ಭಾರತ ಕ್ರಿಕೆಟ್ ತಂಡದ ಪರ ಅಂತರಾಷ್ಟ್ರೀಯ ಪಂದ್ಯವನ್ನು ಆಡಿ ಸರಿಯಾದ ವಿದಾಯ ಪಂದ್ಯ ಸಿಗದೆ ನಿವೃತ್ತಿಯಾದ ಆಟಗಾರರಿಗೆ ಸದ್ಯದಲ್ಲೆ ಪಂದ್ಯವೊಂದನ್ನು ಏರ್ಪಡಿಸಬೇಕೆಂದಯ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾನ್ ಹೇಳಿದ್ದಾರೆ.
2/ 11
ಯಾರಿಗೆಲ್ಲ ಸರಿಯಾದ ರೀತಿಯಲ್ಲಿ ವಿದಾಯ ಸಿಗಲಿಲ್ಲವೋ ಅಥವಾ ಯಾರಿಗೆ ಪಂದ್ಯ ಸಿಗದೆ ನಿವೃತ್ತಿ ಆಗಿದ್ದಾರೋ ಅಂತಹ ಆಟಗಾರರ ತಂಡವೊಂದನ್ನು ರಚಿಸಿದ್ದಾರೆ ಇರ್ಫಾನ್ ಪಠಾಣ್. ಅಲ್ಲದೆ ಇದರ ಕುರಿತು ಬಿಸಿಸಿಐಗೆ ಹೊಸ ಪ್ಲ್ಯಾನ್ ಕೂಡ ನೀಡಿದ್ದಾರೆ.
3/ 11
ಇತ್ತೀಚೆಗಷ್ಟೆ ಸ್ವಾತಂತ್ರ್ಯ ದಿನದಂದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೆ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ವಿದಾಯದ ಪಂದ್ಯ ನೀಡಬೇಕೆಂದು ಆಗ್ರಹಿಸಿದ್ದರು.
4/ 11
ಧೋನಿಗೆ ವಿದಾಯ ಪಂದ್ಯದ ಬಗ್ಗೆ ಮುನ್ನೆಲೆಗೆ ಬರುತ್ತಿದ್ದಂತೆ ಭಾರತ ತಂಡದಲ್ಲಿ ಆಡಿ ದೊಡ್ಡ ಹೆಸರು ಮಾಡಿದ್ದ ಎಲ್ಲಾ ದಿಗ್ಗಜರಿಗೂ ವಿದಾಯದ ಪಂದ್ಯ ನೀಡಬೇಕೆಂಬ ಚರ್ಚೆಗಳು ನಡೆಯುತ್ತಿವೆ.
5/ 11
ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಅವಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಹಾಗೂ ಮಾಜಿ ವೇಗಿ ಆಶಿಶ್ ನೆಹ್ರಾ ಸೇರಿದಂತೆ ಕೆಲ ಆಟಗಾರರಿಗೆ ವಿದಾಯದ ಪಂದ್ಯ ಸಿಕ್ಕಿತ್ತು.
6/ 11
ಆದರೆ, ಭಾರತೀಯ ಕ್ರಿಕೆಟ್ಗೆ ಅಭೂತಪೂರ್ವ ಕೊಡುಗೆ ನೀಡಿದ ಇನ್ನೂ ಹಲವು ದಿಗ್ಗಜರು ವಿದಾಯದ ಪಂದ್ಯವನ್ನು ಆಡದೆ ನಿವೃತ್ತಿ ನೀಡಿದ್ದಾರೆ.
7/ 11
ಹೀಗಿರುವಾಗಲೇ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡದ ನಡುವಿನ ಪಂದ್ಯ ಆಯೋಜಿಸಬೇಕೆಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
8/ 11
ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ.
9/ 11
ವಿದಾಯದ ಪಂದ್ಯವನ್ನು ಆಡದೆ ನಿವೃತ್ತಿ ಪಡೆದಿರುವವರಿಗೆ ಬೀಳ್ಕೊಡುಗೆ ಪಂದ್ಯದ ಬಗ್ಗೆ ಹಲವರು ಚರ್ಚೆ ನಡೆಸುತ್ತಿದ್ದಾರೆ. ನಿವೃತ್ತಿ ಪಡೆದಿರುವ ಆಟಗಾರರ ತಂಡ ಹಾಗೂ ಪ್ರಸ್ತುತ ಟೀಂ ಇಂಡಿಯಾ ನಡುವೆ ವಿದಾಯದ ಪಂದ್ಯದ ಜತೆಗೆ ಚಾರಿಟಿ ಪಂದ್ಯ ಏರ್ಪಡಿಸಿದರೆ ಹೇಗೆ? ಎಂದು ಇರ್ಫಾನ್ ಪಠಾಣ್ ಟ್ವಿಟರ್ನಲ್ಲಿ ಬರೆದಿದ್ದಾರೆ.
10/ 11
ಅಲ್ಲದೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಕೂಡ ಪ್ರಕಟಿಸಿದ್ದಾರೆ.
11/ 11
ಪಠಾಣ್ ಅವರ ಮಾಜಿ ಟೀಂ ಇಂಡಿಯಾ XI: ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಎಂ.ಎಸ್.ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಓಜಾ
First published:
111
ಮತ್ತೆ ಭಾರತೀಯ ಜೆರ್ಸಿ ತೊಡಲಿದ್ದಾರೆ ಧೋನಿ, ಯುವಿ, ದ್ರಾವಿಡ್ ಸೇರಿ ಈ ಸ್ಟಾರ್ ಆಟಗಾರರು?