ಟಿ20 ವಿಶ್ವಕಪ್ನಲ್ಲಿ ಸತತ ಗೆಲುವುಗಳ ಮೂಲಕ ಸೋಲಿಲ್ಲದ ಸರದಾರನಂತೆ ಸೆಮಿಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಅನಿರೀಕ್ಷಿತ ಸೋಲನುಭವಿಸಿತು. ಪಂದ್ಯದ ಬಹುತೇಕ ಭಾಗದಲ್ಲಿ ಹಿಡಿತ ಹೊಂದಿದ್ದ ಪಾಕಿಸ್ತಾನ ಕೊನೆಯ ಐದು ಓವರ್ಗಳಲ್ಲಿ ಎದುರಾಳಿಗಳ ಆಕ್ರಮಣಕ್ಕೆ ತುತ್ತಾಗಿ ಹೋಯಿತು. ಮ್ಯಾಥ್ಯೂ ವೇಡ್ ಅವರ ಅಬ್ಬರಕ್ಕೆ ಪಾಕಿಸ್ತಾನ ಸೋಲೊಪ್ಪಿತು. ಇನ್ನಿಂಗ್ಸ್ನ 19ನೇ ಓವರ್ನಲ್ಲಿ ಮ್ಯಾಥ್ಯೂ ವೇಡ್ ನೀಡಿದ ಕ್ಯಾಚನ್ನು ಬೌಂಡರಿ ಗೆರೆ ಬಳಿ ಹಸನ್ ಅಲಿ ಕೈಚೆಲ್ಲಿದ್ದರು. ಆ ಬಳಿಕ ವೇಡ್ ಸತತ ಮೂರು ಸಿಕ್ಸರ್ ಭಾರಿಸಿ ಆಸ್ಟ್ರೇಲಿಯಾಗೆ ರೋಚಕ ಗೆಲುವು ತಂದಿತ್ತರು. ಕ್ಯಾಚ್ ಕೈಚೆಲ್ಲಿದ ಹಸನ್ ಅಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗುತ್ತಿದ್ದಾರೆ. ಪಾಕ್ ಸೋಲಿಗೆ ಕಾರಣ ಎಂದು ಹತಾಶ ಅಭಿಮಾನಿಗಳು ದೂರುತ್ತಿದ್ದಾರೆ. ಹಸನ್ ಅಲಿ ಜೊತೆಗೆ ಆಕೆಯ ಪತ್ನಿ ಸಾಮಿಯಾ ಆರ್ಜೂ ಎಂಬಾಕೆಯನ್ನೂ ಟ್ರೋಲ್ ಮಾಡುತ್ತಿದ್ದಾರೆ.
ಹಸನ್ ಅಲಿ ಮ್ಯಾಥ್ಯೂ ವೇಡ್ ಕ್ಯಾಚನ್ನ ಕೈಚೆಲ್ಲಿದ್ದಕ್ಕೆ ಪಾಕಿಸ್ತಾನ ಸೋತಿತು. ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ಕೈತಪ್ಪಿತು ಎಂದು ಹಸನ್ ಅಲಿ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರು ಈ ಸೋಲಿಗೆ ಹಸನ್ ಅಲಿ ಕ್ಯಾಚ್ ಡ್ರಾಪ್ ಮಾಡಿದ್ದಷ್ಟೇ ಅಲ್ಲ ಬೇರೆ ಹಲವು ಕಾರಣಗಳಿವೆ. ಯಾರು ಯಾರನ್ನೂ ಗುರಿ ಮಾಡಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಅಜಂ ಹೇಳಿದ್ಧಾರೆ.