IND vs AUS: ರೋಹಿತ್-ಧವನ್ 3ನೇ ಏಕದಿನಕ್ಕೆ ಡೌಟ್; ಟೀಂ ಇಂಡಿಯಾ ಓಪನರ್ಗಳು ಯಾರು ಗೊತ್ತಾ?
1/ 14
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.
2/ 14
ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
3/ 14
ಆದರೆ, ಟೀಂ ಇಂಡಿಯಾ ಓಪನರ್ಗಳಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಇಂಜುರಿಗೆ ತುತ್ತಾಗಿರುವುದು ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ.
4/ 14
ನಿನ್ನೆಯ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್ನ ಶಾರ್ಟ್ ಪಿಚ್ ಎಸೆತದಲ್ಲಿ ಶಿಖರ್ ಧವನ್ ಎದೆಗೂಡಿಗೆ ಪೆಟ್ಟಾಗಿತ್ತು.
5/ 14
ಇನ್ನು ರೋಹಿತ್ ಶರ್ಮಾ ಬೌಂಡರಿ ಗೆರೆ ಬಳಿಕ ಫೀಲ್ಡಿಂಗ್ ಮಾಡುತ್ತಿರುವಾಗ ಚೆಂಡನ್ನು ತಡೆಯುವ ವೇಳೆ ಎಡಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.
6/ 14
ಹೀಗಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವಾದ ಶಿಖರ್ ಧವನ್ ಬದಲು ಯಜುವೇಂದ್ರ ಚಹಾಲ್ ಮತ್ತು ರೋಹಿತ್ ಬದಲು ಕೇದರ್ ಜಾಧವ್ ಫೀಲ್ಡಿಂಗ್ ಮಾಡಿದ್ದರು.
7/ 14
ಧವನ್ ಹಾಗೂ ರೋಹಿತ್ ಇಂಜುರಿ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಿದೆ. ನಾಳೆ ಬೆಂಗಳೂರು ಏಕದಿನ ಪಂದ್ಯದಲ್ಲಿ ಇವರಿಬ್ಬರು ಆಡುವ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
8/ 14
ಎಲ್ಲಾದರು ಇವರಿಬ್ಬರು ಆಡಲು ವಿಫಲರಾದರೆ, ಭಾರತ ಪರ ಓಪನರ್ಗಳಾಗಿ ಯಾರು ಕಣಕ್ಕಿಳಿಯಬಹುದು ಎಂಬುವುದನ್ನು ನೋಡುವುದಾದರೆ…
9/ 14
ಟೀಂ ಇಂಡಿಯಾ ಪರ ಒಬ್ಬ ಓಪನರ್ ಆಗಿ ಕೆ ಎಲ್ ರಾಹುಲ್ ಕಣಕ್ಕಿಳಿಯುವುದು ಪಕ್ಕ. ಆದರೆ, ಮತ್ತೊಬ್ಬ ಆಟಗಾರ ಯಾರು ಎಂಬುವುದೆ ದೊಡ್ಡ ಪ್ರಶ್ನೆಯಾಗಿದೆ.
10/ 14
ಹಾಗೆಲ್ಲಾದರು ಧವನ್-ರೋಹಿತ್ ನಾಳಿನ ಪಂದ್ಯಕ್ಕೆ ಅಲಭ್ಯರಾದರೆ ರಾಹುಲ್ ಜೊತೆ ಮನೀಶ್ ಪಾಂಡೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
11/ 14
ಪಾಂಡೆಗೆ ಈಗಾಗಲೇ ಓಪನರ್ ಆಗಿ ಬ್ಯಾಟ್ ಬೀಸಿದ ಅನುಭವ ಇದೆ. ರಣಜಿ ಪಂದ್ಯದಲ್ಲಿ ಕರ್ನಾಟಕ ಪರ ಇವರು ಅನೇಕ ಬಾರಿ ಆರಂಭಿಕರಾಗಿ ಆಟವಾಡಿದ್ದಾರೆ.
12/ 14
ಹೀಗಾಗಿ ಮನೀಶ್ ಪಾಂಡೆ ಹಾಗೂ ಕೆ ಎಲ್ ರಾಹುಲ್ ಅವರು ಧವನ್-ರೋಹಿತ್ ಬದಲು ಕಣಕ್ಕಿಳಿದರೆ ಅಚ್ಚರಿಯಿಲ್ಲ.
13/ 14
ರಾಜ್ಕೋಟ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ಗಳ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.
14/ 14
ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಅಂತಿಮ ಏಕದಿನ ನಿರ್ಣಾಯಕ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯ ನಿರಿಕ್ಷಿಸಲಾಗಿದೆ.
First published: