ಇನ್ನು ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 4ನೇ ಬೌಲರ್ ಎಂಬ ಗೌರವಕ್ಕೂ ಇಶಾಂತ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131) ಮತ್ತು ಹರ್ಭಜನ್ ಸಿಂಗ್ (101) ಬೌಲರುಗಳ ವಿಭಾಗದಲ್ಲಿ ನೂರು ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದರು. ಇದೀಗ ಈ ಸಾಧನೆಯನ್ನು ಮಾಡಿ 32ರ ಹರೆಯ ವೇಗಿ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
2007 ಮಾರ್ಚ್ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಇಶಾಂತ್ ಅವರು ಇತ್ತೀಚೆಗಷ್ಟೇ 300 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. 14 ವರ್ಷಗಳ ಟೀಮ್ ಇಂಡಿಯಾ ವೇಗದ ಬೌಲಿಂಗ್ನಲ್ಲಿ ಗುರುತಿಸಿಕೊಂಡಿರುವ ಇಶಾಂತ್ ಅವರ ಸಾಧನೆಯನ್ನು ಪರಿಗಣಿಸಿ ಮೊಟೇರಾ ಮೈದಾನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಸ್ಮರಣಾರ್ಥ ನೀಡಿ ಗೌರವಿಸಿದರು.