ಭಾರತದ ಪರ ಅನಿಲ್ ಕುಂಬ್ಳೆ (334) ನಂತರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ಶ್ರೀನಾಥ್ ಅವರು ಎರಡನೇ ಸ್ಥಾನವನ್ನು ಹೊಂದಿದ್ದಾರೆ. ಅವರು 315 ಏಕದಿನ ಮತ್ತು ಟೆಸ್ಟ್‌ನಲ್ಲಿ 236 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅತ್ಯುತ್ತಮ ಪಂದ್ಯಗಳ ಬಗ್ಗೆ ಚರ್ಚಿಸುವಾಗ ಶ್ರೀನಾಥ್ ಹೆಸರು ಕೇಳಿ ಬರುವುದು ವಿರಳ ಎಂದು ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಶಾನ್ ಪೊಲಾಕ್ ಬೇಸರ ವ್ಯಕ್ತಪಡಿಸಿದ್ದರು.