ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

England vs West Indies 2020: ಯಾವುದೇ ಆಟಗಾರರು ಸರಣಿ ಮುಗಿಯುವವರೆಗೂ ಇತರರನ್ನು ಭೇಟಿಯಾಗುವುದಾಗಲಿ, ಬೇರೆ ಕಡೆ ಹೋಗುವುದಾಗಲಿ ಮಾಡುವಂತಿಲ್ಲ.

First published:

  • 19

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಕೊರೋನಾ ವೈರಸ್ ಭೀತಿ ನಡುವೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಟೆಸ್ಟ್​ ಸೋಲುಂಡಿದ್ದ ಆತಿಥೇಯ ಆಂಗ್ಲರ ತಂಡಕ್ಕೆ 2ನೇ ಪಂದ್ಯ ಆರಂಭಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದೆ.

    MORE
    GALLERIES

  • 29

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಹೌದು, ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್​ನ್ನು ಎರಡನೇ ಟೆಸ್ಟ್​ನಿಂದ ಕೈ ಬಿಡಲಾಗಿದೆ. ಹೀಗಾಗಿ ಇಂದಿನಿಂದ ಶುರುವಾಗಲಿರುವ ಎರಡನೇ ಟೆಸ್ಟ್​ನಲ್ಲಿ ಆರ್ಚರ್ ಕಣಕ್ಕಿಳಿಯುತ್ತಿಲ್ಲ.

    MORE
    GALLERIES

  • 39

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಆಟಗಾರರಿಗೆ ಸೂಚಿಸಲಾದ ಕೊರೋನಾ ನಿಯಮವನ್ನು ಉಲ್ಲಂಘಿಸಿದ್ದರಿಂದ ಪ್ರಮುಖ ವೇಗಿ ಜೋಫ್ರಾ ಆರ್ಚರ್​ನ್ನು ತಂಡದಿಂದ ಕೈ ಬಿಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

    MORE
    GALLERIES

  • 49

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಕೋವಿಡ್-19 ಭೀತಿ ನಡುವೆ ಸಂಪೂರ್ಣ ಸುರಕ್ಷತೆಯೊಂದಿಗೆ ಮತ್ತೆ ಕ್ರಿಕೆಟ್ ಆರಂಭಿಸಲಾಗಿತ್ತು. ​ ಸರಣಿಗೂ ಮುನ್ನ ಇಂಗ್ಲೆಂಡ್- ವೆಸ್ಟ್ ಇಂಡೀಸ್​ ತಂಡಗಳ ಆಟಗಾರರನ್ನು ಐಸೋಲೇಶನ್​ಗೆ ಒಳಪಡಿಸಲಾಗಿತ್ತು.

    MORE
    GALLERIES

  • 59

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಅಲ್ಲದೆ ಯಾವುದೇ ಆಟಗಾರರು ಸರಣಿ ಮುಗಿಯುವವರೆಗೂ ಇತರರನ್ನು ಭೇಟಿಯಾಗುವುದಾಗಲಿ, ಬೇರೆ ಕಡೆ ಹೋಗುವುದಾಗಲಿ ಮಾಡುವಂತಿಲ್ಲ. ಸಂಪೂರ್ಣ ಸುರಕ್ಷತೆಗಾಗಿ ಜೈವಿಕ ಸುರಕ್ಷತಾ ವಲಯವನ್ನು ರೂಪಿಸಲಾಗಿತ್ತು. ಹಾಗೆಯೇ ಈ ಬಗ್ಗೆ ಎಚ್ಚರವಹಿಸಲು ಆಟಗಾರರಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಲಾಗಿತ್ತು.

    MORE
    GALLERIES

  • 69

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಆದರೆ ಜೋಫ್ರಾ ಆರ್ಚರ್ ಮ್ಯಾಂಚೆಸ್ಟರ್​ಗೆ ಪ್ರಯಾಣಿಸುವ ಬ್ರಿಡ್ಜ್ ಟೌನ್​ನಲ್ಲಿರುವ ತಮ್ಮ ಫ್ಲಾಟ್​ಗೆ ಹೋಗಿ ಬಂದಿದ್ದರು. ಇದು ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಪತ್ತೆಯಾಗುತ್ತಿದ್ದಂತೆ ತಂಡದಿಂದ ಕೈ ಬಿಡಲಾಗಿದೆ.

    MORE
    GALLERIES

  • 79

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಕೊರೋನಾ ಸುರಕ್ಷತೆ ನಿಯಮ ಉಲ್ಲಂಘಿಸಿದಕ್ಕಾಗಿ ಮತ್ತೆ ಐದು ದಿನಗಳ ಕಾಲ ಐಸೋಲೇಶನ್​ಗೆ ಒಳಪಡಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಎರಡು ಬಾರಿ ಕೊರೋನಾ ಪರೀಕ್ಷೆ ನಡೆಯಲಿದ್ದು, 2 ಬಾರಿ ಕೂಡ ನೆಗೆಟಿವ್ ಬಂದರೆ ಮಾತ್ರ 13ರ ಬಳಗದಲ್ಲಿ ಸ್ಥಾನ ಪಡೆಯಬಹುದು.

    MORE
    GALLERIES

  • 89

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಇನ್ನು ತಾವು ಮಾಡಿರುವ ತಪ್ಪಿಗೆ ಕ್ಷಮೆಯಾಚಿಸಿರುವ ಜೋಫ್ರಾ, ನಾನು ಮಾಡಿದ ಒಂದು ಸಣ್ಣ ತಪ್ಪು ಇಡೀ ತಂಡ ಹಾಗೂ ಮ್ಯಾನೇಜ್​ಮೆಂಟ್​ನ್ನು ಅಪಾಯಕ್ಕೆ ಸಿಲುಕುವಂತೆ ಮಾಡಿದೆ. ಜೈವಿಕ ಸುರಕ್ಷತಾ ವಲಯದಲ್ಲಿರುವ ಪ್ರತಿಯೊಬ್ಬರಿಗೂ ನಾನು ಪ್ರಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

    MORE
    GALLERIES

  • 99

    ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!

    ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವುದು ನನಗೆ ತುಂಬಾ ನೋವುಂಟುಮಾಡಿದೆ. ವಿಶೇಷವಾಗಿ ಇಂತಹ ಸರಣಿ ವೇಳೆ. ನಾನು ಎರಡೂ ತಂಡಗಳನ್ನು ನಿರಾಸೆಯನ್ನುಂಟು ಮಾಡಿರುವೆ ಎಂದು ಭಾವಿಸುತ್ತೇನೆ, ಕ್ಷಮಿಸಬೇಕೆಂದು  ಸಹ ಆಟಗಾರರಲ್ಲಿ ಜೋಫ್ರಾ ಆರ್ಚರ್ ಮನವಿ ಮಾಡಿದ್ದಾರೆ.

    MORE
    GALLERIES