ಮತ್ತೊಂದು ಕ್ರಿಕೆಟ್ ತಂಡ ಖರೀದಿಸಲಿದ್ದಾರೆ ಶಾರುಖ್ ಖಾನ್..!
Shahrukh Khan: ಎರಡು ಪ್ರಮುಖ ಲೀಗ್ನಲ್ಲಿ 2 ತಂಡಗಳ ಮಾಲೀಕರಾಗಿರುವ ಶಾರುಖ್ ಇದೀಗ ಮೂರನೇ ಲೀಗ್ನತ್ತ ಮುಖ ಮಾಡಿದ್ದಾರೆ. ಅದು ಕೂಡ ಪ್ರಮುಖ ತಂಡದ ಫ್ರಾಂಚೈಸಿ ಪಡೆಯಲು ಎಂಬುದು ವಿಶೇಷ.
ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಇಂದು ಕೇವಲ ನಟನಾಗಿ ಉಳಿದಿಲ್ಲ. ಬದಲಾಗಿ ಯಶಸ್ವಿ ನಿರ್ಮಾಪಕರಾಗಿಯೂ ಮಿಂಚುತ್ತಿದ್ದಾರೆ. ಇದರೊಂದಿಗೆ ಕ್ರಿಕೆಟ್ ಜಗತ್ತಿಗೂ ಕಾಲಿಟ್ಟು ಅಲ್ಲೂ ಕೂಡ ಯಶಸ್ಸನ್ನು ಸಾಧಿಸಿದ್ದಾರೆ.
2/ 11
ಈಗಾಗಲೇ ಶಾರುಖ್ ಖಾನ್ ಕ್ರಿಕೆಟ್ ಜಗತ್ತಿನ ಎರಡು ತಂಡಗಳ ಒಡೆಯ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದರೆ, ಕೆರಿಬಿಯನ್ ಪೀಮಿಯನ್ ಲೀಗ್ನಲ್ಲಿ ಟ್ರಿಂಬಾಗೊ ನೈಟ್ ರೈಡರ್ಸ್ ತಂಡ ಫ್ರಾಂಚೈಸಿಯನ್ನು ಹೊಂದಿದ್ದಾರೆ.
3/ 11
ಹೀಗೆ ಎರಡು ಪ್ರಮುಖ ಲೀಗ್ನಲ್ಲಿ 2 ತಂಡಗಳ ಮಾಲೀಕರಾಗಿರುವ ಶಾರುಖ್ ಇದೀಗ ಮೂರನೇ ಲೀಗ್ನತ್ತ ಮುಖ ಮಾಡಿದ್ದಾರೆ. ಅದು ಕೂಡ ಪ್ರಮುಖ ತಂಡದ ಫ್ರಾಂಚೈಸಿ ಪಡೆಯಲು ಎಂಬುದು ವಿಶೇಷ.
4/ 11
ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಪರಿಚಯಿಸಲಿರುವ ದ ಹಂಡ್ರೆಡ್ ಕ್ರಿಕೆಟ್ ಲೀಗ್ನಲ್ಲಿ ತಂಡವೊಂದನ್ನು ಖರೀದಿಸಲು ಕಿಂಗ್ ಖಾನ್ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
5/ 11
ಶಾರುಖ್ ಖಾನ್ ಒಡೆತನದ ಸಂಸ್ಥೆಯು ಹಂಡ್ರೆಡ್ ಟೂರ್ನಿಯಲ್ಲಿ ಸಿದ್ಧವಾಗಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಈ ಲೀಗ್ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಒಂದು ತಂಡವನ್ನು ಕೆಕೆಆರ್ ಮಾಲೀಕ ತನ್ನದಾಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
6/ 11
ಸದ್ಯ ಹಂಡ್ರೆಡ್ ಟೂರ್ನಿಯನ್ನು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಮುಂದಿನ ವರ್ಷ ಚೊಚ್ಚಲ ಟೂರ್ನಿಯನ್ನು ಆಯೋಜಿಸಲು ಇಸಿಬಿ ನಿರ್ಧರಿಸಿದೆ. ಏನಿದು ದ ಹಂಡ್ರೆಡ್ ಟೂರ್ನಿ?
7/ 11
ದ ಹಂಡ್ರೆಡ್ ಟೂರ್ನಿಯಲ್ಲಿ ಒಂದು ಇನ್ನಿಂಗ್ಸ್ 100 ಎಸೆತಗಳಿರಲಿವೆ. 10 ಎಸೆತಗಳ ನಂತರ ಬ್ಯಾಟ್ಸ್ಮನ್ ಸ್ಟ್ರೈಕ್ ಬದಲಿಸಿಕೊಳ್ಳಬಹುದು.
8/ 11
ಒಬ್ಬ ಬೌಲರ್ ಸತತ 5 ಅಥವಾ 10 ಬೌಲ್ಗಳನ್ನು ಮಾಡಬಹುದು. ಹಾಗೆಯೇ ಒಂದು ಇನಿಂಗ್ಸ್ನಲ್ಲಿ ಒಬ್ಬ ಬೌಲರ್ಗೆ 20 ಎಸೆತಗಳು ಮಾತ್ರ ಇರಲಿದೆ.
9/ 11
ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್ಪ್ಲೇ ನೀಡಲಾಗುತ್ತದೆ. ಅದೇ ರೀತಿ ಬೌಲಿಂಗ್ ತಂಡಕ್ಕೆ ಎರಡೂವರೆ ನಿಮಿಷಗಳವರೆಗೆ ಸ್ಟ್ರಾಟೆಜಿಕ್ ಟೈಮ್ ಔಟ್ ಇರಲಿದೆ.
10/ 11
ಟಿ20 ಮಾದರಿಯಲ್ಲೇ ನಡೆಯಲಿರುವ ಈ ಟೂರ್ನಿಯನ್ನು ಪುರುಷ ಮತ್ತು ಮಹಿಳೆಯರಿಗಾಗಿ ಪತ್ಯೇಕ ಟೂರ್ನಿ ನಡೆಸಲು ಇಸಿಬಿ ನಿರ್ಧರಿಸಿದೆ.
11/ 11
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 17ರಿಂದ ಆಗಸ್ಟ್ 15ರ ವರೆಗೆ ದ ಹಂಡ್ರೆಡ್ ಹೆಸರಿನಲ್ಲಿ ಹೊಸ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಟೂರ್ನಿಯನ್ನು ಮುಂದೂಡಲಾಗಿದೆ.