ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

First published:

 • 116

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  2019ರ ಕ್ರಿಕೆಟ್ ವಿಶ್ವಕಪ್ ಫೈನಲ್ ನ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿತ್ತು. ಈ ರೋಚಕ ಪಂದ್ಯದ ಬಳಿಕ ಅತೀ ಹೆಚ್ಚು ಸುದ್ದಿಯಾಗಿದ್ದು ವೇಗಿ ಜೋಫ್ರಾ ಆರ್ಚರ್.

  MORE
  GALLERIES

 • 216

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಏಕೆಂದರೆ ಫೈನಲ್ ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್​ ಮೂಲಕ ಇಂಗ್ಲೆಂಡ್ ಜಯಶಾಲಿಯಾಗಿತ್ತು. ಆದರೆ ಇದಕ್ಕೂ ವರ್ಷಗಳ ಮೊದಲೇ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಸೂಪರ್ ಓವರ್ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು.

  MORE
  GALLERIES

 • 316

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಆರಂಭದಲ್ಲಿ ಕಾಕತಾಳೀಯ ಎನ್ನಲಾಗಿದ್ದರೂ, ಆ ಬಳಿಕ ಜೋಫ್ರಾ ಮಾಡಿದ ಅನೇಕ ಟ್ವೀಟ್​ಗಳು ಅಚ್ಚರಿಗೆ ಕಾರಣವಾಗಿತ್ತು. 2015 ಜುಲೈ 5ರಂದು ಆರ್ಚರ್ ಮಾಡಿದ ಟ್ವೀಟ್ ಹೀಗಿತ್ತು.. 'ಸೂಪರ್ ಓವರ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ'. ವಿಶೇಷ ಎಂದರೆ 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಬೌಲಿಂಗ್ ಮಾಡಿದ್ದು ಆರ್ಚರ್.

  MORE
  GALLERIES

 • 416

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಹಾಗೆಯೇ 2013 ಎಪ್ರಿಲ್ 14ರಂದು ಆರ್ಚರ್ ಟ್ವೀಟ್​ನಲ್ಲಿ.. '6ಕ್ಕೆ 16' ಎಂದು ಬರೆಯಲಾಗಿತ್ತು. ಫೈನಲ್ ಪಂದ್ಯದ ಸೂಪರ್ ಓವರ್ ನಲ್ಲಿ 6 ಎಸೆತಗಳಲ್ಲಿ ನ್ಯೂಜಿಲೆಂಡ್​ಗೆ ಗುರಿ ಇದ್ದದ್ದು 16 ರನ್.

  MORE
  GALLERIES

 • 516

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಹೀಗೆ ಆರ್ಚರ್ ಮಾಡಿದ ಅನೇಕ ಟ್ವೀಟ್​ಗಳು ಕ್ರಿಕೆಟ್ ಅಂಗಳದಲ್ಲಿ ರಿಪೀಟ್ ಆಗಿದ್ದವು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಒಬ್ಬ ಬ್ಯಾಟ್ಸ್​ಮನ್​ಗಳ ಭವಿಷ್ಯವನ್ನು 2015 ರಲ್ಲಿ ಟ್ವೀಟ್​ನಲ್ಲಿ ತಿಳಿಸಿದ್ದರು ಆರ್ಚರ್.

  MORE
  GALLERIES

 • 616

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಇದು ಕಾಕತಾಳೀಯವೋ, ನಿಜವೋ ಎನ್ನುವಷ್ಟರಲ್ಲಿ ತಿಂಗಳುಗಳು ಉರುಳಿದವು. ಇದೀಗ ಮತ್ತೊಮ್ಮೆ ಜೋಫ್ರಾ ಆರ್ಚರ್ ಮಾಡಿರುವ ಟ್ವೀಟ್​ಗಳು ಸದ್ದು ಮಾಡಲಾರಂಭಿಸಿದೆ. ಅದು ಕೂಡ ಇಂಡಿಯಾದಲ್ಲಿ ಎಂಬುದು ವಿಶೇಷ.

  MORE
  GALLERIES

 • 716

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಕೊರೋನಾ ದೇಶಾದ್ಯಂತ ಆವರಿಸಲಿದೆ ಎಂದು ಯಾರಿಗೂ ಕೂಡ ಗೊತ್ತಿರಲಿಲ್ಲ. ಹಾಗೆಯೇ ಮಾರ್ಚ್ 23ರಂದು ದೇಶದ ಜನರಲ್ಲಿ ಪ್ರಧಾನಿ ಮೋದಿ ಅವರು ಲಾಕ್​ಡೌನ್ ಘೋಷಿಸುವುದಾಗಿ ತಿಳಿಸಿ ಎಲ್ಲರೂ ಮನೆಯಲ್ಲೇ ಉಳಿಯುವಂತೆ ಮನವಿ ಮಾಡಿದ್ದರು.

  MORE
  GALLERIES

 • 816

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಇತ್ತ ಅದಾಗಲೇ ಜೋಫ್ರಾ ಆರ್ಚರ್ 2017ರ ಅಕ್ಟೋಬರ್​ನಲ್ಲಿ ಮನೆಯಲ್ಲೇ ಮೂರು ವಾರ ಉಳಿಯುವುದು ಸಾಕಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದು ಕಾಕತಾಳೀಯ ಎನ್ನಲಾಗಿತ್ತು.

  MORE
  GALLERIES

 • 916

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಇದೀಗ ಮತ್ತೆ ಪ್ರಧಾನಿ ಮೋದಿ ಅವರು ಏಪ್ರಿಲ್ 5 ರಂದು ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಈ ಹೊತ್ತಲ್ಲಿ ದೀಪ ಬೆಳಗಿಸಿ ಎಂದು ವಿನಂತಿಸಿಕೊಂಡಿದ್ದಾರೆ.

  MORE
  GALLERIES

 • 1016

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಆದರೆ ಇದನ್ನೂ ಕೂಡ ಜೋಫ್ರಾ ಆರ್ಚರ್ 2014 ರಲ್ಲೇ ಟ್ವೀಟ್ ಮಾಡಿದ್ದರು  ಎಂಬುದೇ ಅಚ್ಚರಿ.  6 ವರ್ಷಗಳ ಹಿಂದೆ ಕ್ರಿಕೆಟಿಗ ಮಾಡಿದ  9 ಫ್ರಂ 9, ಬೆಳಕು ಹೊತ್ತಿಸಿ ಎಂಬಾರ್ಥದ ಟ್ವೀಟ್ ಇದೀಗ ಭಾರೀ ವೈರಲ್ ಆಗುತ್ತಿದೆ.

  MORE
  GALLERIES

 • 1116

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಇದಲ್ಲದೆ 2014 ರಲ್ಲಿ ಆರ್ಚರ್ ಮಾಡಿದ ಓಡಲು ಜಾಗವಿಲ್ಲದ ದಿನಗಳು ಬರಲಿದೆ ಎಂಬುದು ಕ್ರೀಡಾಪಟುಗಳಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಏಕೆಂದರೆ ಸದಾ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದ ಆಟಗಾರರು ಕೊರೋನಾದಿಂದ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಯಿತು.

  MORE
  GALLERIES

 • 1216

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಒಟ್ಟಿನಲ್ಲಿ ಜೋಫ್ರಾ ಆರ್ಚರ್ ಹಳೆಯ ಟ್ವೀಟ್​ಗಳು ಮತ್ತೊಮ್ಮೆ ಸಖತ್ ವೈರಲ್ ಆಗುತ್ತಿದ್ದು, ಈ ಆಟಗಾರ ನಿಜವಾಗಲೂ ಕಾಲಜ್ಞಾನಿಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

  MORE
  GALLERIES

 • 1316

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಐಪಿಎಲ್‌ನಲ್ಲಿ ಬಲಗೈ ಜೋಫ್ರಾ ಆರ್ಚರ್ ಒಟ್ಟು 21 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 26 ವಿಕೆಟ್ ಪಡೆದು ಮಿಂಚಿದ್ದಾರೆ. 2018 ರಲ್ಲಿ 10 ಪಂದ್ಯಗಳಿಂದ 15 ವಿಕೆಟ್ ಪಡೆದರೆ, 2019 ರಲ್ಲಿ ಆರ್ಚರ್ 11 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದರು.

  MORE
  GALLERIES

 • 1416

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಇದಲ್ಲದೆ ತಂಡಕ್ಕೆ ಅಗತ್ಯವಿದ್ದಾಗ ಬ್ಯಾಟಿಂಗ್ ಮೂಲಕ ಕೂಡ ಜೋಫ್ರಾ ಆರ್ಚರ್ ಉಪಯುಕ್ತ ಕಾಣಿಕೆ ನೀಡಿದ್ದರು.     2019 ರಲ್ಲಿ 400 ಓವರ್‌ ಮಾಡಿದ್ದರು?

  MORE
  GALLERIES

 • 1516

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಕುತೂಹಲಕಾರಿ ಸಂಗತಿಯೆಂದರೆ, ಜೋಫ್ರಾ ಆರ್ಚರ್ ಅವರು 2019 ರಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು 400 ಓವರ್‌ಗಳನ್ನು ಎಸೆದಿದ್ದರು. ಆರ್ಚರ್ 400.5 ಓವರ್‌ಗಳನ್ನು ಎಸೆದರೆ, ಎರಡನೇ ಸ್ಥಾನದಲ್ಲಿರುವ ಸ್ಟುವರ್ಟ್ ಬ್ರಾಡ್ 367.4 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇನ್ನು ಬೆನ್ ಸ್ಟೋಕ್ಸ್ 336.2, ಕ್ರಿಸ್ ವೋಕ್ಸ್ 299.4, ಮೊಯೀನ್ ಅಲಿ 231.2, ಸ್ಯಾಮ್ ಕರ್ರನ್ 201.5 ಮತ್ತು ಆದಿಲ್ ರಶೀದ್  201.5 ಓವರ್ ಮಾಡಿದ್ದಾರೆ.

  MORE
  GALLERIES

 • 1616

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಐಸಿಸಿ ವಿಶ್ವಕಪ್ 2019ನಲ್ಲಿ ಇಂಗ್ಲೆಂಡ್ ಗೆಲ್ಲುವಲ್ಲಿ ಆರ್ಚರ್ ಪ್ರಮುಖ ಪಾತ್ರವಹಿಸಿದ್ದರು. ಇದೇ ವೇಳೆ ಯುವ ಆಟಗಾರನಿಂದ ಹೆಚ್ಚಿನ ಬೌಲಿಂಗ್ ಮಾಡಿಸಲಾಗುತ್ತಿದೆ ಎಂಬ ದೂರುಗಳೂ ಕೂಡ ಕೇಳಿ ಬಂದಿತ್ತು. ಇದೀಗ ಗಾಯಗೊಂಡಿರುವುದರಿಂದ ಯಾವುದೇ ಟೂರ್ನಿಯಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

  MORE
  GALLERIES