Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

bangladesh vs west indies: ಗೆಲುವಿಗೆ 395 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 110 ರನ್‌ ಗಳಿಸಿ ಸೋಲಿನ ಭೀತಿಯಲ್ಲಿತ್ತು.

First published:

  • 15

    Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

    ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ತಂಡ ಇತಿಹಾಸ ನಿರ್ಮಿಸಿದೆ. ಬಾಂಗ್ಲಾ ನೀಡಿದ 395 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಕೈಲ್ ಮೇಯರ್ಸ್ ವಿಂಡೀಸ್ ಪಡೆಗೆ ಗೆಲುವು ತಂದುಕೊಟ್ಟರು.

    MORE
    GALLERIES

  • 25

    Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

    ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ 430 ರನ್ ಗಳಿಸಿದರೆ, ವೆಸ್ಟ್ ಇಂಡೀಸ್​ ತಂಡವು ಕೇವಲ 259 ರನ್ ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನಿಂಗ್ಸ್​ನಲ್ಲಿ ಬಾಂಗ್ಲಾದೇಶ 8 ವಿಕೆಟ್‌ಗೆ 223 ರನ್ ಗಳಿಸುವ ಮೂಲಕ ಡಿಕ್ಲೇರ್ ಘೋಷಿಸಿತು.

    MORE
    GALLERIES

  • 35

    Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

    ಗೆಲುವಿಗೆ 395 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 110 ರನ್‌ ಗಳಿಸಿ ಸೋಲಿನ ಭೀತಿಯಲ್ಲಿತ್ತು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ಎಡಗೈ ಬ್ಯಾಟ್ಸ್​ಮನ್‌ ಕೈಲ್‌ ಮೇಯರ್ಸ್ ಬಾಂಗ್ಲಾ ಬೌಲರುಗಳ ಬೆಂಡೆತ್ತಿದರು.

    MORE
    GALLERIES

  • 45

    Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

    ಮೇಯರ್​ಗೆ ಸಾಥ್ ನೀಡಿದ ಬೋನರ್ 86 ರನ್​ಗಳ ಉತ್ತಮ ಕೊಡುಗೆ ನೀಡಿ ಔಟಾದರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಮೇಯರ್ 310 ಎಸೆತಗಳಲ್ಲಿ ಅಜೇಯ 210 ರನ್‌ ಬಾರಿಸುವ ಮೂಲಕ 7 ವಿಕೆಟ್ ನಷ್ಟದಲ್ಲಿ ಬೃಹತ್ ಗುರಿಯನ್ನು ಮುಟ್ಟಿತು.

    MORE
    GALLERIES

  • 55

    Kyle Mayers: ಚೊಚ್ಚಲ ಟೆಸ್ಟ್​ನಲ್ಲೇ ಇತಿಹಾಸ ನಿರ್ಮಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಮೇಯರ್ಸ್..!

    ಮೇಯರ್ ಅವರ ಅಜೇಯ 210 ರನ್​ಗಳ ಇನಿಂಗ್ಸ್​ನಲ್ಲಿ 20 ಬೌಂಡರಿ ಹಾಗೂ 7 ಸಿಕ್ಸರ್​ಗಳು ಮೂಡಿಬಂದಿದ್ದವು. ಅಲ್ಲದೆ ಚೊಚ್ಚಲ ಟೆಸ್ಟ್​ನ 4ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡರು.

    MORE
    GALLERIES