ನನ್ನ ಕಥೆ ವಿರಾಟ್ ಕೊಹ್ಲಿಗಿಂತ ಭಿನ್ನ: ನೋವು ತೋಡಿಕೊಂಡ ಯುವ ಆಟಗಾರ
Unmukt Chand: ಲೀಸ್ಟ್ ಎ ಕ್ರಿಕೆಟ್ನಲ್ಲಿ 121 ಪಂದ್ಯಗಳನ್ನಾಡಿರುವ 27ರ ಹರೆಯದ ಉನ್ಮುಕ್ತ್ ಚಂದ್ 4507 ರನ್ ಪೇರಿಸಿದ್ದಾರೆ. ಇದರಲ್ಲಿ 32 ಅರ್ಧಶತಕ ಮತ್ತು 7 ಶತಕಗಳು ಮೂಡಿ ಬಂದಿವೆ.
News18 Kannada | June 8, 2020, 4:17 PM IST
1/ 13
ಉನ್ಮುಕ್ತ್ ಚಂದ್ (Unmukt Chand). ಈ ಹೆಸರು ಸಖತ್ ಸದ್ದು ಮಾಡಿದ್ದು 2012ರಲ್ಲಿ. ಟೀಮ್ ಇಂಡಿಯಾ ಅಂಡರ್19 ತಂಡವನ್ನು ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ ಉನ್ಮುಕ್ತ್ ಒಂದೇ ದಿನಕ್ಕೆ ಹೀರೋ ಆಗಿದ್ದರು.
2/ 13
ಅದರಲ್ಲೂ ಉನ್ಮುಕ್ತ್ ಚಂದ್ ರನ್ನು ಭಾರತೀಯ ಕ್ರಿಕೆಟ್ನ ಉದಯೋನ್ಮುಖ ಆಟಗಾರ ಎಂದು ಬಣ್ಣಿಸಲಾಗಿತ್ತು. ಅಲ್ಲದೆ ಅಂಡರ್19 ವಿಶ್ವಕಪ್ ಮೂಲಕ ಬೆಳಕಿಗೆ ಬಂದ ವಿರಾಟ್ ಕೊಹ್ಲಿಗೆ ದೆಹಲಿಯ ಈ ಕ್ರಿಕೆಟಿಗನನ್ನು ಹೋಲಿಕೆ ಮಾಡಲಾಗಿತ್ತು.
3/ 13
ಏಕೆಂದರೆ ಕಿಂಗ್ ಕೊಹ್ಲಿ ಕೂಡ ಅಂಡರ್19 ವಿಶ್ವಕಪ್ ತಂಡದ ನಾಯಕನಾಗಿ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಹೀಗಾಗಿಯೇ ಉನ್ಮುಕ್ತ್ ಕೂಡ ಅದೇ ಹಾದಿಯಲ್ಲಿದ್ದಾರೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದರು.
4/ 13
ಆದರೆ ಹಿರಿಯ ಪುರುಷರ ತಂಡಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡದ ಮೊದಲ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಎಂಬ ಹಣೆಪಟ್ಟಿ ಇದೀಗ ಉನ್ಮುಕ್ತ್ ಚಂದ್ ಅವರ ಹೆಸರಿನಲ್ಲಿದೆ ಎಂಬುದೇ ವಾಸ್ತವ.
5/ 13
ಈ ಬಗ್ಗೆ ಇದೇ ಮೊದಲ ಬಾರಿ ಉನ್ಮುಕ್ತ್ ಮನಬಿಚ್ಚಿ ಮಾತನಾಡಿದ್ದಾರೆ. ಆಕಾಶ್ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ಕೆರಿಯರ್ ಬಗ್ಗೆ ಹಾಗೂ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.
6/ 13
ನಾನು ಜೂನಿಯರ್ ಕ್ರಿಕೆಟ್ನಿಂದಲೇ ಸತತ ಪ್ರರಿಶ್ರಮದೊಂದಿಗೆ ಬೆಳೆದು ಬಂದಿದ್ದೇನೆ. ವಿಶ್ವಕಪ್ ಗೆಲ್ಲುವುದು ಒಂದು ಕನಸು. ಹಾಗೆಯೇ 19 ವರ್ಷದೊಳಗಿನವರ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುವುದು ದೊಡ್ಡ ಸಾಧನೆ.
7/ 13
ನಾಲ್ಕು ವರ್ಷಗಳ ಹಿಂದೆ, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವುದು ಮತ್ತು ಕಪ್ ಗೆಲ್ಲುವುದನ್ನು ನಾನು ನೋಡಿದ್ದೆ. ಅದೇ ಗುರಿಯನ್ನು ಮುಟ್ಟುವುದು ಸುಲಭದ ಮಾತಾಗಿರಲಿಲ್ಲ. ನಮಗೆ ಟೀಮ್ ಇಂಡಿಯಾದ ಬಾಗಿಲು ತೆರೆಯುವುದು ಅಂಡರ್ 19 ಫರ್ಫಾಮೆನ್ಸ್ನಿಂದ ಎಂಬುದು ತಿಳಿದಿತ್ತು.
8/ 13
ಹೀಗಾಗಿ ನನಗೆ 19 ವರ್ಷದೊಳಗಿನವರ ವಿಶ್ವಕಪ್ ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್ನಲ್ಲಿ, ಭರ್ಜರಿ ಶತಕ (111 ರನ್) ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡೆ. ಅದರೊಂದಿಗೆ ಅಂಡರ್19 ವಿಶ್ವಕಪ್ನೊಂದಿಗೆ ಭಾರತಕ್ಕೆ ಮರಳಿದಾಗ ನಾಯಕನಿಗೆ ಅದ್ಭುತ ಸ್ವಾಗತ ಕೂಡ ಸಿಕ್ಕಿತು.
9/ 13
ಇದರ ಬೆನ್ನಲ್ಲೇ ಇಂಡಿಯಾ ಎ ತಂಡಕ್ಕೆ ಆಯ್ಕೆಯಾದೆ. 2013 ರಲ್ಲಿ ನ್ಯೂಜಿಲೆಂಡ್ ಎ, ಬಾಂಗ್ಲಾದೇಶ ಎ ವಿರುದ್ಧ ಎರಡು ವರ್ಷಗಳ ನಂತರ ತ್ರಿಕೋನ ಸರಣಿ ಜಯಿಸಿದೆವು. ಆದರೆ ಈ ಎಲ್ಲಾ ಸಾಧನೆಗಳ ಹೊರತಾಗಿಯೂ,ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ.
10/ 13
ನಾನು 2016 ರವರೆಗೆ ಇಂಡಿಯಾ ಎ ತಂಡದ ನಾಯಕನಾಗಿದ್ದೆ. ಉತ್ತಮವಾಗಿಯೇ ರನ್ ಗಳಿಸುತ್ತಿದ್ದೆ. ಕೆಲವು ಬಾರಿ ನನಗೆ 'ಸಿದ್ಧವಾಗಿರುವಂತೆ ಹೇಳುತ್ತಿದ್ದರು. ಮುಂದಿನ ಬಾರಿ ನಿಮ್ಮನ್ನು ಆರಿಸಿಕೊಳ್ಳುತ್ತೇವೆ' ಎಂದು ಹೇಳುತ್ತಿದ್ದರು. ಆದರೆ ಅದು ಯಾವುದೂ ನಡೆದಿರಲಿಲ್ಲ ಎಂದು ಉನ್ಮುಕ್ತ್ ತಿಳಿಸಿದರು.
11/ 13
ನಾನು ಉತ್ತಮವಾಗಿ ಆಡುತ್ತಿರುವ ಸಂದರ್ಭದಲ್ಲಿ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರು ಭಾರತಕ್ಕಾಗಿ ಆರಂಭಿಕರಾಗಿದ್ದರು. ಇದೇ ಸಮಯದಲ್ಲಿ ಉತ್ತಮ ಆರಂಭಿಕರ ಕೊರತೆ ಕೂಡ ಇತ್ತು. ಇದೇ ಅವಧಿಯಲ್ಲಿ ನಾನು ಫಾರ್ಮ್ ಕಳೆದುಕೊಂಡೆ. ಇದು ಕೂಡ ನನ್ನ ದುರಾದೃಷ್ಟ ಎಂದು ಉನ್ಮುಕ್ತ್ ಹೇಳಿದರು.
12/ 13
ನನ್ನ ಪಾಲಿಗೆ ಕ್ರಿಕೆಟ್ ಎಂಬುದು ಒಂದು ಪಯಣ. ಇಲ್ಲಿ ನನಗೆ ಟೀಮ್ ಇಂಡಿಯಾ ಕ್ಯಾಪ್ ಧರಿಸಲು ಸಾಧ್ಯವಾಗಿಲ್ಲ. ಆದರೆ ನಾನು ಅನೇಕ ಉತ್ತಮ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಈ ಪಯಣ ನಾನು ತಂಡದಲ್ಲಿ ಸ್ಥಾನ ಪಡೆಯುವುದರೊಂದಿಗೆ ಮುಗಿಸುವ ಭರವಸೆ ಇದೆ ಎಂಬು ಉನ್ಮುಕ್ತ ಚಂದ್ ತಿಳಿಸಿದರು.
13/ 13
ಲೀಸ್ಟ್ ಎ ಕ್ರಿಕೆಟ್ನಲ್ಲಿ 121 ಪಂದ್ಯಗಳನ್ನಾಡಿರುವ 27ರ ಹರೆಯದ ಉನ್ಮುಕ್ತ್ ಚಂದ್ 4507 ರನ್ ಪೇರಿಸಿದ್ದಾರೆ. ಇದರಲ್ಲಿ 32 ಅರ್ಧಶತಕ ಮತ್ತು 7 ಶತಕಗಳು ಮೂಡಿ ಬಂದಿವೆ. ಇನ್ನು ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಅವಕಾಶ ಸಿಕ್ಕರೂ ಮಿಂಚಲು ಯುವ ಆಟಗಾರ ವಿಫಲರಾಗಿದ್ದರು.