ಸ್ಟಾರ್ ಕ್ರಿಕೆಟಿಗ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಸಾವಿನಂಚಿನಿಂದ ಪಾರಾದ ವಿಂಡೀಸ್ ದೈತ್ಯ
Oshane Thomas: 2019 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ ಓಶಾನೆ ಥೋಮಸ್, ರಾಜಸ್ಥಾನ್ ರಾಯಲ್ಸ್ ತಂಡದ ಪರ 4 ಪಂದ್ಯಗಳಲ್ಲಿ ಕಣಕ್ಕಿಳಿದರು. ಬಳಿಕ ಇಂಜುರಿಗೆ ತುತ್ತಾದ ಪರಿಣಾಮ ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರಮುಖ ವೇಗಿ ಓಶಾನೆ ಥಾಮಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
2/ 10
ವೆಸ್ಟ್ ಇಂಡೀಸ್ನ ಜಮೈಕಾದ ಹೈವೇ 2000 ಸಮೀಪ ಭಾನುವಾರ ಈ ಘಟನೆ ಸಂಭವಿಸಿದೆ. ಆದರೆ ಥಾಮಸ್ಗೆ ಯಾವುದೆ ಅಪಾಯ ಉಂಟಾಗಿಲ್ಲ. ಈ ಮೂಲಕ ಥಾಮಸ್ ಸಾವಿನಂಚಿನಿಂದ ಪಾರಾಗಿದ್ದಾರೆ.
3/ 10
ಥಾಮಸ್ ಪ್ರಯಾಣಿಸುತ್ತಿದ್ದ ಆಡಿ ಕಾರು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
4/ 10
ಅಪಘಾತದ ಬಳಿಕ ಥಾಮಸ್ ಕಾರಿನಲ್ಲೇ ಇದ್ದರು. ಅವರು ಪ್ರಜ್ಞೆ ತಪ್ಪಿರಲಿಲ್ಲ. ತಕ್ಷಣವೇ ಅವರನ್ನು ಜಮೈಕಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
5/ 10
ಸದ್ಯ ಓಶಾನೆ ಅವರಿಗೆ ವಿಶ್ರಾಂತಿಯ ಅಗತ್ಯ ಇರುವ ಕಾರಣ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಫೆಬ್ರವರಿ 22 ರಿಂದ ಈ ಸರಣಿ ಆರಂಭವಾಗಲಿದೆ.
6/ 10
2018 ರಲ್ಲಿ ಥಾಮಸ್ ಟೀಂ ಇಂಡಿಯಾ ವಿರುದ್ಧ ಗುವಾಹಟಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಭಾರತದ 3 ವಿಕೆಟ್ ಕಿತ್ತು ಮಿಂಚಿದರು.
7/ 10
ಓಶಾನೆ ಈವರೆಗೆ ವೆಸ್ಟ್ ಇಂಡೀಸ್ ಪರ ಒಟ್ಟು 20 ಏಕದಿನ ಹಾಗೂ 10 ಅಂತರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದು, 36 ವಿಕೆಟ್ಗಳನ್ನು ಕಬಳಿಸಿದ್ದಾರೆ.
8/ 10
2019 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ ಓಶಾನೆ ಥಾಮಸ್ , ರಾಜಸ್ಥಾನ್ ರಾಯಲ್ಸ್ ತಂಡದ ಪರ 4 ಪಂದ್ಯಗಳಲ್ಲಿ ಕಣಕ್ಕಿಳಿದರು. ಬಳಿಕ ಇಂಜುರಿಗೆ ತುತ್ತಾದ ಪರಿಣಾಮ ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ.
9/ 10
2020 ಐಪಿಎಲ್ ಹರಾಜಿನಲ್ಲಿ 23 ವರ್ಷದ ಥಾಮಸ್ 50 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ.
10/ 10
ಓಶಾನ್ ಥಾಮಸ್ ಬೌಲಿಂಗ್ ವೈಖರಿ.
First published:
110