆ ಗಂಭೀರ್​ ತನ್ನನ್ನು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ಎಂದು ಪರಿಗಣಿಸುತ್ತಾನೆ. ಅಲ್ಲದೆ ಆತನಿಗೆ ಹೇಗೆ ವರ್ತಿಸಬೇಕೆಂದೇ ಗೊತ್ತಿಲ್ಲ. ಅವನಿಗೆ ವ್ಯಕ್ತಿತ್ವ ಎಂಬುದಿಲ್ಲ. ಚೆನ್ನಾಗಿ ಮಾತನಾಡಲು ಬರುತ್ತಿತ್ತೇ ಹೊರತು ಆಡಲು ಅಲ್ಲ. ಆತನಿಗೆ  ಹೇಗೆ ನಾಟಕ ಮಾಡಬೇಕೆಂಬುದು ಗೊತ್ತಿದೆ ಎಂದು ಅಫ್ರಿದಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    MORE
    GALLERIES

  • 88

    Shahid Afridi: 'ಆತನಲ್ಲಿ ಏನೋ ಸಮಸ್ಯೆಯಿದೆ': ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

    ಇದೀಗ ಗಂಭೀರ್ ಬಗ್ಗೆ ಮತ್ತೆ ಕ್ಯಾತೆ ತೆಗೆದಿರುವ ಅಫ್ರಿದಿಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಹೇಗೆ ತಿರುಗೇಟು ನೀಡಲಿದ್ದಾರೆ ಕಾದು ನೋಡಬೇಕಿದೆ.

    MORE
    GALLERIES