ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಪ್ರಕಟ: ಕಿಂಗ್ ಕೊಹ್ಲಿಗೆ ಭರ್ಜರಿ ಪೈಪೋಟಿ ನೀಡ್ತಿದ್ದಾರೆ ಸ್ಟಾರ್ ಬ್ಯಾಟ್ಸ್ಮನ್
ICC Test Player Rankings: ಅಂತರಾಷ್ಟ್ರೀಯ ಕ್ರಿಕೆಟ್ನ ಅತ್ಯುತ್ತಮ ಆಲ್ರೌಂಡರ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ 3ನೇ ಸ್ಥಾನ ಅಲಂಕರಿಸಿದರೆ, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೊದಲ ಸ್ಥಾನ ಪಡೆದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
2/ 9
ಈ ಹಿಂದೆ 2ನೇ ರ್ಯಾಕಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ 886 ಪಾಯಿಂಟ್ಗಳೊಂದಿಗೆ ದ್ವಿತೀಯ ಸ್ಥಾನದಲ್ಲೇ ಉಳಿದಿದ್ದಾರೆ. ಆದರೆ ಕೊಹ್ಲಿಗೆ ಭರ್ಜರಿ ಪೈಪೋಟಿ ನೀಡುವತ್ತ ನ್ಯೂಜಿಲೆಂಡ್ ನಾಯಕನ ಆಗಮನವಾಗಿದೆ.
3/ 9
ಹೌದು, ವೆಸ್ಟ್ ಇಂಡೀಸ್ ವಿರುದ್ದ 251 ರನ್ಗಳ ಭರ್ಜರಿ ಇನಿಂಗ್ಸ್ ಆಡಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಯಿಂಟ್ನಲ್ಲಿ (886) ಕೊಹ್ಲಿಯೊಂದಿಗೆ ಸಮಬಲ ಸಾಧಿಸಿರುವ ವಿಲಿಯಮ್ಸನ್ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
4/ 9
ಕೊಹ್ಲಿ-ವಿಲಿಯಮ್ಸನ್ ಪೈಪೋಟಿಯಿಂದಾಗಿ 3ನೇ ಸ್ಥಾನವನ್ನು ಕಾಯ್ದಿರಿಸಲಾಗಿದ್ದು, 4ನೇ ಸ್ಥಾನವನ್ನು ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಾಬುಶೇನ್ ಪಡೆದುಕೊಂಡಿದ್ದಾರೆ.
5/ 9
797 ಪಾಯಿಂಟ್ ಪಡೆದಿರುವ ಪಾಕ್ ತಂಡ ನಾಯಕ ಬಾಬರ್ ಆಜಂ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
6/ 9
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 793 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.
7/ 9
7ನೇ ಸ್ಥಾನದಲ್ಲಿ 766 ಅಂಕಗಳೊಂದಿಗೆ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಕಾಣಿಸಿಕೊಂಡಿದ್ದಾರೆ. ಇನ್ನು ಟಾಪ್ 10 ನಲ್ಲಿ ಟೀಮ್ ಇಂಡಿಯಾ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.
8/ 9
ಬೌಲರ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಏಕೈಕ ವೇಗಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಜಸ್ಪ್ರೀತ್ ಬುಮ್ರಾ 9ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಪ್ಯಾಟ್ ಕಮ್ಮಿನ್ಸ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.
9/ 9
ಅಂತರಾಷ್ಟ್ರೀಯ ಕ್ರಿಕೆಟ್ನ ಅತ್ಯುತ್ತಮ ಆಲ್ರೌಂಡರ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ 3ನೇ ಸ್ಥಾನ ಅಲಂಕರಿಸಿದರೆ, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೊದಲ ಸ್ಥಾನ ಪಡೆದಿದ್ದಾರೆ.